1
|
ಜನರಲ್ಲಿ ಏನಾದರೂ ವಿರೋಧವಿದ್ದರೆ ಅವರು ನ್ಯಾಯತೀರ್ವಿಕೆ ಹೊಂದುವ ಹಾಗೆ ನ್ಯಾಯಾಧಿಪತಿಗಳ ಬಳಿಗೆ ನ್ಯಾಯಕ್ಕೆ ಬಂದರೆ ನೀತಿವಂತನನ್ನು ನೀತಿವಂತನೆಂದೂ ದುಷ್ಟನನ್ನು ಅಪರಾಧಿಯೆಂದೂ ನ್ಯಾಯತೀರಿಸಬೇಕು. |
2
|
ಇದಲ್ಲದೆ ಆ ದುಷ್ಟನು ಹೊಡೆಯಲ್ಪಡಲು ಯೋಗ್ಯನಾದರೆ ನ್ಯಾಯಾಧಿಪತಿಯು ಅವನನ್ನು ನೆಲಕ್ಕೆ ಬೀಳಿಸಿ ಅವನ ದುಷ್ಟತ್ವದ ಪ್ರಕಾರ ಅವನಿಗೆ ಲೆಕ್ಕದಿಂದ ಹೊಡಿಸಬೇಕು. |
3
|
ನಾಲ್ವತ್ತು ಏಟು ಅವನಿಗೆ ಹೊಡಿಸಬಹುದು, ಹೆಚ್ಚಲ್ಲ ಇದಕ್ಕಿಂತ ಹೆಚ್ಚು. ಅವನಿಗೆ ಬಹಳ ಏಟುಗಳನ್ನು ಹೊಡೆದರೆ ನಿನ್ನ ಸಹೋದರನು ನಿನ್ನ ಕಣ್ಣುಗಳಿಗೆ ನೀಚನೆಂದು ಕಾಣಿಸಾನು. |
4
|
ಕಣತುಳಿಯುವಾಗ ಎತ್ತಿನ ಬಾಯಿ ಕಟ್ಟಬಾರದು. |
5
|
ಸಹೋದರರು ಕೂಡಿ ವಾಸಮಾಡುವಾಗ ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ ಆ ಸತ್ತವನ ಹೆಂಡತಿ ಮನೆ ಬಿಟ್ಟು ಅನ್ಯನ ಹೆಂಡತಿಯಾಗಬಾರದು; ಗಂಡನ ಸಹೋದರನು ಅವಳ ಬಳಿಗೆ ಬಂದು ಅವಳನ್ನು ಹೆಂಡತಿಯಾಗಿ ತಕ್ಕೊಂಡು ಗಂಡನ ಸಹೋದರನಿಗೆ ತಕ್ಕ ಹಾಗೆ ಅವಳಿಗೆ ನಡಿಸಬೇಕು. |
6
|
ಆಗ ಅವಳು ಹೆರುವ ಚೊಚ್ಚಲ ಮಗನು ಸತ್ತವನಾದ ಅವನ ಸಹೋದರನ ಹೆಸರಿಗೆ ಇವನ ಹೆಸರು ಇಸ್ರಾಯೇಲಿನಲ್ಲಿಂದ ಅಳಿಸಲ್ಪಡದ ಹಾಗೆ ನಿಲ್ಲಬೇಕು. |
7
|
ಆದರೆ ಆ ಮನುಷ್ಯನು ತನ್ನ ಅತ್ತಿಗೆಯನ್ನು ತಕ್ಕೊಳ್ಳಲು ಮನಸ್ಸಿಲ್ಲದಿದ್ದರೆ ಅತ್ತಿಗೆಯು ಬಾಗಲಿನ ಬಳಿಗೆ ಹಿರಿಯರ ಹತ್ತಿರ ಬಂದು--ನನ್ನ ಗಂಡನ ಸಹೋದರನು ತನ್ನ ಸಹೋದರನಿಗೆ ಇಸ್ರಾಯೇಲಿನಲ್ಲಿ ಹೆಸರನ್ನು ಎಬ್ಬಿಸಲು ಮನಸ್ಸಿಲ್ಲದೆ ನನಗೆ ಗಂಡನ ಸಹೋದರನಾಗಿ ತನ್ನ ಕರ್ತವ್ಯವನ್ನು ನಡಿಸಲು ಮನಸ್ಸಿಲ್ಲದೆ ಇದ್ದಾನೆ ಎಂದು ಹೇಳಬೇಕು. |
8
|
ಆಗ ಪಟ್ಟಣದ ಹಿರಿಯರು ಅವನನ್ನು ಕರೆದು ಅವನ ಸಂಗಡ ಮಾತನಾಡಬೇಕು; ಅವನು--ಅವಳನ್ನು ತಕ್ಕೊಳ್ಳುವದಕ್ಕೆ ನನಗೆ ಮನಸ್ಸಿಲ್ಲ ವೆಂದು ಸಮರ್ಥಿಸಿದರೆ |
9
|
ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು ಕೆರವನ್ನು ಅವನ ಪಾದದಿಂದ ಬಿಡಿಸಿ ಅವನ ಮುಖದಲ್ಲಿ ಉಗುಳಿ ಉತ್ತರ ಕೊಟ್ಟು--ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು. |
10
|
ಆ ಮೇಲೆ ಅವನಿಗೆ ಇಸ್ರಾಯೇಲಿನಲ್ಲಿ ಕೆರಬಿಡಿಸಿಕೊಂಡವನ ಮನೆ ಎಂದು ಹೆಸರಾಗಬೇಕು ಎಂದು ಹೇಳಬೇಕು. |
11
|
ಇಬ್ಬರು ಮನುಷ್ಯರು ಒಬ್ಬನ ಸಂಗಡ ಒಬ್ಬನು ಹೋರಾಡುವಾಗ ಒಬ್ಬನ ಹೆಂಡತಿ ತನ್ನ ಗಂಡನನ್ನು ಹೊಡೆಯುವವನ ಕೈಯಿಂದ ಬಿಡಿಸುವದಕ್ಕೆ ಸವಿಾಪ ಬಂದು ಕೈಚಾಚಿ ಅವನ ಮಾನಸ್ಥಾನವನ್ನು ಹಿಡಿದರೆ |
12
|
ಅವಳ ಕೈಯನ್ನು ಕಡಿದುಹಾಕಬೇಕು; ನಿನ್ನ ಕಣ್ಣು ಕರುಣಿಸಬಾರದು. |
13
|
ನಿನ್ನ ಚೀಲದಲ್ಲಿ ದೊಡ್ಡದು ಒಂದು, ಸಣ್ಣದು ಒಂದು ಹೀಗೆ ವಿವಿಧ ತೂಕಗಳು ನಿನಗಿರಬಾರದು. |
14
|
ನಿನ್ನ ಮನೆಯಲ್ಲಿ ದೊಡ್ಡದು ಒಂದು, ಸಣ್ಣದು ಒಂದು ವಿವಿಧವಾದ ಅಳತೆಗಳು ನಿನಗಿರಬಾರದು. |
15
|
ಪೂರ್ಣ ನ್ಯಾಯವಾದ ತೂಕ ನಿನಗಿರಬೇಕು; ಸಂಪೂರ್ಣ ನ್ಯಾಯವಾದ ಅಳತೆ ನಿನಗಿರಬೇಕು; ಆಗ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯ ಮೇಲೆ ನಿನ್ನ ದಿನಗಳು ಹೆಚ್ಚಾಗುವವು. |
16
|
ಅಂಥವು ಗಳನ್ನು ಮಾಡುವವರೆಲ್ಲರೂ ಅನ್ಯಾಯಮಾಡುವವ ರೆಲ್ಲರೂ ನಿನ್ನ ದೇವರಾದ ಕರ್ತನಿಗೆ ಅಸಹ್ಯ. |
17
|
ನೀವು ಐಗುಪ್ತವನ್ನು ಬಿಟ್ಟು ಬರುವ ಮಾರ್ಗ ನದಲ್ಲಿ ಅಮಾಲೇಕ್ಯನು ನಿನಗೆ ಮಾಡಿದ್ದನ್ನು ಜ್ಞಾಪಕ ಮಾಡಿಕೊ. |
18
|
ಅವನು ಮಾರ್ಗದಲ್ಲಿ ನಿನಗೆ ಎದುರು ಗೊಂಡು ದೇವರಿಗೆ ಭಯಪಡದೆ ನೀನು ಆಯಾಸವುಳ್ಳ ವನೂ ದಣಿದವನೂ ಆಗಿರುವ ಸಮಯದಲ್ಲಿ ನಿನ್ನ ಹಿಂದೆ ಬಿದ್ದ ಬಲಹೀನರೆಲ್ಲರನ್ನು ನಿನ್ನ ಹಿಂಭಾಗದಲ್ಲಿ ಸಂಹಾರಮಾಡಿದನು. |
19
|
ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು. |
Deuteronomy 25:1 Kannada Language Bible Words basic statistical display
COMING SOON ...