1
|
ಹಾಗಾದರೆ ಯೆಹೂದ್ಯರಿಗಿರುವ ಪ್ರಾಧಾ ನ್ಯತೆ ಏನು? ಇಲ್ಲವೆ ಸುನ್ನತಿಯಿಂದ ಲಾಭವೇನು? |
2
|
ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು; ಮುಖ್ಯವಾಗಿ ದೈವೋಕ್ತಿಗಳು ಅವರಿಗೆ ಒಪ್ಪಿಸಲ್ಪಟ್ಟವು. |
3
|
ಕೆಲವರು ನಂಬದಿದ್ದರೆ ಏನು? ಅವರ ಅಪನಂಬಿಕೆಯು ದೇವರ ವಿಷಯವಾದ ನಂಬಿಕೆಯನ್ನು ನಿರರ್ಥಕ ಮಾಡುವದೋ? |
4
|
ಹಾಗೆ ಎಂದಿಗೂ ಆಗು ವದಿಲ್ಲ; ಹೌದು, ಎಲ್ಲಾ ಮನುಷ್ಯರು ಸುಳ್ಳುಗಾರ ರಾದರೂ ದೇವರು ಸತ್ಯವಂತನೇ ಸರಿ;ಯಾಕಂದರೆ--ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡಬೇಕೆಂತಲೂ ನಿನಗೆ ತೀರ್ಪಾದಾಗ ನೀನು ಗೆಲ್ಲಬೇಕೆಂತಲೂ ಬರೆದದೆ. |
5
|
ಆದರೆ ನಮ್ಮ ಅನೀತಿಯು ದೇವರ ನೀತಿಯನ್ನು ಪ್ರಸಿದ್ಧಿಪಡಿಸುವದಾದರೆ ನಾವು ಏನು ಹೇಳೋಣ? ಪ್ರತೀಕಾರ ಮಾಡುವ ದೇವರು ಅನೀತಿವಂತನೇನು? (ನಾನು ಮನುಷ್ಯನಂತೆ ಮಾತನಾಡುತ್ತೇನೆ). |
6
|
ಹಾಗೆ ಎಂದಿಗೂ ಹೇಳಬಾರದು; ದೇವರು ಲೋಕಕ್ಕೆ ಹೇಗೆ ನ್ಯಾಯತೀರಿಸುವನು? |
7
|
ನನ್ನ ಸುಳ್ಳಿನ ಮೂಲಕ ದೇವರ ವಿಷಯವಾದ ಸತ್ಯವು ಆತನ ಮಹಿಮೆಯನ್ನು ಹೆಚ್ಚಿಸು ವದಾದರೆ ನಾನು ಇನ್ನು ಪಾಪಿಯೆಂದು ಯಾಕೆ ತೀರ್ಪು ಹೊಂದಬೇಕು? |
8
|
(ದೂಷಿಸಲ್ಪಡುವ ಪ್ರಕಾರವಾಗಿ ಯೂ ನಾವು ಹೇಳುತ್ತೇವೆಂದು ಕೆಲವರು ಅನ್ನುವ ಪ್ರಕಾರವಾಗಿಯೂ)--ಒಳ್ಳೆಯದು ಬರುವ ಹಾಗೆ ನಾವು ಕೆಟ್ಟದ್ದನ್ನು ಮಾಡೋಣವೇ? ಅಂಥವರ ದಂಡ ನೆಯು ನ್ಯಾಯವಾಗಿದೆ. |
9
|
ಹಾಗಾದರೆ ಏನು? ನಾವು ಅವರಿಗಿಂತಲೂ ಉತ್ತಮರಾಗಿದ್ದೇವೋ? ಇಲ್ಲವೇ ಇಲ್ಲ; ಯಾಕಂದರೆ ಯೆಹೂದ್ಯರೂ ಅನ್ಯಜನರೂ ಎಲ್ಲರೂ ಪಾಪಕ್ಕೊಳಗಾಗಿದ್ದಾರೆಂದು ಮೊದಲೇ ನಾವು ಸ್ಥಾಪಿಸಿ ದ್ದೇವಲ್ಲಾ. |
10
|
ಬರೆದಿರುವ ಪ್ರಕಾರ--ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ; |
11
|
ತಿಳುವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನೂ ಇಲ್ಲ. |
12
|
ಎಲ್ಲರೂ ದಾರಿತಪ್ಪಿದವರಾಗಿ ಕೆಲಸಕ್ಕೆ ಬಾರದವರಾದರು, ಒಳ್ಳೆ ಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. |
13
|
ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ತಮ್ಮ ನಾಲಿಗೆಗಳಿಂದ ವಂಚಿಸುತ್ತಾರೆ; ಅವರ ತುಟಿಗಳ ಕೆಳಗೆ ಹಾವಿನ ವಿಷವಿದೆ. |
14
|
ಅವರ ಬಾಯಿ ಶಾಪದಿಂದಲೂ ವಿಷದಿಂದಲೂ ತುಂಬಿ ಅದೆ. |
15
|
ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರ ಪಡುತ್ತವೆ. |
16
|
ಅವರ ದಾರಿಗಳಲ್ಲಿ ನಾಶ ಸಂಕಟಗಳು ಉಂಟಾಗುತ್ತವೆ. |
17
|
ಅವರು ಸಮಾಧಾನದ ಮಾರ್ಗ ವನ್ನೇ ಅರಿತವರಲ್ಲ; |
18
|
ಅವರ ಕಣ್ಣೆದುರಿಗೆ ದೇವರ ಭಯವೇ ಇಲ್ಲ ಎಂಬವುಗಳೇ. |
19
|
ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು. |
20
|
ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ. |
21
|
ಈಗಲಾದರೋ ದೇವರ ನೀತಿಯು ನ್ಯಾಯ ಪ್ರಮಾಣವಿಲ್ಲದೆ ಪ್ರಕಟವಾಗಿದೆ. ಅದು ನ್ಯಾಯ ಪ್ರಮಾಣದಿಂದಲೂ ಪ್ರವಾದಿಗಳಿಂದಲೂ ಸಾಕ್ಷಿಗೊಂ ಡಿದೆ. |
22
|
ದೇವರಿಂದಾಗುವ ಆ ನೀತಿಯು ಯಾವ ದೆಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ. ನಂಬುವವರೆಲ್ಲರಿಗೆ ಮತ್ತು ಎಲ್ಲರ ಮೇಲೆಯೂ ದೊರ ಕುವಂಥದು. ಹೆಚ್ಚು ಕಡಿಮೆ ಏನೂ ಇಲ್ಲ; |
23
|
ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿ ದ್ದಾರೆ. |
24
|
ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು. |
25
|
ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ |
26
|
ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು. |
27
|
ಹಾಗಾದರೆ ಹೊಗಳಿಕೊಳ್ಳುವದು ಹೇಗೆ? ಅದು ಇಲ್ಲದೆ ಹೋಯಿತು. ಯಾವ ನಿಯಮದಿಂದ? ಕ್ರಿಯೆಗಳಿಂದಲೋ? ಅಲ್ಲ; ವಿಶ್ವಾಸ ನಿಯಮವನ್ನು ಅನುಸರಿಸುವದರಿಂದಲೇ. |
28
|
ಆದದರಿಂದ ನ್ಯಾಯ ಪ್ರಮಾಣದ ಕ್ರಿಯೆಗಳಿಲ್ಲದೆ ನಂಬಿಕೆಯಿಂದಲೇ ಮನು ಷ್ಯನು ನೀತಿವಂತನೆಂದು ನಿರ್ಣಯಿಸಲ್ಪಡುವನೆಂಬ ದಾಗಿ ನಾವು ತೀರ್ಮಾನಿಸಿಕೊಂಡಿದ್ದೇವಲ್ಲಾ. |
29
|
ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿ ದ್ದಾನೋ? ಅನ್ಯಜನಗಳಿಗೆ ಸಹ ದೇವರಲ್ಲವೇ? ಹೌದು, ಆತನು ಅನ್ಯಜನರಿಗೆ ಸಹ ದೇವರಾಗಿದ್ದಾನೆ; |
30
|
ದೇವರು ಒಬ್ಬನೇ ಆಗಿರಲಾಗಿ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸು ವದಕ್ಕೆ ಅವರ ನಂಬಿಕೆಯಿಂದಲೇ. ಸುನ್ನತಿಯಿಲ್ಲ ದವರನ್ನು ಹಾಗೆಯೇ ನಿರ್ಣಯಿಸುವದು ನಂಬಿಕೆಯ ಮೂಲಕವೇ. |
31
|
ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ. |
Romans 3:27 Kannada Language Bible Words basic statistical display
COMING SOON ...