ಅವರು ಪರಲೋಕದಲ್ಲಿರುವವಗಳ ನಿದರ್ಶನವೂ ಛಾಯೆಯೂ ಆಗಿರುವದರಲ್ಲಿ (ಆಲಯ ದಲ್ಲಿ) ಸೇವೆಯನ್ನು ನಡಿಸುವವರು. ಮೋಶೆಯು ದೇವರಿಂದ ಎಚ್ಚರಿಸಲ್ಪಟ್ಟು ಗುಡಾರವನ್ನು ಮಾಡುವದ ಕ್ಕಿದ್ದಾಗ--ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇ
ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶ ದೊಳಗಿಂದ ಕರಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾ ದದರಿಂದ ನಾನು ಅವರನ್ನು ಲಕ್ಷ್ಯಕ್ಕೆ ತರಲಿಲ್ಲ ಎಂದು ಕರ್ತನು ಹೇಳುತ್ತಾನೆ.
ಆ ದಿನಗಳ ತರುವಾಯ ನಾನು ಇಸ್ರಾಯೇಲ್ ಮನೆತನದ ವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು, ಅದೇನಂದರೆ--ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು; ಅವರ ಹೃದಯಗಳಲ್ಲಿ ಅವುಗಳನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರ
ಇದಲ್ಲದೆ ಪ್ರತಿ ಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದ ರನಿಗೂ--ಕರ್ತನನ್ನು ತಿಳಿದುಕೊಳ್ಳಿರಿ ಎಂದು ಉಪ ದೇಶಿಸುವದಿಲ್ಲ; ಯಾಕಂದರೆ ಚಿಕ್ಕವರಿಂದ ದೊಡ್ಡವರ ವರೆಗೂ ನನ್ನನ್ನು ಅರಿತುಕೊಳ್ಳುವರು.
ಇಲ್ಲಿ ಆತನು--ಹೊಸಒಡಂಬಡಿಕೆಯೆಂದು ಹೇಳಿದ್ದರಲ್ಲಿ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿ ದ್ದಾನೆ. ಅದು ಹಳೇದಾಗುತ್ತಾ ಕ್ಷೀಣವಾಗಿ ಇಲ್ಲದಂತಾ ಗುವದಕ್ಕೆ ಸಿದ್ಧವಾಗಿದೆ ಎಂದು ಹೇಳುತ್ತಾನೆ.