1
|
ಚಕ್ರವರ್ತಿಯಾದ ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷ ಅದಾಗಿತ್ತು. ಆಗ, ಪೊಂತ್ಯ ಪಿಲಾತನು ಜುದೇಯ ಪ್ರಾಂತ್ಯಕ್ಕೂ ಹೆರೋದನು ಗಲಿಲಾಯಕ್ಕೂ ಹೆರೋದನ ಸಹೋದರನಾದ ಫಿಲಿಪ್ಪನು ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೂ ಲೂಸನ್ಯನು ಅಬಿಲೇನೆ ಪ್ರಾಂತ್ಯಕ್ಕೂ ಅಧಿಪತಿಯಾಗಿದ್ದರು. |
2
|
ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು. ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು. |
3
|
ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪ ಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು. |
4
|
ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ: ”ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ. ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. |
5
|
ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು. ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು. ಡೊಂಕಾದ ದಾರಿಗಳು ನೀಟಾಗುವವು. ಕೊರಕಲಾದ ದಾರಿಗಳು ಸಮವಾಗುವವು. |
6
|
ಪ್ರತಿಯೊಬ್ಬನೂ ದೇವರ ರಕ್ಷಣೆಯನ್ನು ಕಾಣುವನು! ಎಂಬುದಾಗಿ ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ.”؆ ಯೆಶಾಯ 40:3-5 |
7
|
ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? |
8
|
ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ಅಬ್ರಹಾಮನು ನಮ್ಮ ತಂದೆ؆ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ. |
9
|
ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು. |
10
|
ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು. |
11
|
ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವನಿಗೆ ಒಂದು ಕೊಡಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂಚಿಕೊಡಿರಿ” ಎಂದು ಹೇಳಿದನು. |
12
|
ಸುಂಕವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು. |
13
|
ಯೋಹಾನನು ಅವರಿಗೆ, “ನೇಮಕವಾದ ತೆರಿಗೆಗಿಂತ ಹೆಚ್ಚಾಗಿ ಜನರಿಂದ ತೆಗೆದುಕೊಳ್ಳಬೇಡಿರಿ” ಎಂದು ಹೇಳಿದನು. |
14
|
ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು. ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು. |
15
|
ಜನರೆಲ್ಲರೂ ಕ್ರಿಸ್ತನ ಆಗಮನವನ್ನು ನಿರೀಕ್ಷಿಸುತ್ತಿದ್ದುದರಿಂದ ಅವರು ಯೋಹಾನನ ಬಗ್ಗೆ ಆಶ್ಚರ್ಯಪಟ್ಟು, “ಒಂದು ವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿಕೊಂಡರು. |
16
|
ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಶಕ್ತನಾಗಿರುವಾತನು ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ನನಗೆ ಯೋಗ್ಯತೆ ಇಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ, ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. |
17
|
ಆತನು ರಾಶಿಯನ್ನು ಶುದ್ಧಮಾಡುವುದಕ್ಕೆ ಸಿದ್ಧನಾಗಿ ಬರುವನು. ಆತನು ಒಳ್ಳೆಯ ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ತನ್ನ ಕಣಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. |
18
|
ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು. |
19
|
ರಾಜ್ಯಪಾಲ ಹೆರೋದನು ತನ್ನ ಸಹೋದರನ ಹೆಂಡತಿಯಾದ ಹೆರೋದ್ಯಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮತ್ತು ಹೆರೋದನು ಮಾಡಿದ್ದ ಅನೇಕ ದುಷ್ಕೃತ್ಯಗಳನ್ನು ಯೋಹಾನನು ಖಂಡಿಸಿದನು. |
20
|
ಆದ್ದರಿಂದ ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿ ತನ್ನ ದುಷ್ಕೃತ್ಯಗಳೊಂದಿಗೆ ಮತ್ತೊಂದು ದುಷ್ಕೃತ್ಯವನ್ನು ಸೇರಿಸಿಕೊಂಡನು. |
21
|
ಯೋಹಾನನನ್ನು ಸೆರೆಮನೆಗೆ ಹಾಕುವುದಕ್ಕಿಂತ ಮೊದಲು, ಜನರೆಲ್ಲರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಆಗ ಯೇಸು ಸಹ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಿತು. |
22
|
ಪವಿತ್ರಾತ್ಮನು ಆತನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದು ಬಂದನು. ಆ ಕೂಡಲೇ, ಪರಲೋಕದಿಂದ ಧ್ವನಿಯೊಂದು ಹೊರಟು, “ನೀನು ನನ್ನ ಪ್ರಿಯ ಮಗನು, ನಾನು ನಿನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು. |
23
|
ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಯೇಸು ಯೋಸೇಫನ ಮಗನೆಂದು ಜನರು ಭಾವಿಸಿದ್ದರು. ಯೋಸೇಫನು ಹೇಲಿಯ ಮಗನು. |
24
|
ಹೇಲಿಯು ಮತ್ತಾತನ ಮಗನು. ಮತ್ತಾತನು ಲೇವಿಯ ಮಗನು. ಲೇವಿಯು ಮೆಲ್ಕಿಯ ಮಗನು. ಮೆಲ್ಕಿಯು ಯನ್ನಾಯನ ಮಗನು. ಯನ್ನಾಯನು ಯೋಸೇಫನ ಮಗನು. |
25
|
ಯೋಸೇಫನು ಮತ್ತಥೀಯನ ಮಗನು. ಮತ್ತಥೀಯನು ಆಮೋಸನ ಮಗನು. ಆಮೋಸನು ನಹೂಮನ ಮಗನು. ನಹೂಮನು ಎಸ್ಲಿಯ ಮಗನು. ಎಸ್ಲಿಯು ನಗ್ಗಾಯನ ಮಗನು. |
26
|
ನಗ್ಗಾಯನು ಮಹಾಥತನ ಮಗನು. ಮಹಾಥತನು ಮತ್ತಥೀಯನ ಮಗನು. ಮತ್ತಥೀಯನು ಶಿಮೀಯನ ಮಗನು. ಶಿಮೀಯನು ಯೋಸೇಖನ ಮಗನು. ಯೋಸೇಖನು ಯೂದನ ಮಗನು. |
27
|
ಯೂದನು ಯೋಹಾನನ ಮಗನು. ಯೋಹಾನನು ರೇಸನ ಮಗನು. ರೇಸನು ಜೆರುಬಾಬೆಲನ ಮಗನು. ಜೆರುಬಾಬೆಲನು ಸಲಥಿಯೇಲನ ಮಗನು. ಸಲಥಿಯೇಲನು ಸೇರಿಯ ಮಗನು. |
28
|
ಸೇರಿಯು ಮೆಲ್ಕಿಯ ಮಗನು. ಮೆಲ್ಕಿಯು ಅದ್ದಿಯ ಮಗನು. ಅದ್ದಿಯು ಕೋಸಾಮನ ಮಗನು. ಕೋಸಾಮನು ಎಲ್ಮದಾಮನ ಮಗನು. ಎಲ್ಮದಾಮನು ಏರನ ಮಗನು. |
29
|
ಏರನು ಯೆಹೋಷುವನ ಮಗನು. ಯೆಹೋಷುವನು ಎಲಿಯೇಜರನ ಮಗನು. ಎಲಿಯೇಜರನು ಯೋರೈವುನ ಮಗನು. ಯೋರೈವುನು ಮತ್ತಾತನ ಮಗನು. ಮತ್ತಾತನು ಲೇವಿಯ ಮಗನು. |
30
|
ಲೇವಿಯು ಸಿಮೆಯೋನನ ಮಗನು. ಸಿಮೆಯೋನನು ಯೂದನ ಮಗನು. ಯೂದನು ಯೋಸೇಫನ ಮಗನು. ಯೋಸೇಫನು ಯೊನಾವುನ ಮಗನು. ಯೊನಾವುನು ಎಲಿಯಕೀಮನ ಮಗನು. |
31
|
ಎಲಿಯಕೀಮನು ಮೆಲೆಯನ ಮಗನು. ಮೆಲೆಯನು ಮೆನ್ನನ ಮಗನು. ಮೆನ್ನನು ಮತ್ತಾಥನ ಮಗನು. ಮತ್ತಾಥನು ನಾತಾನನ ಮಗನು. ನಾತಾನನು ದಾವೀದನ ಮಗನು. |
32
|
ದಾವೀದನು ಇಷಯನ ಮಗನು. ಇಷಯನು ಓಬೇದನ ಮಗನು. ಓಬೇದನು ಬೋವಜನ ಮಗನು. ಬೋವಜನು ಸಲ್ಮೋನನ ಮಗನು. ಸಲ್ಮೋನನು ನಹಸ್ಸೋನನ ಮಗನು. |
33
|
ನಹಸ್ಸೋನನು ಅಮ್ಮಿನಾದಾಬನ ಮಗನು. ಅಮ್ಮಿನಾದಾಬನು ಅದ್ಮಿನನ ಮಗನು. ಅದ್ಮಿನನು ಅರ್ನೈಯನ ಮಗನು. ಅರ್ನೈಯನು ಹೆಸ್ರೋನನ ಮಗನು. ಹೆಸ್ರೋನನು ಪೆರೆಸನ ಮಗನು. ಪೆರೆಸನು ಯೂದನ ಮಗನು. |
34
|
ಯೂದನು ಯಾಕೋಬನ ಮಗನು. ಯಾಕೋಬನು ಇಸಾಕನ ಮಗನು. ಇಸಾಕನು ಅಬ್ರಹಾಮನ ಮಗನು. ಅಬ್ರಹಾಮನು ತೇರಹನ ಮಗನು. ತೇರಹನು ನಹೋರನ ಮಗನು. |
35
|
ನಹೋರನು ಸೆರೂಗನ ಮಗನು. ಸೆರೂಗನು ರೆಗೂವನ ಮಗನು. ರೆಗೂವನು ಪೆಲೆಗನ ಮಗನು. ಪೆಲೆಗನು ಎಬರನ ಮಗನು. ಎಬರನು ಸಾಲನ ಮಗನು. |
36
|
ಸಾಲನು ಕಯಿನನ ಮಗನು. ಕಯಿನನು ಅರ್ಪಕ್ಷದನ ಮಗನು. ಅರ್ಪಕ್ಷದನು ಶೇಮನ ಮಗನು. ಶೇಮನು ನೋಹನ ಮಗನು. ನೋಹನು ಲಾಮೆಕನ ಮಗನು. |
37
|
ಲಾಮೆಕನು ಮೆತೂಷಲನ ಮಗನು. ಮೆತೂಷಲನು ಹನೋಕನ ಮಗನು. ಹನೋಕನು ಯೆರೆದನ ಮಗನು. ಯೆರೆದನು ಮಹಲಲೇಲನ ಮಗನು. ಮಹಲಲೇಲನು ಕಯಿನಾನನ ಮಗನು. |
38
|
ಕಯಿನಾನನು ಎನೋಷನ ಮಗನು. ಎನೋಷನು ಸೇಥನ ಮಗನು. ಸೇಥನು ಆದಾಮನ ಮಗನು. ಆದಾಮನು ದೇವರ ಮಗನು. |
Luke 3:1 Kannada Language Bible Words basic statistical display
COMING SOON ...