Indian Language Bible Word Collections
Job 38:4
Job Chapters
Job 38 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 38 Verses
1
|
ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು-- |
2
|
ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು? |
3
|
ಪುರುಷನ ಹಾಗೆ ನಡುವನ್ನು ಕಟ್ಟಿಕೋ; ನಾನು ನಿನ್ನನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು. |
4
|
ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು. |
5
|
ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು? |
6
|
ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು? |
7
|
ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು. |
8
|
ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? |
9
|
ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ |
10
|
ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. |
11
|
ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು. |
12
|
ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ? |
13
|
ಅದು ಭೂಮಿಯ ಅಂಚುಗಳನ್ನು ಹಿಡಿಯುವ ಹಾಗೆಯೂ ದುಷ್ಟರು ಅದರೊಳಗಿಂದ ಝಾಡಿಸಲ್ಪಡುವ ಹಾಗೆಯೂ ಉದಯಕ್ಕೆ ಅದರ ಸ್ಥಳವನ್ನು ತಿಳಿಯಪಡಿಸಿದಿಯೋ? |
14
|
ಮುದ್ರೆಯಿಂದ ಮಣ್ಣು ಆಗುವ ಹಾಗೆ ಅದು ಮಾರ್ಪಡುತ್ತದೆ; ವಸ್ತ್ರದ ಹಾಗೆ ಅದು ನಿಂತಿರುತ್ತದೆ. |
15
|
ದುಷ್ಟರಿಂದ ಅವರ ಬೆಳಕು ಹಿಂತೆಗೆಯಲ್ಪಡುತ್ತದೆ. ಎತ್ತಿದ ತೋಳು ಮುರಿದು ಹೋಗುವದು. |
16
|
ನೀನು ಸಮುದ್ರದ ಬುಗ್ಗೆಗಳಲ್ಲಿ ಪ್ರವೇಶಿಸಿ ಇಲ್ಲವೆ ಅಗಾಧವನ್ನು ಹುಡುಕುವದರಲ್ಲಿ ನೀನು ತಿರುಗಾಡಿ ದಿಯೋ? |
17
|
ನಿನಗೆ ಮರಣದ ಬಾಗಲುಗಳು ತೆರೆಯ ಲ್ಪಟ್ಟವೋ? ಇಲ್ಲವೆ ಮರಣದ ನೆರಳಿನ ಬಾಗಲುಗಳನ್ನು ನೀನು ನೋಡಿದಿಯೋ? |
18
|
ಭೂಮಿಯ ವಿಸ್ತಾರ ಗಳವರೆಗೆ ನೀನು ಗ್ರಹಿಸಿದಿಯೋ?ಇದನ್ನೆಲ್ಲಾ ತಿಳು ಕೊಂಡರೆ ತಿಳಿಯಪಡಿಸು. |
19
|
ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ? |
20
|
ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ? |
21
|
ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ. |
22
|
ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ? |
23
|
ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ. |
24
|
ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? |
25
|
ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? |
26
|
ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; |
27
|
ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. |
28
|
ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು? |
29
|
ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು? |
30
|
ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು. |
31
|
ನೀನು ವೃಷಭ ರಾಶಿಯ ಸಿಹಿ ಪರಿಣಾಮಗ ಳನ್ನು ಬಂಧಿಸುವಿಯೋ? ಇಲ್ಲವೆ ಮೃಗಶಿರದ ಸಂಕೋ ಲೆಗಳನ್ನು ಬಿಚ್ಚಬಲ್ಲಿಯೋ? |
32
|
ನೀನು ರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ತರುತ್ತೀಯೋ? ಇಲ್ಲವೆ ಸಪ್ತತಾರೆಗಳನ್ನು ಅವುಗಳ ಪುತ್ರರ ಸಹಿತ ವಾಗಿ ನೀನು ನಡಿಸುತ್ತೀಯೋ? |
33
|
ಆಕಾಶದ ಕಟ್ಟಳೆ ಗಳನ್ನು ನೀನು ತಿಳುಕೊಳ್ಳುತ್ತೀಯೋ? ಇಲ್ಲವೆ ಅದರ ಅಧಿಕಾರವನ್ನು ಭೂಮಿಯಲ್ಲಿ ನಿರ್ಣಯಿ ಸುತ್ತೀಯೋ? |
34
|
ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ? |
35
|
ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ? |
36
|
ಯಾವನು ಅಂತರ್ಯದಲ್ಲಿ ಜ್ಞಾನ ಇಡು ತ್ತಾನೆ; ಇಲ್ಲವೆ ಯಾವನು ಹೃದಯಕ್ಕೆ ಗ್ರಹಿಕೆಯನ್ನು ಕೊಟ್ಟಿದ್ದಾನೆ? |
37
|
ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ; |
38
|
ದೂಳಿಯು ಗಟ್ಟಿಯಾಗುತ್ತಾ ಬರುವಾಗ ಮತ್ತು ಗಡ್ಡೆಗಳು ಒಟ್ಟಾಗಿ ಅಂಟುವಾಗ ಆಕಾಶದ ಬುದ್ಧಲಿಗಳನ್ನು ಹೊಯ್ಯುವವನಾರು? |
39
|
ಸಿಂಹಕ್ಕೋಸ್ಕರ ನೀನು ಬೇಟೆಯಾಡುವಿಯೋ? |
40
|
ಇಲ್ಲವೆ ಅವು ಗುಹೆಗಳಲ್ಲಿ ಕೂತುಕೊಳ್ಳುವಾಗ, ಗವಿಯಲ್ಲಿ ಹೊಂಚಿ ಮಲಗಿರುವಾಗ, ಪ್ರಾಯದ ಸಿಂಹಗಳ ಆಶೆಯನ್ನು ಪೂರೈಸುವಿಯೋ? |
41
|
ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು? |