1
|
ಆರು ದಿನಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಅವನ ಸಹೋದರನಾದ ಯೋಹಾನನನ್ನೂ ವಿಂಗಡವಾಗಿ ಕರಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು. |
2
|
ಅಲ್ಲಿ ಆತನು ಅವರ ಮುಂದೆ ರೂಪಾಂತರ ಗೊಂಡನು. ಆತನ ಮುಖವು ಸೂರ್ಯನಂತೆ ಪ್ರಕಾಶಿಸಿತು; ಮತ್ತು ಆತನ ಉಡುಪು ಬೆಳಕಿನಂತೆ ಬೆಳ್ಳಗಿತ್ತು. |
3
|
ಇಗೋ, ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಆತನ ಕೂಡ ಮಾತನಾಡು ತ್ತಿದ್ದರು. |
4
|
ಆಗ ಪೇತ್ರನು ಯೇಸುವಿಗೆ--ಕರ್ತನೇ, ಇಲ್ಲಿಯೇ ಇರುವದು ನಮಗೆ ಒಳ್ಳೇದು. ನಿನಗೆ ಮನಸ್ಸಿದ್ದರೆ ನಾವು ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆವು ಎಂದು ಹೇಳಿದನು. |
5
|
ಅವನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು; ಆಗ ಇಗೋ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ಈತನೇ; ಈತನ ಮಾತನ್ನು ನೀವು ಕೇಳಿರಿ ಎಂದು ಹೇಳುವ ಧ್ವನಿಯು ಮೇಘದೊಳಗಿಂದ ಉಂಟಾಯಿತು. |
6
|
ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು. |
7
|
ಆಗ ಯೇಸು ಬಂದು ಅವರನ್ನು ಮುಟ್ಟಿ--ಏಳಿರಿ, ಹೆದರಬೇಡಿರಿ ಎಂದು ಹೇಳಿದನು. |
8
|
ಅವರು ತಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ನೋಡಲಿಲ್ಲ. |
9
|
ಅವರು ಬೆಟ್ಟದಿಂದ ಇಳಿದು ಬರುತ್ತಿದ್ದಾಗ ಯೇಸು ಅವರಿಗೆ--ಮನುಷ್ಯಕುಮಾರನು ಸತ್ತವರೊಳಗಿಂದ ಎದ್ದು ಬರುವವರೆಗೆ ಈ ದರ್ಶನವನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಆಜ್ಞಾಪಿಸಿದನು. |
10
|
ಆಗ ಆತನ ಶಿಷ್ಯರು ಆತನಿಗೆ--ಎಲೀಯನು ಮೊದಲು ಬರುವದು ಅಗತ್ಯವೆಂದು ಶಾಸ್ತ್ರಿಗಳು ಯಾಕೆ ಹೇಳುತ್ತಾರೆ ಎಂದು ಕೇಳಿದರು. |
11
|
ಯೇಸು ಪ್ರತ್ಯುತ್ತರವಾಗಿ ಅವ ರಿಗೆ -- ಎಲೀಯನು ಮೊದಲು ಬಂದು ಎಲ್ಲವುಗಳನ್ನು ತಿರಿಗಿ ಯಥಾಸ್ಥಾನ ಪಡಿಸುವದು ನಿಜವೇ; |
12
|
ಆದರೆ ಎಲೀಯನು ಆಗಲೇ ಬಂದನು. ಮತ್ತು ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಕುಮಾರ ನು ಸಹ ಅವರಿಂದ ಶ್ರಮೆಯನ್ನು ಅನುಭವಿಸುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು. |
13
|
ಬಾಪ್ತಿಸ್ಮ ಮಾಡಿಸುವ ಯೋಹಾನನ ವಿಷಯದಲ್ಲಿ ಆತನು ತಮ್ಮೊಂದಿಗೆ ಮಾತನಾಡಿದನೆಂದು ಶಿಷ್ಯರು ಆಗ ಗ್ರಹಿಸಿಕೊಂಡರು. |
14
|
ಅವರು ಜನಸಮೂಹದ ಬಳಿಗೆ ಬಂದಾಗ ಒಬ್ಬ ಮನುಷ್ಯನು ಆತನ ಬಳಿಗೆ ಬಂದು ಮೊಣ ಕಾಲೂರಿ-- |
15
|
ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು; ಯಾಕಂದರೆ ಅವನು ಚಂದ್ರರೋಗ ದಿಂದ ಬಹಳವಾಗಿ ಕಷ್ಟಪಡುತ್ತಾನೆ, ಅನೇಕಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ. |
16
|
ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ಕರೆತಂದೆನು; ಅವರು ಅವನನ್ನು ಸ್ವಸ್ಥಮಾಡಲಾರದೆ ಹೋದರು ಎಂದು ಹೇಳಿದನು. |
17
|
ಆಗ ಯೇಸು ಪ್ರತ್ಯುತ್ತರ ವಾಗಿ--ನಂಬಿಕೆಯಿಲ್ಲದ ಓ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು. |
18
|
ಆಗ ಯೇಸು ದೆವ್ವವನ್ನು ಗದರಿಸಲಾಗಿ ಅದು ಅವನೊಳಗಿಂದ ಹೊರಟುಹೋಯಿತು; ಆಗ ಹುಡುಗನು ಆ ಗಳಿಗೆಯಲ್ಲಿಯೇ ಸ್ವಸ್ಥನಾದನು. |
19
|
ತರುವಾಯ ಶಿಷ್ಯರು ವಿಂಗಡವಾಗಿ ಯೇಸುವಿನ ಬಳಿಗೆ ಬಂದು--ಅದನ್ನು ಬಿಡಿಸುವದಕ್ಕೆ ನಮಗೆ ಯಾಕೆ ಆಗಲಿಲ್ಲ ಎಂದು ಕೇಳಿದರು. |
20
|
ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ. |
21
|
ಪ್ರಾರ್ಥನೆ ಉಪವಾಸಗಳಿಂದಲ್ಲದೆ ಈ ತರವಾದದ್ದು ಹೊರಟು ಹೋಗುವದಿಲ್ಲ ಅಂದನು. |
22
|
ಅವರು ಗಲಿಲಾಯಲ್ಲಿ ಇನ್ನೂ ವಾಸವಾಗಿದ್ದಾಗ ಯೇಸು ಅವರಿಗೆ--ಮನುಷ್ಯಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು. |
23
|
ಅವರು ಆತನನ್ನು ಕೊಲ್ಲುವರು; ಇದಲ್ಲದೆ ಮೂರನೇ ದಿನದಲ್ಲಿ ಆತನು ತಿರಿಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದಕ್ಕೆ ಅವರು ಬಹಳ ದುಃಖಪಟ್ಟರು. |
24
|
ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು. |
25
|
ಅವನು ಮನೆ ಯೊಳಕ್ಕೆ ಬಂದಾಗ ಯೇಸು ಮುಂದಾಗಿ ಅವನಿಗೆ--ಸೀಮೋನನೇ, ನಿನಗೆ ಹೇಗೆ ತೋರುತ್ತದೆ? ಭೂಲೋ ಕದ ರಾಜರು ಯಾರಿಂದ ಕಪ್ಪವನ್ನು ಇಲ್ಲವೆ ತೆರಿಗೆ ಯನ್ನು ತಕ್ಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ ಇಲ್ಲವೆ ಅನ್ಯರಿಂದಲೋ ಎಂದು ಕೇಳಿದನು. |
26
|
ಪೇತ್ರನು ಆತನಿಗೆ-- ಅನ್ಯರಿಂದ ಎಂದು ಹೇಳಲಾಗಿ ಆತನು ಅವನಿಗೆ--ಹಾಗಾದರೆ ಮಕ್ಕಳು ಸ್ವತಂತ್ರರೇ. |
27
|
ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ |
Matthew 17:5 Kannada Language Bible Words basic statistical display
COMING SOON ...