1
|
ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ -- |
2
|
ಲೇವಿಯ ಮಕ್ಕಳೊಳಗಿಂದ ಅವರ ತಂದೆಗಳ ಮನೆ ತನದ ಕುಟುಂಬಗಳ ಪ್ರಕಾರವಾಗಿ |
3
|
ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ. |
4
|
ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ. |
5
|
ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ |
6
|
ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. |
7
|
ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು. |
8
|
ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು. |
9
|
ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು. |
10
|
ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು. |
11
|
ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು. |
12
|
ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು. |
13
|
ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ |
14
|
ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು. |
15
|
ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ. |
16
|
ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು. |
17
|
ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ-- |
18
|
ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ. |
19
|
ಆದರೆ ಅವರು ಅತಿ ಪರಿಶುದ್ಧವಾ ದವುಗಳನ್ನು ಸವಿಾಪಿಸುವಾಗ ಅವರು ಸಾಯದೆ ಬದುಕುವ ಹಾಗೆ ಅವರಿಗೆ ಮಾಡಬೇಕಾದದ್ದೇ ನೆಂದರೆ--ಆರೋನನೂ ಅವನ ಕುಮಾರರೂ ಒಳಗೆ ಪ್ರವೇಶಿಸಿ ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಗೂ ನೇಮಿಸಬೇಕು. |
20
|
ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು. |
21
|
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- |
22
|
ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು. |
23
|
ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು. |
24
|
ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ-- |
25
|
ಅವರು ಗುಡಾರದ ತೆರೆಗಳನ್ನೂ ಸಭೆಯ ಗುಡಾರವನ್ನೂ ಅದರ ಹೊದಿಕೆ ಯನ್ನೂ ಅದರ ಮೇಲಿರುವ ಕಡಲು ಹಂದಿಯ ಚರ್ಮದ ಹೊದಿಕೆಯನ್ನೂ ಸಭೆಯ ಗುಡಾರದ ಬಾಗಲಿನ ತೆರೆಯನ್ನೂ |
26
|
ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಲಿನ ತೆರೆಯನ್ನೂ ಅವುಗಳ ಹಗ್ಗಗ ಳನ್ನೂ ಅವುಗಳ ಸೇವೆಯ ಎಲ್ಲಾ ವಸ್ತುಗಳನ್ನೂ ಹೊತ್ತು ಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು. |
27
|
ಆರೋನನೂ ಅವನ ಕುಮಾರರೂ ನೇಮಿಸುವ ಹಾಗೆಯೇ ಗೇರ್ಷೋನನ ಕುಮಾರರ ಸೇವೆಯೆಲ್ಲಾ ಅವರು ಹೊರತಕ್ಕದ್ದೆಲ್ಲವೂ ಮಾಡತಕ್ಕದ್ದೆಲ್ಲವೂ ಆಗಬೇಕು. ನೀವು ಅವರ ಸಮಸ್ತ ಹೊರೆಯನ್ನೂ ಅಪ್ಪಣೆಯ ಪ್ರಕಾರ ಅವರಿಗೆ ನೇಮಿಸ ಬೇಕು. |
28
|
ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ. |
29
|
ಮೆರಾರೀಯ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ಎಣಿಸಬೇಕು. |
30
|
ಮೂವತ್ತು ವರುಷವು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಸೇವೆಮಾಡುವ ದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು. |
31
|
ಸಭೆಯ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯು ಏನಂದರೆ, ಗುಡಾರದ ಹಲಿಗೆಗಳೂ ಅದರ ಅಡ್ಡ ತೊಲೆಗಳೂ ಕಂಬಗಳೂ ಕುಣಿಕೆಗಳೂ. |
32
|
ಸುತ್ತಲಿರುವ ಅಂಗಳದ ಕಂಬಗಳೂ ಕುಣಿಕೆಗಳೂ ಗೂಟಗಳೂ ಅವುಗಳ ಹಗ್ಗಗಳೂ ಎಲ್ಲಾ ವಸ್ತುಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯ ವಸ್ತುಗಳನ್ನು ನೀವು ಹೆಸರೆಸರಾಗಿ ಎಣಿಸ ಬೇಕು. |
33
|
ಮೆರಾರೀಯ ಕುಮಾರರ ಕುಟುಂಬಗಳ ಸೇವೆಯೂ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೇ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು. |
34
|
ಆಗ ಮೋಶೆಯೂ ಆರೋನನೂ ಸಭೆಯ ಮುಖ್ಯಸ್ಥರೂ ಕೆಹಾತಿಯರ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ |
35
|
ಮೂವತ್ತು ವರು ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದಲ್ಲಿ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು ಎಣಿಸಿ ದರು. |
36
|
ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಸಲ್ಪ ಟ್ಟವರು ಎರಡು ಸಾವಿರದ ಏಳು ನೂರ ಐವತ್ತು ಮಂದಿಯಾಗಿದ್ದರು. |
37
|
ಮೋಶೆಗೆ ಕರ್ತನು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸದ ಕೆಹಾತಿಯರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ. |
38
|
ಗೇರ್ಷೋನನ ಕುಮಾರರಲ್ಲಿ ಅವರ ಕುಟುಂಬ ಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪಟ್ಟವರು |
39
|
ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾ ರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನೂ |
40
|
ಅಂದರೆ ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪ ಟ್ಟವರು ಎರಡು ಸಾವಿರದ ಆರುನೂರ ಮೂವತ್ತು ಮಂದಿಯಾಗಿದ್ದರು. |
41
|
ಕರ್ತನ ಅಪ್ಪಣೆಯ ಹಾಗೆ ಮೋಶೆಯೂ ಆರೋನನೂ ಎಣಿಸಿದ ಗೇರ್ಷೋನನ ಕುಮಾರರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ. |
42
|
ಮೆರಾರೀಯ ಕುಮಾರರಲ್ಲಿ ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪಟ್ಟವರು; |
43
|
ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು |
44
|
ಅಂದರೆ ಅವರ ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಸಲ್ಪಟ್ಟವರು ಮೂರುಸಾವಿರದ ಇನ್ನೂರು ಮಂದಿಯಾಗಿದ್ದರು. |
45
|
ಮೋಶೆಗೆ ಕರ್ತನು ಅಪ್ಪಣೆಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸಿದ ಮೆರಾರೀಯ ಕುಮಾರರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಇವರೇ. |
46
|
ಮೋಶೆಯೂ ಆರೋನನೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದ ಸಮಸ್ತ ಲೇವಿಯರು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ |
47
|
ಮೂವತ್ತು ವರು ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕಾಗಿಯೂ ಹೊರುವದಕ್ಕಾಗಿಯೂ ಬರುವವರೆಲ್ಲರು |
48
|
ಅಂದರೆ ಅವರಲ್ಲಿ ಎಣಿಸಲ್ಪಟ್ಟವರು ಎಂಟು ಸಾವಿರದ ಐನೂರ ಎಂಭತ್ತು ಮಂದಿ. |
49
|
ಕರ್ತನು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ ಅವರವರ ಹೊರೆ ಗಾಗಿಯೂ ಅವರನ್ನು ಎಣಿಸಿದರು. |
Numbers 4:1 Kannada Language Bible Words basic statistical display
COMING SOON ...