1
|
ಯಾಕೋಬನ ಜೊತೆಗೆ ಐಗುಪ್ತಕ್ಕೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲ್ ಮಕ್ಕಳ ಹೆಸರುಗಳು ಇವೇ: |
2
|
ರೂಬೇನ್ ಸಿಮೆಯೋನ್ ಲೇವಿ ಯೆಹೂದ |
3
|
ಇಸ್ಸಾಕಾರ್ ಜೆಬುಲೂನ್ ಬೆನ್ಯಾವಿಾನ್ |
4
|
ದಾನ್ ನಫ್ತಾಲಿ ಗಾದ್ ಆಶೇರ್. |
5
|
ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು. |
6
|
ಯೋಸೇಫನೂ ಅವನ ಸಹೋದರ ರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು. |
7
|
ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು. |
8
|
ಆಗ ಯೋಸೇಫನನ್ನು ಅರಿಯದ ಬೇರೊಬ್ಬನು ಐಗುಪ್ತಕ್ಕೆ ಅರಸನಾದನು. |
9
|
ಅವನು ತನ್ನ ಜನರಿಗೆ--ಇಗೋ, ಇಸ್ರಾಯೇಲ್ ಮಕ್ಕಳಾದ ಈ ಜನರು ನಮಗಿಂತ ಹೆಚ್ಚಿ ಬಲವುಳ್ಳವರಾಗಿದ್ದಾರೆ; |
10
|
ಬನ್ನಿ, ಅವರು ಹೆಚ್ಚಾಗದ ಹಾಗೆಯೂ ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು ನಮಗೆ ವಿರೋಧವಾಗಿ ಯುದ್ಧಮಾಡಿ ದೇಶವನ್ನು ಬಿಟ್ಟು ಹೋಗದ ಹಾಗೆಯೂ ಅವ ರೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸೋಣ ಎಂದು ಹೇಳಿದನು. |
11
|
ಆಗ ಅವರನ್ನು ತಮ್ಮ ಬಿಟ್ಟೀಕೆಲಸಗಳಿಂದ ಶ್ರಮೆಪಡಿಸುವ ಹಾಗೆ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು. |
12
|
ಆದರೆ ಇವರು ಅವರನ್ನು ಎಷ್ಟು ಶ್ರಮೆಪಡಿಸಿದರೋ ಅಷ್ಟು ಅಧಿಕ ವಾಗಿ ಅವರು ಹೆಚ್ಚಿ ಹರಡಿಕೊಂಡರು. ಐಗುಪ್ತ್ಯರು ಇಸ್ರಾಯೇಲ್ ಮಕ್ಕಳಿಗಾಗಿ ಸಂತಾಪಪಟ್ಟರು. |
13
|
ಆದ ದರಿಂದ ಐಗುಪ್ತ್ಯರು ಇಸ್ರಾಯೇಲನ ಮಕ್ಕಳಿಂದ ಕ್ರೂರವಾಗಿ ಸೇವೆ ಮಾಡಿಸಿಕೊಂಡರು. |
14
|
ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಯನ್ನು ಮಾಡುವ ಕೆಲಸದ ಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳ ಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವನ ವನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿ ಸಿದ ಎಲ್ಲಾ ಸೇವೆಯೂ ಕಠಿಣವಾಗಿತ್ತು. |
15
|
ಇದಲ್ಲದೆ ಐಗುಪ್ತದ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಇಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿದನು. |
16
|
ಅವನು ಅವರಿಗೆ--ನೀವು ಇಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವದಕ್ಕೆ ಹೆರಿಗೆಯ ಪೀಠದಲ್ಲಿ ಅವರನ್ನು ಪರಾಂಬ ರಿಸುವಾಗ ಗಂಡು ಮಗುವಾದರೆ ಅದನ್ನು ಕೊಂದು ಹಾಕಿರಿ, ಹೆಣ್ಣಾದರೆ ಬದುಕಲಿ ಎಂದು ಹೇಳಿದನು. |
17
|
ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತದ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು. |
18
|
ಆಗ ಐಗು ಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿಯಾಕೆ ಇಂಥ ಕೆಲಸವನ್ನು ಮಾಡಿ ಗಂಡು ಮಕ್ಕಳನ್ನು ಬದುಕಿ ಸಿದ್ದೀರಿ ಅಂದನು. |
19
|
ಅದಕ್ಕೆ ಅವರು--ಇಬ್ರಿಯರ ಸ್ತ್ರೀಯರು ಐಗುಪ್ತದ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯು ಅವರ ಹತ್ತಿರ ಬರುವದಕ್ಕೆ ಮುಂಚೆಯೇ ಹೆರುತ್ತಾರೆ ಅಂದರು. |
20
|
ಆದದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೇದನ್ನು ಮಾಡಿದನು. ಇದಲ್ಲದೆ ಜನರು ಹೆಚ್ಚಾಗಿ ಬಹು ಬಲಗೊಂಡರು. |
21
|
ಸೂಲಗಿತ್ತಿಯರು ದೇವರಿಗೆ ಭಯ ಪಟ್ಟದ್ದರಿಂದ ಆತನು ಅವರಿಗೆ ವಂಶಾಭಿವೃದ್ಧಿಯ ನ್ನುಂಟುಮಾಡಿದನು. |
22
|
ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು. |
Exodus 1:20 Kannada Language Bible Words basic statistical display
COMING SOON ...