ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
ಹೀಗಿರುವದರಿಂದ ಈಗ ಯೆಹೂದದ ಮನುಷ್ಯ ರಿಗೂ ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ; ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ; ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂತಿರುಗಿರಿ, ನಿಮ್ಮ ಮಾರ್ಗಗಳನ್ನೂ ಕ್ರಿಯೆಗಳನ್ನೂ ಒಳ್ಳೇದಾಗ ಮಾಡಿರಿ ಎಂಬದು.
ನನ್ನ ಜನರು ನನ್ನನ್ನು ಮರೆತುಬಿಟ್ಟಿದ್ದಾರೆ; ವ್ಯರ್ಥವಾದದ್ದಕ್ಕೆ ಧೂಪವನ್ನರ್ಪಿಸಿದ್ದಾರೆ; ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರನ್ನು ಎಡವು ವಂತೆ ಮಾಡಿ ಮಾರ್ಗವಲ್ಲದ ಸೀಳು ದಾರಿಗಳಲ್ಲಿ ಅವರನ್ನು ನಡೆಯಮಾಡುತ್ತಾರೆ.
ಆಗ ಅವರು--ಬನ್ನಿರಿ, ಯೆರೆವಿಾಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ; ಯಾಜಕ ನಿಂದ ನ್ಯಾಯಪ್ರಮಾಣವೂ ಜ್ಞಾನಿಯಿಂದ ಆಲೋಚ ನೆಯೂ ಪ್ರವಾದಿಯಿಂದ ವಾಕ್ಯವೂ ತಪ್ಪುವುದಿಲ್ಲ ಬನ್ನಿರಿ, ನಾಲಿಗೆಯಿಂದ ಅವನನ್ನು ಹೊಡೆಯೋಣ, ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ ಎಂದು ಅವರು ಹೇಳಿದರು.
ಒಳ್ಳೇದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಅವರು ನನ್ನ ಪ್ರಾಣಕ್ಕೆ ಕುಣಿಯನ್ನು ಅಗೆದಿದ್ದಾರೆ; ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವದಕ್ಕೂ ನಿನ್ನ ಉಗ್ರವನ್ನು ಅವರಿಂದ ತಿರುಗಿಸುವದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.
ಆದದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು; ಕತ್ತಿಯ ಬಲದಿಂದ ಅವರ ರಕ್ತವನ್ನು ಸುರಿದುಬಿಡು; ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ; ಅವರ ಗಂಡಸರು ಕೊಲ್ಲಲ್ಪಟ್ಟು ಸಾಯಲಿ; ಅವರ ಯೌವನಸ್ಥರು ಯುದ್ಧ ದಲ್ಲಿ ಕತ್ತಿಯಿಂದ ವಧಿಸಲ್ಪಡಲಿ.
ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ ಕೂಗು ಅವರ ಮನೆಗಳೊಳಗಿಂದ ಕೇಳಬರಲಿ; ನನ್ನನ್ನು ಹಿಡಿಯು ವದಕ್ಕೆ ಕುಣಿ ಅಗೆದಿದ್ದಾರೆ; ನನ್ನ ಕಾಲುಗಳಿಗೆ ಉರ್ಲು ಗಳನ್ನು ಒಡ್ಡಿದ್ದಾರೆ.
ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು.