Indian Language Bible Word Collections
Genesis 15:20
Genesis Chapters
Genesis 15 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Genesis Chapters
Genesis 15 Verses
1
ಇವುಗಳಾದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಕರ್ತನ ವಾಕ್ಯವು ಬಂದು--ಅಬ್ರಾಮನೇ, ಭಯಪಡಬೇಡ; ನಾನೇ ನಿನ್ನ ಗುರಾಣಿಯೂ ನಿನ್ನ ಅತ್ಯಧಿಕವಾದ ಬಹುಮಾನವೂ ಆಗಿದ್ದೇನೆ.
2
ಅದಕ್ಕೆ ಅಬ್ರಾಮನು--ಕರ್ತನಾದ ದೇವರೇ, ನನಗೆ ಏನು ಕೊಟ್ಟರೇನು? ನಾನು ಮಕ್ಕಳಿಲ್ಲದವನಾಗಿದ್ದೇನೆ. ಈ ದಮಸ್ಕದವನಾದ ಎಲೀಯೆಜರನು ನನ್ನ ಮನೆಯ ಮನೆವಾರ್ತೆಯವನಾ ಗಿದ್ದಾನಲ್ಲಾ ಅಂದನು.
3
ಅಬ್ರಾಮನು--ಇಗೋ, ನೀನು ನನಗೆ ಸಂತಾನವನ್ನು ಕೊಡಲಿಲ್ಲ; ಇಗೋ, ನನ್ನ ಮನೆಯಲ್ಲಿ ಹುಟ್ಟಿದವನು ನನಗೆ ಬಾಧ್ಯನಾಗಿ ರುವನು ಅಂದಾಗ
4
ಇಗೋ, ಕರ್ತನ ವಾಕ್ಯವು ಅವನಿಗೆ ಉಂಟಾಗಿ--ಇವನು ನಿನಗೆ ಬಾಧ್ಯನಾಗುವ ದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಬಾಧ್ಯನಾಗುವನು ಅಂದನು.
5
ಕರ್ತನು ಅವನನ್ನು ಹೊರಗೆ ಕರಕೊಂಡು ಬಂದು--ಈಗ ನೀನು ಆಕಾಶವನ್ನು ದೃಷ್ಟಿಸಿ ನಕ್ಷತ್ರ ಗಳನ್ನು ಲೆಕ್ಕಿಸಶಕ್ತನಾದರೆ ಅವುಗಳನ್ನು ಲೆಕ್ಕಿಸು ಅಂದನು. ಆತನು ಅವನಿಗೆ--ಅದರಂತೆಯೇ ನಿನ್ನ ಸಂತತಿಯು ಆಗುವದು ಎಂದು ಅವನಿಗೆ ಹೇಳಿದನು.
6
ಅಬ್ರಾ ಮನು ಕರ್ತನಲ್ಲಿ ನಂಬಿಕೆಯಿಟ್ಟನು. ಆತನು ಅದನ್ನು ಅವನಿಗೆ ನೀತಿ ಎಂದು ಎಣಿಸಿದನು.
7
ಆತನು ಅವನಿಗೆ--ಈ ದೇಶವನ್ನು ಬಾಧ್ಯವಾಗಿ ನಿನಗೆ ಕೊಡುವದಕ್ಕೆ ಕಲ್ದೀಯರ ಊರ್‌ನಿಂದ ನಿನ್ನನ್ನು ಹೊರಗೆ ತಂದ ಕರ್ತನು ನಾನೇ ಎಂದು ಹೇಳಿದನು.
8
ಅದಕ್ಕೆ ಅವನು--ದೇವರಾದ ಕರ್ತನೇ, ನಾನು ಅದನ್ನು ಬಾಧ್ಯವಾಗಿ ಹೊಂದುವೆನೆಂದು ಯಾವದ ರಿಂದ ತಿಳುಕೊಳ್ಳಲಿ ಅಂದನು.
9
ಅದಕ್ಕೆ ಆತನು ಅಬ್ರಾಮನಿಗೆ--ಮೂರು ಮೂರು ವರುಷದ ಕಡಸು ಆಡು ಟಗರುಗಳನ್ನೂ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳದ ಮರಿಯನ್ನೂ ನನಗಾಗಿ ತೆಗೆದುಕೋ ಅಂದನು.
10
ಅವನು ಇವುಗಳನ್ನೆಲ್ಲಾ ಆತನಿಗಾಗಿ ತೆಗೆದುಕೊಂಡು ನಡುವೆ ತುಂಡುಮಾಡಿ ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಆದರೆ ಪಕ್ಷಿಗಳನ್ನು ತುಂಡುಮಾಡಲಿಲ್ಲ.
11
ಪಕ್ಷಿಗಳು ಆ ಶವಗಳ ಮೇಲೆ ಇಳಿದು ಬಂದಾಗ ಅಬ್ರಾಮನು ಅವುಗಳನ್ನು ಓಡಿಸಿದನು.
12
ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಆಗ ಇಗೋ, ಭಯದ ಘೋರಾಂಧಕಾರವು ಅವನ ಮೇಲೆ ಕವಿಯಿತು.
13
ಆಗ ಆತನು ಅಬ್ರಾಮನಿಗೆ--ನಿನ್ನ ಸಂತತಿ ಯವರು ತಮ್ಮದಲ್ಲದ ದೇಶದಲ್ಲಿ ಪರದೇಶಿಗಳಾಗಿದ್ದು ಅವರನ್ನು ಸೇವಿಸುವರು. ಅವರು ನಾನೂರು ವರುಷ ಗಳು ನಿನ್ನ ಸಂತತಿಯವರನ್ನು ಶ್ರಮೆಪಡಿಸುವರು ಎಂದು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು.
14
ಅವರು ಸೇವಿಸುವ ಜನಾಂಗಕ್ಕೆ ನಾನೇ ನ್ಯಾಯ ತೀರಿಸುವೆನು; ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.
15
ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ.
16
ಆದರೆ ನಾಲ್ಕನೆಯ ಸಂತಾನದಲ್ಲಿ ಅವರು ತಿರಿಗಿ ಬರುವರು; ಅಮೋರಿಯರ ದುಷ್ಟತನವು ಇನ್ನೂ ಪೂರ್ತಿಯಾಗಲಿಲ್ಲ ಎಂದು ಹೇಳಿದನು.
17
ಸೂರ್ಯನು ಮುಳುಗಿದ ಮೇಲೆ ಕತ್ತಲಾದಾಗ ಇಗೋ, ಹೊಗೆಹಾಯುವ ಒಲೆಯೂ ಉರಿಯುವ ದೀಪವೂ ತುಂಡುಗಳ ಮಧ್ಯದಲ್ಲಿ ಹಾದುಹೋದವು.
18
ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್ ನದಿಯ ವರೆಗೆ ವಾಸಿಸುವ
19
ಕೇನಿಯರೂ ಕೆನಿಜೀಯರೂ ಕದ್ಮೋನಿ ಯರೂ
20
ಹಿತ್ತಿಯರೂ ಪೆರಿಜೀಯರೂ ರೆಫಾಯರೂ
21
ಅಮೋರಿಯರೂ ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ ಅಂದನು.