Bible Languages

Indian Language Bible Word Collections

Bible Versions

Books

Colossians Chapters

Colossians 4 Verses

Bible Versions

Books

Colossians Chapters

Colossians 4 Verses

1 ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸಮ ವಾದದ್ದನ್ನೂ ಕೊಡಿರಿ.
2 ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಕೃತಜ್ಞತಾಸ್ತುತಿಯೊಂದಿಗೆ ಎಚ್ಚರವಾಗಿರ್ರಿ.
3 ನಾವು ಕ್ರಿಸ್ತನ ಮರ್ಮವನ್ನು ಮಾತನಾಡುವಂತೆ ದೇವರು ಅನುಕೂಲವಾದ ಬಾಗಲನ್ನು ನಮಗೆ ತೆರೆಯುವ ಹಾಗೆ ನಮಗೋಸ್ಕರವೂ ಪ್ರಾರ್ಥಿಸಿರಿ; ಇದಕ್ಕೋಸ್ಕರವೇ ನಾನು ಸೆರೆಯಲ್ಲಿದ್ದೇನಲ್ಲಾ;
4 ನಾನು ಅದನ್ನು ಹೇಳಬೇಕಾದ ರೀತಿಯಲ್ಲಿ ಪ್ರಕಟಿಸುವಂತೆ ಅನುಗ್ರಹ ಮಾಡಬೇಕೆಂದು ಬೇಡಿಕೊಳ್ಳಿರಿ;
5 ಸಮಯ ವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳ ವರಾಗಿ ನಡೆದುಕೊಳ್ಳಿರಿ.
6 ನಿಮ್ಮ ಸಂಭಾಷಣೆ ಯಾವಾ ಗಲೂ ಕೃಪೆಯುಳ್ಳದ್ದಾಗಿಯೂ ಉಪ್ಪಿನಿಂದ ರುಚಿಯಾದ ದ್ದಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರ ಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.
7 ಪ್ರಿಯ ಸಹೋದರನೂ ನಂಬಿಗಸ್ತನಾದ ಸೇವ ಕನೂ ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ಸ್ಥಿತಿಯನ್ನೆಲ್ಲಾ ನಿಮಗೆ ತಿಳಿಸುವನು.
8 ಅದೇ ರೀತಿಯಲ್ಲಿ ಅವನು (ತುಖಿಕನು) ನಿಮ್ಮ ಸ್ಥಿತಿಯನ್ನು ತಿಳುಕೊಂಡು ನಿಮ್ಮ ಹೃದಯಗಳನ್ನು ಸಂತೈಸುವ ಹಾಗೆಯೂ
9 ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ ಪ್ರಿಯ ಸಹೋದರನೂ ಆದ ಒನೇ ಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ; ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
10 ನನ್ನ ಜೊತೆಸೆರೆಯವನಾದ ಅರಿಸ್ತಾರ್ಕನೂ ಬಾರ್ನಬನ ಸಹೋದರಿಯ ಮಗನಾದ ಮಾರ್ಕನೂ (ಮಾರ್ಕನ) ವಿಷಯದಲ್ಲಿ ನೀವು ಅಪ್ಪಣೆ ಹೊಂದಿದ್ದೀರಲ್ಲಾ; ಅವನು ನಿಮ್ಮ ಬಳಿಗೆ ಬಂದರೆ ಸೇರಿಸಿಕೊಳ್ಳಿರಿ.
11 ಯೂಸ್ತನೆನಿಸಿಕೊಳ್ಳುವ ಯೇಸುವೂ ನಿಮ್ಮನ್ನು ವಂದಿಸುತ್ತಾರೆ. ಇವರು ಸುನ್ನತಿಯವರಾಗಿ ದ್ದಾರೆ. ದೇವರ ರಾಜ್ಯಕ್ಕಾಗಿ ಇವರು ಮಾತ್ರ ನನ್ನ ಜೊತೆಗೆಲಸದವರಾಗಿದ್ದು ನನಗೆ ಆದರಣೆಯಾಗಿದ್ದಾರೆ.
12 ನಿಮ್ಮಲ್ಲಿ ಒಬ್ಬನಾದ ಕ್ರಿಸ್ತನ ಸೇವಕನಾಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ಪರಿಪೂರ್ಣರಾಗಿಯೂ ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕೆಂದು ಇವನು ನಿಮಗೋಸ್ಕರ ಕಷ್ಟಪಟ್ಟು ಪ್ರಾರ್ಥನೆಗಳಲ್ಲಿ ಹೋರಾಡುತ್ತಾನೆ.
13 ನಿಮ್ಮ ವಿಷಯ ವಾಗಿಯೂ ಲವೊದಿಕೀಯರ ವಿಷಯವಾಗಿಯೂ ಹಿರಿಯಾಪೊಲಿಯರ ವಿಷಯವಾಗಿಯೂ ಅವನು ಬಹು ಆಸಕ್ತಿಯುಳ್ಳವನಾಗಿದ್ದಾನೆಂದು ಅವನ ವಿಷಯ ದಲ್ಲಿ ನಾನು ಸಾಕ್ಷಿ ಹೇಳುತ್ತೇನೆ.
14 ಪ್ರಿಯ ವೈದ್ಯನಾಗಿ ರುವ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.
15 ಲವೊದಿಕೀಯದಲ್ಲಿರುವ ಸಹೋದರ ರಿಗೂ ನುಂಫನಿಗೂ ಅವನ ಮನೆಯಲ್ಲಿರುವ ಸಭೆಗೂ ವಂದನೆ ಹೇಳಿರಿ.
16 ನಿಮ್ಮಲ್ಲಿ ಈ ಪತ್ರಿಕೆಯನ್ನು ಓದಿಸಿಕೊಂಡ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿಸಿರಿ; ಹಾಗೆಯೇ ಲವೊದಿಕೀಯ ದಿಂದ ಪತ್ರಿಕೆಯನ್ನು ತರಿಸಿ ನೀವು ಓದಿಕೊಳ್ಳಿರಿ.
17 ಅರ್ಖಿಪ್ಪನಿಗೆ--ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ.
18 ಇದು ಪೌಲನೆಂಬ ನಾನು ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.

Colossians 4:12 Kannada Language Bible Words basic statistical display

COMING SOON ...

×

Alert

×