1
|
ದೇವರು ನೋಹನನ್ನೂ ಅವನ ಕುಮಾರರನ್ನೂ ಆಶೀರ್ವದಿಸಿ ಅವರಿಗೆ--ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. |
2
|
ಭೂಮಿಯ ಮೇಲಿರುವ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವುಗಳ ಮೇಲೆಯೂ ಸಮುದ್ರದ ಎಲ್ಲಾ ವಿಾನುಗಳ ಮೇಲೆಯೂ ನಿಮ್ಮ ಭಯವು ಮತ್ತು ನಿಮ್ಮ ಹೆದರಿಕೆಯು ಇರುವದು; ನಿಮ್ಮ ಕೈಗಳಲ್ಲಿ ಅವು ಕೊಡಲ್ಪಟ್ಟಿವೆ. |
3
|
ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ. |
4
|
ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು. |
5
|
ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು. |
6
|
ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು. |
7
|
ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯಲ್ಲಿ ಅಧಿಕವಾಗಿ ಹುಟ್ಟಿ ಅದರಲ್ಲಿ ಹೆಚ್ಚಿರಿ ಎಂದು ಹೇಳಿದನು. |
8
|
ಇದಲ್ಲದೆ ದೇವರು ನೋಹನಿಗೂ ಅವನ ಸಂಗಡವಿರುವ ಅವನ ಕುಮಾರರಿಗೂ ಹೇಳಿದ್ದೇ ನಂದರೆ-- |
9
|
ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ |
10
|
ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ |
11
|
ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ. |
12
|
ದೇವರು--ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು. |
13
|
ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು. |
14
|
ನಾನು ಭೂಮಿಯ ಮೇಲೆ ಮೇಘಗಳನ್ನು ಬರ ಮಾಡುವಾಗ ಆ ಬಿಲ್ಲು ಮೇಘಗಳಲ್ಲಿ ಕಾಣುವದು. |
15
|
ಆಗ ನಾನು ನನಗೂ ನಿಮಗೂ ದೇಹಗಳಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯೆ ಇರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಶರೀರಗಳನ್ನೆಲ್ಲಾ ನಾಶಮಾಡುವ ಜಲಪ್ರಳಯವಾ ಗುವದೇ ಇಲ್ಲ. |
16
|
ಆ ಬಿಲ್ಲು ಮೇಘಗಳಲ್ಲಿರುವಾಗ ದೇವರಾದ ನನಗೂ ಭೂಮಿಯ ಮೇಲಿರುವ ದೇಹಗಳುಳ್ಳ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ನಿತ್ಯವಾಗಿರುವ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಳ್ಳುವ ಹಾಗೆ ನಾನು ಅದನ್ನು ನೋಡುವೆನು ಅಂದನು. |
17
|
ದೇವರು ನೋಹನಿಗೆ--ನಾನು ನನಗೂ ಭೂಮಿಯ ಮೇಲಿರುವ ಎಲ್ಲಾ ದೇಹಗಳಿಗೂ ಮಧ್ಯ ದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತು ಇದೇ ಎಂದು ಹೇಳಿದನು. |
18
|
ನಾವೆಯೊಳಗಿನಿಂದ ಹೊರಟು ಬಂದ ನೋಹನ ಕುಮಾರರು ಯಾರಂದರೆ, ಶೇಮ್ ಹಾಮ್ ಯೆಫೆತ್; ಹಾಮನು ಕಾನಾನನ ತಂದೆಯು. |
19
|
ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು. |
20
|
ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು. |
21
|
ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು. |
22
|
ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು. |
23
|
ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತಕ್ಕೊಂಡು ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು ಹಿಂಭಾಗವಾಗಿ ಹೋಗಿ ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಂಭಾಗವಾಗಿದ್ದ ದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ. |
24
|
ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚತ್ತು ತನ್ನ ಚಿಕ್ಕಮಗನು ತನಗೆ ಮಾಡಿದ್ದನ್ನು ತಿಳಿದು ಅವನು-- |
25
|
ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಸಹೋದರರಿಗೆ ದಾಸಾನುದಾಸನಾ ಗಿರುವನು ಅಂದನು. ಅವನು-- |
26
|
ಶೇಮನ ದೇವ ರಾದ ಕರ್ತನು ಸ್ತುತಿಸಲ್ಪಡಲಿ; ಕಾನಾನನು ಅವನಿಗೆ ದಾಸನಾಗಿರಲಿ. |
27
|
ಯೆಫೆತನನ್ನು ದೇವರು ವಿಸ್ತರಿಸಲಿ; ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ; ಕಾನಾನನು ಅವನಿಗೆ ದಾಸನಾಗಿರಲಿ ಅಂದನು. |
28
|
ಪ್ರಳಯವಾದ ಮೇಲೆ ನೋಹನು ಮೂನ್ನೂರ ಐವತ್ತು ವರುಷ ಬದುಕಿದನು. |
29
|
ನೋಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಐವತ್ತು ವರುಷ ಗಳಾಗಿದ್ದವು. ತರುವಾಯ ಅವನು ಸತ್ತನು. |
Genesis 9:2 Kannada Language Bible Words basic statistical display
COMING SOON ...