1
|
ಎರಡನೇ ಚೀಟು ಸಿಮೆಯೋನನಿಗೆ ಬಿತ್ತು. ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರವಾಯಿತು. ಅವರ ಬಾಧ್ಯತೆ ಯೂದನ ಮಕ್ಕಳ ಬಾಧ್ಯೆತೆಯ ಮಧ್ಯದಲ್ಲಿತ್ತು. |
2
|
ಅವರ ಬಾಧ್ಯತೆಯಲ್ಲಿ ಸೇರಿದ ಪಟ್ಟಣಗಳು ಯಾವವಂದರೆ: ಬೇರ್ಷೆಬ, ಶೆಬ, ಮೋಲಾದಾ, |
3
|
ಹಚರ್ಷೂವಾಲ್, ಬಾಲಾ, ಎಚೆಮ್, |
4
|
ಎಲ್ತೋಲದ್, ಬೆತೂಲ್, ಹೋರ್ಮಾ, |
5
|
ಚಿಕ್ಲಗ್, ಬೇರ್ತ್ಮ್ಕಾಬೋತ್, ಹಚರ್ಸೂಸಾ, |
6
|
ಭೇತ್ಲೆ ಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಅವುಗಳ ಗ್ರಾಮಗಳು |
7
|
ಆಯಿನ್, ರಿಮ್ಮೋನ್, ಏತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು; |
8
|
ಈ ಪಟ್ಟಣಗಳ ಸುತ್ತಲೂ ಬಾಲತ್ಬೇರಿನ ವರೆಗೂ ದಕ್ಷಿಣದಲ್ಲಿರುವ ರಾಮ ವರೆಗೂ ಇರುವ ಎಲ್ಲಾ ಗ್ರಾಮಗಳ ಸಹಿತವಾಗಿ ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬ ಗಳ ಪ್ರಕಾರ ಸಿಕ್ಕ ಬಾಧ್ಯತೆಯಾಗಿತ್ತು. |
9
|
ಸಿಮೆಯೋನನ ಮಕ್ಕಳ ಬಾಧ್ಯತೆ ಯೂದನ ಮಕ್ಕಳ ಭಾಗದಲ್ಲಿ ಇತ್ತು. ಯಾಕಂದರೆ ಯೂದನ ಮಕ್ಕಳ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ ಸಿಮೆಯೋನನ ಮಕ್ಕಳಿಗೆ ಅವರ ಭಾಗದಲ್ಲಿ ಬಾಧ್ಯತೆ ಉಂಟಾಯಿತು. |
10
|
ಮೂರನೇ ಚೀಟು ಬಿದ್ದ ಭಾಗ ಜೆಬುಲೂನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಅವರ ಬಾಧ್ಯತೆಯ ಮೇರೆ ಸಾರೀದಿನ ವರೆಗೂ ಆಯಿತು. |
11
|
ಅಲ್ಲಿಂದ ಸಮುದ್ರದ ಕಡೆಗೆ ಹೋಗಿ ಮರ್ಗಲಾಕ್ಕೆ ಏರಿ ದಬ್ಬೆಷೆತಿಗೆ ಹೋಗಿ ಯೊಕ್ನೆಯಾಮಿಗೆ ಎದುರಾದ ನದಿಗೆ ಮುಗಿಯುವದು. |
12
|
ಅದು ಸಾರೀದಿನಿಂದ ಮೂಡಣ ಸೂರ್ಯನು ಉದಯಿಸುವ ಕಡೆಯಿಂದ ಕಿಸ್ಲೋತ್ತ್ತಾಬೋರಿನ ಮೇರೆಗೆ ತಿರುಗಿ ಅಲ್ಲಿಂದ ದಾಬೆರತಿಗೆ ಹೊರಟು ಯಾಫೀಯಕ್ಕೆ ಹೋಗಿ |
13
|
ಅಲ್ಲಿಂದ ಪೂರ್ವ ದಿಕ್ಕಿನಲ್ಲಿರುವ ಗತ್ಹೇಫೆರನ್ನು ಎತ್ಕಾಚೀನನ್ನು ದಾಟಿ, ರಿಮ್ಮೊಮೆತೋರದ ವರೆಗೂ ನೇಯಕ್ಕೂ ಹಾದು |
14
|
ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಹೇಲಿನ ಹಳ್ಳದ ತಗ್ಗಿಗೆ ಮುಗಿಯುವದು. |
15
|
ಈ ಮೇರೆಯಲ್ಲಿರುವ ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಮೊದಲಾದ ಹನ್ನೆರಡು ಪಟ್ಟಣ ಗಳು ಅವುಗಳ ಗ್ರಾಮಗಳ ಸಹಿತವಾಗಿ |
16
|
ಜೆಬುಲೂ ನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು. |
17
|
ನಾಲ್ಕನೇ ಚೀಟು ಇಸ್ಸಾಕಾರನಿಗೆ ಬಿತ್ತು. ಇಸ್ಸಾಕಾರನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ |
18
|
ಅವರ ಮೇರೆಯು ಇಜ್ರೇಲಿಗೆ ಎದುರಾದ ಕೆಸುಲ್ಲೋತ್, ಶೂನೇಮ್, |
19
|
ಹಫಾರಯಿಮ್, ಶೀಯೋನ್, ಅನಾಹರತ್, |
20
|
ರಬ್ಬೀತ್, ಕಿಷ್ಯೋನ್, ಎಬೆಜ್, |
21
|
ರೆಮೆತ್, ಏಂಗನ್ನೀಮ್, ಏನ್ಹದ್ದಾ, ಬೇತ್ಪಚ್ಚೇಚ್ ಎಂಬ ತೀರಗಳನ್ನು ಸುತ್ತಿ ಅಲ್ಲಿಂದ |
22
|
ತಾಬೋಗೆರ್ ಹೊರಟು ಶಹಚೀಮಾ. ಬೇತ್ಷೆಮೆಷ್ಗೆ ಸೇರಿ ಯೊರ್ದನಿಗೆ ಮುಗಿಯುವದು; ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು; |
23
|
ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರಿಗೆ ಉಂಟಾದ ಬಾಧ್ಯತೆಯು. |
24
|
ಐದನೇ ಚೀಟು ಆಶೇರನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರಬಿತ್ತು. |
25
|
ಅವರ ಮೇರೆ ಯಾವವಂದರೆ ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್ |
26
|
ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣ ಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲಿಗೂ ಶೀಹೋರ್ಲಿಬ್ನತ್ಗೂ ಹೋಗಿ |
27
|
ಅಲ್ಲಿಂದ ಸೂರ್ಯೋದಯದ ಕಡೆ ಬೇತ್ದಾಗೋನಿಗೆ ಉತ್ತರ ಜೆಬುಲೂನಿಗೂ ಬೇತ್ ಏಮೆಕ್ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಹೇಲಿನ ತಗ್ಗಿಗೂ ವೆಗೀಯೇಲಿಗೂ ಹಾದು ಎಡಭಾಗದಲ್ಲಿರುವ ಕಾಬೂಲಿಗೂ |
28
|
ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು |
29
|
ರಾಮಕ್ಕೆ ಹೋಗಿ ತೂರ್ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು. |
30
|
ಅದಕ್ಕೆ ಉಮ್ಮಾ, ಅಫೇಕ್ ರೆಹೋಬ್ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ. |
31
|
ಇದೇ ಆಶೇರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ಬಾಧ್ಯತೆಯಾಗಿದ್ದವು. |
32
|
ಆರನೇ ಚೀಟು ನಫ್ತಾಲಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು. |
33
|
ಅವರ ಮೇರೆಯು ಹೆಲೇಫಿನಿಂದ ಅಲ್ಲೋನಿನಿಂದ ಚಾನನ್ನಿಮ್, ಅದಾಮಿ, ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮಿನವರೆಗೂ ಹೋಗಿ ಯೊರ್ದನಿಗೆ ಮುಗಿಯು ವದು. |
34
|
ಆ ಮೇರೆಯು ಪಶ್ಚಿಮಕ್ಕೆ ಅಜ್ನೊತ್ ತಾಬಾರಿಗೆ ತಿರುಗಿ ಅಲ್ಲಿಂದ ಹುಕ್ಕೋಕಿಗೆ ಹೊರಟು ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನನ್ನೂ ಸೂರ್ಯೋದಯದ ದಿಕ್ಕಿನಲ್ಲಿ ಯೊರ್ದನಿನ ಬಳಿಯ ಲ್ಲಿರುವ ಯೂದವನ್ನೂ ಮುಟ್ಟಿ ಬರುವದು. |
35
|
ಇದರಲ್ಲಿ ರುವ ಕೋಟೆಗಳುಳ್ಳ ಪಟ್ಟಣಗಳು ಯಾವವಂದರೆ, ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್ |
37
|
ಕೆದೆಷ್, ಎದ್ರೈ, ಎನ್ಹಾಚೊರ್, |
38
|
ಇರೋನ್, ಮಿಗ್ದಲೇಲ್, ಹೊರೇಮ್, ಬೇತ್ಷೆಮೆಷೆ ಬೆತನಾತ್ ಮೊದಲಾದ ಹತ್ತೊಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳೂ |
39
|
ಇದೇ ನಫ್ತಾಲಿಯ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ದೊರೆತ ಬಾಧ್ಯತೆಯಾಗಿದೆ. |
40
|
ಇದಲ್ಲದೆ ಏಳನೇ ಚೀಟು ದಾನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು. |
41
|
ಅವರ ಬಾದ್ಯತೆಯ ಮೇರೆಯು ಚೋರಾ, ಎಷ್ಟಾವೋಲ್, ಈರ್ಷೆಮೆಷ್ |
42
|
ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ, |
43
|
ಏಲೋನ್, ತಿಮ್ನಾ, ಎಕ್ರೋನ್, |
44
|
ಎಲ್ತೆಕೇ, ಗಿಬ್ಬೆತೋನ್, ಬಾಲತ್, |
45
|
ಯೆಹುದ್, ಬೆನೇಬೆರಕ್, ಗತ್ಮ್ಮೋನ್, |
46
|
ಮೇಯರ್ಕೋನ್, ರಕ್ಕೋನ್ ಎಂಬ ಪಟ್ಟಣಗಳು. ಯೊಪ್ಪಕ್ಕೆ ಎದುರಾದ ಮೇರೆಯು ಸಹ. |
47
|
ಇದಲ್ಲದೆ ದಾನನ ಮಕ್ಕಳ ಮೇರೆಯು ಅವರಿಗೆ ಸಾಲದಿದ್ದರಿಂದ ಅವರು ಹೊರಟು ಹೋಗಿ ಲೆಷೆಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು. |
48
|
ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ದಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ. |
49
|
ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡು ತೀರಿಸಿದಾಗ ಇಸ್ರಾ ಯೇಲ್ ಮಕ್ಕಳು ನೂನನ ಮಗನಾದ ಯೆಹೋಶುವ ನಿಗೆ ತಮ್ಮ ಮಧ್ಯದಲ್ಲಿ ಬಾಧ್ಯತೆಯನ್ನು ಕೊಟ್ಟರು. |
50
|
ಅವನು ಕೇಳಿದ ಎಫ್ರಾಯಾಮ್ ಬೆಟ್ಟದಲ್ಲಿರುವ ತಿಮ್ನತ್ಸೆರಹ ಎಂಬ ಪಟ್ಟಣವನ್ನು ಕರ್ತನ ಮಾತಿನ ಪ್ರಕಾರ ಕೊಟ್ಟರು. ಅವನು ಆ ಪಟ್ಟಣವನ್ನು ಕಟ್ಟಿಸಿ ಅದರಲ್ಲಿ ವಾಸವಾಗಿದ್ದನು. |
51
|
ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು. |
Joshua 19:1 Kannada Language Bible Words basic statistical display
COMING SOON ...