Indian Language Bible Word Collections
Job 29:3
Job Chapters
Job 29 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 29 Verses
1
|
ಯೋಬನು ಮತ್ತೆ ತನ್ನ ಪ್ರಸ್ತಾಪವನ್ನೆತ್ತಿ ಹೇಳಿದ್ದೇನಂದರೆ-- |
2
|
ಓ, ಮುಂಚಿನ ತಿಂಗ ಳುಗಳ ಹಾಗೆಯೂ ದೇವರು ನನ್ನನ್ನು ಕಾಪಾಡಿದ ದಿವಸಗಳ ಹಾಗೆಯೂ ನನಗೆ ಆದರೆ ಒಳ್ಳೇದು. |
3
|
ಆಗ ಆತನ ದೀಪವು ನನ್ನ ತಲೆಯ ಮೇಲೆ ಹೊಳೆ ಯಿತು; ಆತನ ಬೆಳಕಿನಿಂದ ಕತ್ತಲಲ್ಲಿ ನಡೆದೆನು. |
4
|
ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು. |
5
|
ಸರ್ವ ಶಕ್ತನು ಇನ್ನೂ ನನ್ನ ಸಂಗಡ ಇದ್ದನು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು. |
6
|
ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು. |
7
|
ಪಟ್ಟಣವನ್ನು ಹಾದು ಬಾಗಲಿಗೆ ಹೊರಟುಹೋಗಿ ನನ್ನ ಪೀಠವನ್ನು ಬೀದಿಯಲ್ಲಿ ಸಿದ್ಧಪಡಿಸುತ್ತಾ ಇದ್ದೆನು. |
8
|
ಯುವಕರು ನನ್ನನ್ನು ನೋಡಿ ಅಡಗಿಕೊಳ್ಳುತ್ತಿದ್ದರು; ವೃದ್ಧರು ಎದ್ದು ನಿಲ್ಲುತ್ತಿದ್ದರು. |
9
|
ಪ್ರಧಾನರು ನುಡಿಗಳನ್ನು ಬಿಗಿಹಿಡಿದು ತಮ್ಮ ಬಾಯಿಯ ಮೇಲೆ ಕೈ ಇಟ್ಟು ಕೊಂಡರು. |
10
|
ಘನವುಳ್ಳವರು ಮೌನವಾದರು; ಅವರ ನಾಲಿಗೆ ಅವರ ಅಂಗಳಕ್ಕೆ ಅಂಟಿತು. |
11
|
ಕೇಳುವ ಕಿವಿ ನನ್ನನ್ನು ಧನ್ಯನೆಂದು ಹರಸಿತು; ನೋಡುವ ಕಣ್ಣು ನನಗೆ ಸಾಕ್ಷಿ ಕೊಡುತ್ತಿತ್ತು. |
12
|
ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು. |
13
|
ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು. |
14
|
ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು. |
15
|
ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. |
16
|
ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು. |
17
|
ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು. |
18
|
ನನ್ನ ಗೂಡಿನಲ್ಲಿ ನಾನು ಸಾಯುವೆನು, ಮರಳಿ ನಂತೆ ನನ್ನ ದಿವಸಗಳನ್ನು ಹೆಚ್ಚಿಸುವೆನು ಅಂದೆನು. |
19
|
ನನ್ನ ಬೇರು ನೀರಿನ ಬಳಿಯಲ್ಲಿ ಹಬ್ಬಿತ್ತು--ನನ್ನ ಕೊಂಬೆಯ ಮೇಲೆ ಮಂಜು ಉಳುಕೊಳ್ಳುತ್ತಾ ಇತ್ತು. |
20
|
ನನ್ನ ಘನವು ನನ್ನಲ್ಲಿ ಹೊಸದಾಗಿತ್ತು; ನನ್ನ ಬಿಲ್ಲು ನನ್ನ ಕೈಯಲ್ಲಿ ಹೊಸದಾಗಿತ್ತು. |
21
|
ನನಗೆ ಕಿವಿಗೊಟ್ಟು ಎದುರುನೋಡಿ, ನನ್ನ ಆಲೋಚನೆಗೆ ಮೌನವಾಗಿ ದ್ದರು. |
22
|
ನನ್ನ ಮಾತಿನ ಮೇಲೆ ಅವರು ಬೇರೆ ಮಾತ ನಾಡಲಿಲ್ಲ; ನನ್ನ ನುಡಿ ಅವರ ಮೇಲೆ ಸುರಿಯಿತು. |
23
|
ಮಳೆಯಂತೆ ನನ್ನನ್ನು ಎದುರು ನೋಡುತ್ತಿದ್ದರು; ಹಿಂಗಾರು ಮಳೆಗೆ ಎಂಬಂತೆ ಬಾಯಿ ತೆಗೆದರು. |
24
|
ನಂಬಿಕೆ ಇಲ್ಲದವರ ಕಡೆಗೆ ನಗೆ ತೋರಿಸಿದೆನು; ನನ್ನ ಮುಖದ ಕಳೆಯನ್ನು ಅವರು ಕುಂದಿಸಲಿಲ್ಲ. |
25
|
ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು. |