1
|
ಮೋಶೆಯು ಗುಡಾರವನ್ನು ನಿಲ್ಲಿಸಿಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ವಸ್ತುಗಳನ್ನೂ ಬಲಿಪೀಠವನ್ನೂ ಅದರ ಎಲ್ಲಾ ವಸ್ತು ಗಳನ್ನೂ ಅಭಿಷೇಕಿಸಿ ಪರಿಶುದ್ಧಮಾಡಿದ ಮೇಲೆ ಆದದ್ದೇನಂದರೆ-- |
2
|
ಇಸ್ರಾಯೇಲ್ಯರ ಪ್ರಧಾನರೂ ತಮ್ಮ ತಂದೆಗಳ ಮನೆಯ ಮುಖ್ಯಸ್ಥರೂ ಗೋತ್ರಗಳ ಮುಖ್ಯಾಧಿಕಾರಿಗಳೂ ಎಣಿಸಲ್ಪಟ್ಟವರ ಮೇಲೆ ಇದ್ದ ವರು ಅರ್ಪಿಸಿದರು. |
3
|
ಅವರು ಕರ್ತನ ಎದುರಿನಲ್ಲಿ ತಂದ ಅರ್ಪಣೆ ಏನಂದರೆ--ಆರು ಕಮಾನು ಬಂಡಿ ಗಳೂ ಹನ್ನೆರಡು ಎತ್ತುಗಳೂ ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯನ್ನೂ, ಒಬ್ಬೊಬ್ಬನಿಗೆ ಒಂದೊಂದು ಎತ್ತನ್ನೂ ಅವರು ಗುಡಾರದ ಮುಂದೆ ತಂದರು. |
4
|
ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ |
5
|
ಅವುಗಳನ್ನು ಅವರಿಂದ ತೆಗೆದುಕೋ, ಅವು ಸಭೆಯ ಗುಡಾರದ ಸೇವೆಮಾಡುವದಕ್ಕೋಸ್ಕರ ಇರಬೇಕು.ಅವುಗಳನ್ನು ಲೇವಿಯರಿಗೆ ಅವನವನ ಸೇವೆಯ ಪ್ರಕಾರ ಕೊಡಬೇಕು ಅಂದನು. |
6
|
ಆಗ ಮೋಶೆಯು ಆ ಬಂಡಿಗಳನ್ನೂ ಎತ್ತುಗಳನ್ನೂ ತೆಗೆದುಕೊಂಡು ಅವು ಗಳನ್ನು ಲೇವಿಯರಿಗೆ ಕೊಟ್ಟನು. |
7
|
ಎರಡು ಬಂಡಿ ಗಳನ್ನೂ ನಾಲ್ಕು ಎತ್ತುಗಳನ್ನೂ ಗೇರ್ಷೋನನ ಕುಮಾರರಿಗೆ ಅವರ ಸೇವೆಯ ಪ್ರಕಾರವಾಗಿ ಕೊಟ್ಟನು. |
8
|
ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ ಎಂಟು ಎತ್ತು ಗಳನ್ನೂ ಮೆರಾರೀಯ ಕುಮಾರರಿಗೆ ಅವರ ಸೇವೆಯ ಪ್ರಕಾರ ಕೊಟ್ಟನು. |
9
|
ಆದರೆ ಕೆಹಾತ್ಯರ ಕುಮಾರರಿಗೆ ಯಾವದನ್ನೂ ಕೊಡಲಿಲ್ಲ. ಅವರು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋಗುವದೇ ಪರಿಶುದ್ಧ ಸ್ಥಳದಲ್ಲಿ ಅವರಿಗೆ ಸಂಬಂಧಪಟ್ಟ ಸೇವೆಯಾಗಿತ್ತು. |
10
|
ಪ್ರಧಾನರು ಬಲೀಪೀಠದ ಪ್ರತಿಷ್ಠೆಗಾಗಿ ಅಭಿಷೇ ಕಿಸಿದ ದಿನದಲ್ಲಿ ಅದನ್ನು ಅರ್ಪಿಸಿದರು. ಪ್ರಧಾನರು ಬಲಿಪೀಠದ ಮುಂದೆ ತಮ್ಮ ಅರ್ಪಣೆಯನ್ನು ಅರ್ಪಿಸಿ ದರು. |
11
|
ಕರ್ತನು ಮೋಶೆಗೆ ಹೇಳಿದ್ದೇನಂದರೆ--ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿ ಪೀಠದ ಪ್ರತಿಷ್ಠೆಗಾಗಿ ತನ್ನ ಅರ್ಪಣೆಯನ್ನು ಅರ್ಪಿಸಬೇಕು. |
12
|
ಮೊದಲನೇ ದಿವಸದಲ್ಲಿ ತನ್ನ ಅರ್ಪಣೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅವ್ಮೆಾನಾ ದಾಬನ ಮಗನಾದ ನಹಶೋನನು. |
13
|
ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
14
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
15
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
16
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
17
|
ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾನಾ ದಾಬನ ಮಗನಾದ ನಹಶೋನನ ಅರ್ಪಣೆಯು. |
18
|
ಎರಡನೇ ದಿವಸದಲ್ಲಿ ಇಸ್ಸಾಕಾರನ ಪ್ರಧಾನ ನಾಗಿರುವ ಚೂವಾರನ ಮಗನಾದ ನೆತನೇಲನು ಅರ್ಪಿ ಸಿದನು. |
19
|
ಅವನು ಅರ್ಪಿಸಿದ ಅರ್ಪಣೆ ಏನಂದರೆ, ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
20
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
21
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
22
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯನ್ನೂ |
23
|
ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂವಾರನ ಮಗನಾದ ನೆತನೇಲನ ಅರ್ಪಣೆಯು. |
24
|
ಮೂರನೆ ದಿವಸದಲ್ಲಿ ಜೆಬುಲೂನನ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗನಾದ ಎಲೀಯಾಬನು ಅರ್ಪಿಸಿದ್ದು. ಅವನ ಅರ್ಪಣೆ ಏನಂದರೆ-- |
25
|
ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
26
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
27
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
28
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
29
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಹೇಲೋನನ ಮಗನಾದ ಎಲೀಯಾಬನ ಅರ್ಪಣೆಯು. |
30
|
ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು. |
31
|
ಅವನ ಅರ್ಪಣೆಯು ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
32
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. |
33
|
ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
34
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
35
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರು ಷದ ಐದು ಕುರಿಮರಿಗಳೂ. ಇದು ಶೆದೇಯೂರನ ಮಗನಾದ ಎಲೀಚೂರನ ಅರ್ಪಣೆಯು. |
36
|
ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು. |
37
|
ಅವನ ಅರ್ಪ ಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
38
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
39
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
40
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
41
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂರಿಷದ್ದೈ ಯನ ಮಗನಾದ ಶೆಲುವಿಾಯೇಲನ ಅರ್ಪಣೆಯು. |
42
|
ಆರನೇ ದಿನದಲ್ಲಿ ಗಾದನ ಮಕ್ಕಳಿಗೆ ಪ್ರಧಾನ ನಾಗಿರುವ ದೆಗೂವೇಲನ ಮಗನಾದ ಎಲ್ಯಾಸಾಫನು ಅರ್ಪಿಸಿದನು. |
43
|
ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
44
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
45
|
ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
46
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
47
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ದೆಗೂವೇಲನ ಮಗನಾದ ಎಲ್ಯಾಸಾಫನ ಅರ್ಪಣೆಯು. |
48
|
ಏಳನೇ ದಿನದಲ್ಲಿ ಎಫ್ರಾಯಾಮ್ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು. |
49
|
ಅವನ ಅರ್ಪಣೆ ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
50
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. |
51
|
ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
52
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
53
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಹೂದನ ಮಗನಾದ ಎಲೀಷಾಮನ ಅರ್ಪಣೆಯು. |
54
|
ಎಂಟನೇ ದಿನದಲ್ಲಿ ಮನಸ್ಸೆ ಮಕ್ಕಳಿಗೆ ಪ್ರಧಾನನಾದ ಪೆದಾಚೂರನ ಮಗನಾದ ಗವ್ಲೆಾ ಯೇಲ್ ಅರ್ಪಿಸಿದನು. |
55
|
ಅವನ ಅರ್ಪಣೆಯು ಏನಂದರೆ,--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
56
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
57
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
58
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
59
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಪೆದಾಚೂರನ ಮಗನಾದ ಗವ್ಲೆಾಯೇಲನ ಅರ್ಪಣೆಯು. |
60
|
ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು. |
61
|
ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. |
62
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
63
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
64
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
65
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಗಿದ್ಯೋನಿಯ ಮಗನಾದ ಅಬೀದಾನನ ಅರ್ಪಣೆಯು. |
66
|
ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು. |
67
|
ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. |
68
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
69
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
70
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
71
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನ ಅರ್ಪಣೆಯು. |
72
|
ಹನ್ನೊಂದನೆಯ ದಿನದಲ್ಲಿ ಆಶೇರನ ಮಕ್ಕಳಿಗೆ ಪ್ರಧಾನನಾದ ಒಕ್ರಾನನ ಮಗನಾದ ಪಗೀಯೇಲನು ಅರ್ಪಿಸಿದನು. |
73
|
ಅವನ ಆರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. |
74
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
75
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
76
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
77
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ ಇದು ಒಕ್ರಾನನ ಮಗನಾದ ಪಗೀ ಯೇಲನ ಅರ್ಪಣೆಯು. |
78
|
ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು. |
79
|
ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. |
80
|
ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, |
81
|
ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. |
82
|
ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ |
83
|
ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಏನಾನನ ಮಗನಾದ ಅಹೀರನ ಅರ್ಪಣೆಯು. |
84
|
ಇದು ಬಲಿಪೀಠದ ಪ್ರತಿಷ್ಠೆಯು: ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು ಬೆಳ್ಳಿಯ ಹನ್ನೆರಡು ತಟ್ಟೆಗಳೂ ಬೆಳ್ಳಿಯ ಹನ್ನೆರಡು ಬಟ್ಟಲುಗಳೂ ಬಂಗಾರದ ಹನ್ನೆರಡು ಚಮಚಗಳೂ. |
85
|
ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು ನೂರ ಮೂವತ್ತು ಶೇಕೆಲು. ಒಂದೊಂದು ಬಟ್ಟಲಿಗೆ ಎಪ್ಪತ್ತು, ಬೆಳ್ಳಿಯ ಎಲ್ಲಾ ವಸ್ತುಗಳಿಗೆ ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎರಡು ಸಾವಿರದ ನಾಲ್ಕು ನೂರು. |
86
|
ಧೂಪ ತುಂಬಿದ್ದ ಹನ್ನೆರಡು ಬಂಗಾರದ ಚಮಚಗಳು, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಒಂದೊಂದಕ್ಕೆ ಹತ್ತು, ಮತ್ತು ಚಮಚಗಳ ಬಂಗಾರವೆಲ್ಲಾ ನೂರ ಇಪ್ಪತ್ತು ಶೇಕೆಲ್; |
87
|
ದಹನ ಬಲಿಗಾಗಿ ಇರುವ ಹೋರಿಗಳು ಹನ್ನೆರಡು, ಟಗರು ಗಳು ಹನ್ನೆರಡು, ಮೊದಲನೇ ವರುಷದ ಕುರಿಮರಿಗಳು ಹನ್ನೆರಡು, ಅವುಗಳೊಂದಿಗೆ ಆಹಾರ ಸಮರ್ಪಣೆ; ಮತ್ತು ಪಾಪದ ಬಲಿಗಾಗಿ ಆಡುಮರಿಗಳು ಹನ್ನೆ ರಡು, |
88
|
ಸಮಾಧಾನದ ಅರ್ಪಣೆಯ ಬಲಿಗಾಗಿರುವ ಎತ್ತುಗಳೆಲ್ಲಾ ಇಪ್ಪತ್ತನಾಲ್ಕು, ಟಗರುಗಳು ಅರವತ್ತು, ಹೋತಗಳು ಅರವತ್ತು, ಮೊದಲನೇ ವರುಷದ ಕುರಿಮರಿಗಳು ಅರವತ್ತು. ಅದನ್ನು ಅಭಿಷೇಕಿಸಿದ ತರು ವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆಯು ಇದಾಗಿತ್ತು ಎಂಬದೇ. |
89
|
ಇದಲ್ಲದೆ ಮೋಶೆಯು ದೇವರ ಸಂಗಡ ಮಾತನಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿ ಸಿದಾಗ ಅವನು ಸಾಕ್ಷಿಯ ಮಂಜೂಷದ ಮೇಲೆ ಇರುವ ಕೃಪಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವವನ ಧ್ವನಿ ಯನ್ನು ಕೇಳಿದನು. ಹೀಗೆ ಆತನು ಅವನ ಸಂಗಡ ಮಾತನಾಡಿದನು. |
Numbers 7:1 Kannada Language Bible Words basic statistical display
COMING SOON ...