ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ [*ಯಜ್ಞವೇದಿಕೆ ಈ ಕೀರ್ತನೆಗಾರನು ಯಾಜಕನೂ ಲೇವಿಯನೂ ಆಗಿದ್ದಿರಬೇಕೆಂದು ಇದು ಸೂಚಿಸುತ್ತದೆ. ಜನರನ್ನು ಸಭೆ ಸೇರಿಸುವುದರಲ್ಲಿ ಇವನು ಕಾರ್ಯನಿರತನಾಗಿದ್ದಿರಬಹದು. (ವಚನ 12) ಯಾಜಕರು ಮತ್ತು ಲೇವಿಯರು ಮಾತ್ರ ಸೇವೆಮಾಡಬಹುದಾದ ದೇವಾಲಯದ ಸ್ಥಳದಲ್ಲಿ ಇವನು ಸೇವೆ ಮಾಡುತ್ತಿದ್ದಿರಬಹುದು. ವಚನದ ಈ ಭಾಗವನ್ನು “ನಾನು ಯಜ್ಞವೇದಿಕೆಯ ಸುತ್ತಲೂ ಜನರನ್ನು ಸೇರಿಸಲು ಸಾಧ್ಯವಾಗುವಂತೆ” ಎಂದು ಸಹ ಅನುವಾದಿಸಬಹುದು. ಈ ರೀತಿ ಅನುವಾದ ಮಾಡಿದರೆ, ಈ ಕೀರ್ತನೆಗಾರನು ತನ್ನನ್ನು ಶುದ್ಧೀಕರಿಸಿಕೊಳ್ಳುತ್ತಿದ್ದದ್ದು ಕೇವಲ ಆರಾಧಕನಾಗಿಯೇ ಹೊರತು ಯಾಜಕನಾಗಲ್ಲ ಎಂಬ ಅರ್ಥವನ್ನು ಕೊಡುತ್ತದೆ.] ಸುತ್ತಲೂ ನಡೆಯಲು ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.