ಆ ಮಾರ್ಗದಲಿ ಇದ್ದವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ತಾನು ಅವರನ್ನು ಬಂಧಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರ ದವರಿಗೆ ಪತ್ರಗಳನ್ನು ಕೊಡಬೇಕೆಂದು ಅವನನ್ನು ಬೇಡಿಕೊಂಡನು.
ಆಗ ಅವನು ವಿಸ್ಮಯಗೊಂಡು ನಡು ಗುತ್ತಾ--ಕರ್ತನೇ, ನಾನು ಏನು ಮಾಡಬೇಕೆಂದು ನೀನು ಕೋರುತ್ತೀ ಅಂದನು. ಅದಕ್ಕೆ ಕರ್ತನು ಅವನಿಗೆ--ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ನಿನಗೆ ತಿಳಿಸಲ್ಪಡುವದು ಎಂದು ಹೇಳಿದನು.
ಆದರೆ ಕರ್ತನು ಅವನಿಗೆ--ನೀನು ಹೋಗು; ಯಾಕಂದರೆ ಆ ಮನುಷ್ಯನು ಅನ್ಯಜನರ ಮುಂದೆಯೂ ಅರಸುಗಳ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನ ಹೆಸರನ್ನು ಹೊರುವದಕ್ಕಾಗಿ ನಾನು ಆರಿಸಿಕೊಂಡ ಪಾತ್ರೆಯಾಗಿದ್ದಾನೆ.
ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು--ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣುಕಾಣುವಂತೆಯೂ ನೀನು ಪವಿತ್ರಾತ್ಮಭರಿತನಾಗು ವಂತೆಯೂ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿದನು.
ಆದರೆ ಕೇಳಿದವರೆಲ್ಲರೂ ಬೆರಗಾಗಿ--ಈ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ಹಾಳು ಮಾಡಿದವನು ಇವನೇ ಅಲ್ಲವೇ, ಅಂಥವರನ್ನು ಬಂಧಿಸಿ ಪ್ರಧಾನಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದನಲ್ಲವೇ ಎಂದು ಮಾತನಾಡಿಕೊಂಡರು.
ಆದರೆ ಬಾರ್ನಬನು ಅವನನ್ನು ಅಪೊಸ್ತಲರ ಬಳಿಗೆ ಕರೆದುಕೊಂಡು ಹೋಗಿ ಅವನು ಹೇಗೆ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ ಆತನು ಅವನ ಸಂಗಡ ಮಾತನಾಡಿ ದ್ದನ್ನೂ ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿದ್ದನ್ನೂ ಅವರಿಗೆ ವಿವರವಾಗಿ ತಿಳಿಯಪಡಿಸಿದನು.
ಪೇತ್ರನು ಎದು ಅವರ ಜೊತೆಯಲ್ಲಿ ಹೋದನು. ಅವನು ಬಂದಾಗ ಅವರು ಅವನನ್ನು ಮೇಲಂತಸ್ತಿನ ಕೊಠಡಿಗೆ ಕರೆದು ಕೊಂಡುಹೋದರು. ಅಲ್ಲಿ ವಿಧವೆಯರೆಲ್ಲರೂ ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಮೇಲಂಗಿಗಳನ್ನೂ ಒಳಂಗಿಗಳನ್ನೂ ತೋರಿಸಿ
ಪೇತ್ರನು ಅವರೆ ಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆ ಮಾಡಿ ಶವದ ಕಡೆಗೆ ತಿರುಗಿಕೊಂಡು--ತಬಿಥಾ, ಏಳು ಅಂದನು; ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕೂತುಕೊಂಡಳು.