ಅಲ್ಲಿ ಮೂರು ತಿಂಗಳು ಇದ್ದ ಮೇಲೆ ಸಮುದ್ರ ಮಾರ್ಗವಾಗಿ ಸಿರಿಯಾಕ್ಕೆ ಹೋಗಬೇಕೆಂದಿದ್ದಾಗ ಯೆಹೂದ್ಯರು ಅವನಿಗಾಗಿ ಹೊಂಚುಹಾಕಿದ್ದರಿಂದ ಅವನು ಮಕೆದೋನ್ಯದ ಮುಖಾಂತರ ಹಿಂತಿರುಗಿ ಹೋಗು ವದಕ್ಕೆ ತೀರ್ಮಾನಮಾಡಿದನು.
ವಾರದ ಮೊದಲನೆಯ ದಿವಸದಲ್ಲಿ ಶಿಷ್ಯರು ರೊಟ್ಟಿಮುರಿಯುವದಕ್ಕಾಗಿ ಕೂಡಿ ಬಂದಾಗ ಮರು ದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಮಧ್ಯರಾತ್ರಿಯ ವರೆಗೂ ಉಪದೇಶ ವನ್ನು ನಡಿಸಿದನು.
ಆಗ ಕಿಟಕಿಯಲ್ಲಿ ಕೂತು ಕೊಂಡಿದ್ದ ಯೂತಿಕನೆಂಬ ಒಬ್ಬ ಯೌವನಸ್ಥನು ಗಾಢ ನಿದ್ರೆಯಲ್ಲಿದ್ದನು. ಪೌಲನು ಇನ್ನೂ ಪ್ರಸಂಗ ಮಾಡುತ್ತಾ ಇದ್ದಾಗ ಆ ಯೌವನಸ್ಥನಿಗೆ ನಿದ್ರೆಯಿಂದ ತೂಕಡಿಕೆ ಹೆಚ್ಚಾಗಿ ಮೂರನೆಯ ಅಂತಸ್ತಿನಿಂದ ಕೆಳಗೆ ಬಿದ್ದನು; ಅವನನ್ನು ಎತ್ತಿದಾಗ ಅವನು ಸತ್ತಿದ್ದನು.
ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲ ನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರ ಪ್ರಯಾಣ ಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆಮಾಡಿ ತಾನು ಕಾಲು ನಡೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದನು.
ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ
ದೇವರು ತನ್ನ ಸ್ವರಕ್ತದಿಂದ ಕೊಂಡುಕೊಂಡ ಸಭೆಯನ್ನು ಪೋಷಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.
ನೀವು ಹಾಗೆಯೇ ಕೆಲಸಮಾಡಿ ಬಲಹೀನ ರಿಗೆ ಹೀಗೆ ಆಧಾರವಾಗಿರತಕ್ಕದ್ದೆಂದೂ ಮತ್ತು--ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ ವೆಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳಬೇಕೆಂದೂ ಇವೆಲ್ಲವು ಗಳನ್ನು ನಾನು ನಿಮಗೆ ತಿಳಿಯಪಡಿಸಿದ್ದೇನೆ.