1
|
ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು; |
2
|
ತೆರೆದಿದ್ದ ಒಂದು ಚಿಕ್ಕ ಪುಸ್ತಕವು ಅವನ ಕೈಯಲ್ಲಿ ಇತ್ತು; ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು |
3
|
ಸಿಂಹವು ಗರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟವು. |
4
|
ಆ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟಾಗ ನಾನು ಬರೆಯ ಬೇಕೆಂದಿದ್ದೆನು. ಅದಕ್ಕೆ--ಆ ಏಳು ಗುಡುಗುಗಳು ನುಡಿದವುಗಳನ್ನು ನೀನು ಬರೆಯದೆ ಮುದ್ರಿಸು ಎಂದು ಪರಲೋಕದಿಂದ ಬಂದ ಶಬ್ದವು ನನಗೆ ಹೇಳುವದನ್ನು ಕೇಳಿದೆನು. |
5
|
ಅನಂತರ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿದ್ದ ದೂತನನ್ನು ನಾನು ಕಂಡೆನು. ಅವನು ತನ್ನ ಕೈಯನ್ನು ಪರಲೋಕದ ಕಡೆಗೆ ಎತ್ತಿ-- |
6
|
ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಅದರಲ್ಲಿರುವವುಗಳನ್ನೂ ಸಮುದ್ರ ವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿ ಯುಗ ಯುಗಾಂತರಗಳಲ್ಲಿ ಜೀವಿಸುವಾತನ ಮೇಲೆ ಆಣೆ ಯಿಟ್ಟು ಇನ್ನು ಸಮಯವಿರುವದಿಲ್ಲ ಎಂತಲೂ |
7
|
ಏಳನೆಯ ದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವದಕ್ಕೆ ಪ್ರಾರಂಭಿಸು ವಾಗ ದೇವರ ರಹಸ್ಯವನ್ನು ತನ್ನ ಸೇವಕರಾದ ಪ್ರವಾದಿ ಗಳಿಗೆ ತಿಳಿಸಿದ್ದ ಪ್ರಕಾರ ಸಮಾಪ್ತಿಯಾಗತಕ್ಕದ್ದು ಎಂತಲೂ ಹೇಳಿದನು. |
8
|
ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ತಿರಿಗಿ ನನ್ನೊಂದಿಗೆ ಮಾತನಾಡಿ--ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ತೆರೆದಿದ್ದ ಆ ಚಿಕ್ಕ ಪುಸ್ತಕವನ್ನು ತೆಗೆದುಕೋ ಎಂದು ಹೇಳಿತು. |
9
|
ನಾನು ಆ ದೂತನ ಬಳಿಗೆ ಹೋಗಿ ಅವನಿಗೆ--ಆ ಚಿಕ್ಕ ಪುಸ್ತಕವನ್ನು ನನಗೆ ಕೊಡು ಎಂದು ಹೇಳಲು ಅವನು ನನಗೆ--ನೀನು ಇದನ್ನು ತೆಗೆದು ಕೊಂಡು ತಿಂದುಬಿಡು, ಇದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವದು ಎಂದು ಹೇಳಿ ದನು |
10
|
ಆಗ ನಾನು ಆ ಚಿಕ್ಕ ಪುಸ್ತಕವನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು. |
11
|
ಅವನು ನನಗೆ--ನೀನು ಅನೇಕ ಪ್ರಜೆ, ಜನಾಂಗ, ಭಾಷೆ ಮತ್ತು ರಾಜರುಗಳ ಮುಂದೆ ತಿರಿಗಿ ಪ್ರವಾದಿಸತಕ್ಕದ್ದು ಎಂದು ಹೇಳಿದನು. |
Revelation 10:7 Kannada Language Bible Words basic statistical display
COMING SOON ...