ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ; ನೀವು ಒಳ್ಳೇದನ್ನು ಮಾಡುವದಾದರೆ ಯಾವ ಭೀತಿಗೂ ಗಾಬರಿ ಪಡುವದಿಲ್ಲ.
ಅದೇ ರೀತಿಯಾಗಿ ಪುರಷರೇ, ಸ್ತ್ರೀಯು ಬಲಹೀನ ಳೆಂಬದನ್ನು ತಿಳಿದು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಇರ್ರಿ. ಅವರು ಜೀವದ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.
ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿ ರೆಂದು ನಿಮಗೆ ತಿಳಿದದೆಯಲ್ಲಾ.
ಆದರೆ ದೇವರಾದ ಕರ್ತನನ್ನು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವ ದಿಂದಲೂ ಭಯದಿಂದಲೂ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರ್ರಿ;
ಒಳ್ಳೇಮನಸ್ಸಾಕ್ಷಿ ಯುಳ್ಳವರಾಗಿರ್ರಿ; ಆಗ ನೀವು ಕೆಟ್ಟದ್ದನ್ನು ಮಾಡುವವ ರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೆಪಡುವವರು.
ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.
ಆದರೆ ನೋಹನ ದಿನಗಳಲ್ಲಿ ನಾವೆಯನ್ನು ಕಟ್ಟುತ್ತಿರಲು ದೇವರ ದೀರ್ಘಶಾಂತಿಯು ಒಂದು ಸಾರಿ ಕಾದಿದ್ದಾಗ ಆತನಿಗೆ ಅವಿಧೇಯರಾ ಗಿದ್ದವರ ಬಳಿಗೆ ಹೋಗಿ ಆತನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೀರಿನ ಮೂಲಕ ರಕ್ಷಣೆ ಹೊಂದಿದರು.
ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; (ಅದು ಮೈಕೊಳೆಯನ್ನು ಹೋಗಲಾಡಿ ಸುವಂಥದ್ದಲ್ಲ. ಆದರೆ ದೇವರ ಕಡೆಗಿರುವ ನಮ್ಮ ಒಳ್ಳೇ ಮನಸ್ಸಾಕ್ಷಿಯ ಉತ್ತರವಾಗಿದೆ).