1
|
ಯೆಹೂದಕುಲಕ್ಕೆ ಕೊಟ್ಟ ಸ್ವಾಸ್ತ್ಯವನ್ನು ಆ ಕುಲದ ಗೋತ್ರಗಳಲ್ಲಿ ಹಂಚಲಾಗಿತ್ತು. ಆ ಪ್ರದೇಶವು ಎದೋಮಿನ ಗಡಿಯವರೆಗೂ ದಕ್ಷಿಣದಲ್ಲಿ ತೇಮಾನಿನ ಅಂಚಿನಲ್ಲಿರುವ ಚಿನ್ ಅರಣ್ಯದವರೆಗೂ ವಿಸ್ತರಿಸಿಕೊಂಡಿತ್ತು. |
2
|
ಯೆಹೂದ್ಯರ ಸ್ವಾಸ್ತ್ಯವು ಲವಣಸಮುದ್ರದ ದಕ್ಷಿಣ ತೀರದಿಂದ ಆರಂಭವಾಗಿತ್ತು. |
3
|
ಆ ಸೀಮೆಯು ದಕ್ಷಿಣದಲ್ಲಿ ಸ್ಕಾರ್ಪಿಯನ್ ಎಂಬ ಇಕ್ಕಟ್ಟಾದ ಮಾರ್ಗದಿಂದ ಮುನ್ನಡೆದು ಚಿನ್ ಮರುಭೂಮಿಯವರೆಗೆ ಹೋಗಿತ್ತು. ಅಲ್ಲಿಂದ ಅದು ದಕ್ಷಿಣದಲ್ಲಿ ಕಾದೇಶ್ಬರ್ನೇಯದವರೆಗೂ ಹೆಚ್ರೋನ್ನಿಂದ ಅದ್ದಾರವರೆಗೂ ಮುಂದುವರಿದು ಅಲ್ಲಿ ತಿರುಗಿಕೊಂಡು ಕರ್ಕದವರೆಗೆ ವಿಸ್ತರಿಸಿತ್ತು. |
4
|
ಆ ಸೀಮೆಯು ಈಜಿಪ್ಟಿನ ಅಚ್ಮೋನಿನ ಹಳ್ಳಕ್ಕೆ ಮುಂದುವರೆದು ಮೆಡಿಟರೆನಿಯನ್ ಸಮುದ್ರದವರೆಗೆ ಹಬ್ಬಿತ್ತು. ಈ ಭೂಮಿಯೆಲ್ಲಾ ಅವರ ದಕ್ಷಿಣ ಸೀಮೆಯಲ್ಲಿತ್ತು. |
5
|
ಅವರ ಪ್ರದೇಶದ ಪೂರ್ವದಿಕ್ಕಿನ ಸೀಮೆ ಮೃತ್ಯುಸಾಗರದ ದಂಡೆಯಿಂದ ಜೋರ್ಡನ್ ನದಿಯು ಸಮುದ್ರವನ್ನು ಸೇರುವ ಕ್ಷೇತ್ರದವರೆಗೆ ಹಬ್ಬಿತ್ತು. ಅವರ ಉತ್ತರ ಸೀಮೆಯು ಜೋರ್ಡನ್ ನದಿಯು ಲವಣ ಸಮುದ್ರವನ್ನು ಸೇರುವ ಕ್ಷೇತ್ರದಿಂದ ಆರಂಭವಾಗಿ |
6
|
ಅಲ್ಲಿಂದ ಬೇತ್ಹೊಗ್ಲಾಕ್ಕೆ ಸಾಗಿ ಬೇತ್ಅರಬಾದ ಉತ್ತರಕ್ಕೆ ಮುಂದುವರಿದಿತ್ತು. ಅಲ್ಲಿಂದ ಅದು ರೂಬೇನನ ಮಗನಾದ ಬೋಹನನ ಬಂಡೆಯವರೆಗೆ ಸಾಗಿತ್ತು. |
7
|
ಅಲ್ಲಿಂದ ಅದು ಆಕೋರಿನ ಕಣಿವೆಯಿಂದ ಹಾದು ದೆಬೀರಕ್ಕೆ ಮುಟ್ಟಿ ಅಲ್ಲಿ ಉತ್ತರಕ್ಕೆ ತಿರುಗಿ ಗಿಲ್ಗಾಲಕ್ಕೆ ಮುಟ್ಟಿತ್ತು. ಅದು ಮೀಮಿನ ಬೆಟ್ಟದಿಂದ ಹೋಗುವ ದಾರಿಯ ಎದುರಿಗೆ ಗಿಲ್ಗಾಲ್ ಇದೆ. ಅದು ಹಳ್ಳದ ದಕ್ಷಿಣ ಭಾಗದಲ್ಲಿದೆ. ಈ ಸೀಮೆಯು ಏನ್ಷೆಮೆಷ್ ನದಿಯವರೆಗೆ ಹೋಗಿ ಏನ್ರೋಗೆಲ್ನಲ್ಲಿ ಕೊನೆಗೊಳ್ಳುತ್ತದೆ. |
8
|
ಆ ಸೀಮೆಯು ಜೆರುಸಲೇಮ್ ಎಂದು ಕರೆಯಲ್ಪಟುವ ಯೆಬೂಸಿಯ ನಗರದ ದಕ್ಷಿಣ ಮಾರ್ಗವಾಗಿ ಬೆನ್ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಆ ಸ್ಧಳದಲ್ಲಿ ಸೀಮೆಯು ಹಿನ್ನೋಮ್ ಕಣಿವೆಯ ಪಶ್ಚಿಮದಿಕ್ಕಿನ ಬೆಟ್ಟದ ತುದಿಗೆ ಹೋಗುತ್ತದೆ. ಇದು ರೆಫಾಯೀಮ್ ಕಣಿವೆಯ ಉತ್ತರದ ಕೊನೆ. |
9
|
ಅಲ್ಲಿಂದ ಆ ಸೀಮೆಯು ನೆಫ್ತೋಹ ಬುಗ್ಗೆಗೆ ಹೋಗುತ್ತದೆ; ಅಲ್ಲಿಂದ ಎಫ್ರೋನ್ ಬೆಟ್ಟದ ಸಮೀಪದ ನಗರಗಳಿಗೆ ಹೋಗುತ್ತದೆ; ಅಲ್ಲಿಂದ ತಿರುಗಿ ‘ಬಾಲಾ’ ಎಂಬ ಊರಿಗೆ ಹೋಗುತ್ತದೆ. (ಬಾಲಾವನ್ನು ಕಿರ್ಯತ್ಯಾರೀಮ್ ಎಂದೂ ಕರೆಯುತ್ತಾರೆ.) |
10
|
ಬಾಲಾದಲ್ಲಿ ಆ ಸೀಮೆಯು ಪಶ್ಚಿಮಕ್ಕೆ ತಿರುಗಿಕೊಂಡು ಸೇಯೀರ್ ಬೆಟ್ಟಪ್ರದೇಶಕ್ಕೆ ಹೋಗುತ್ತದೆ; ಅಲ್ಲಿಂದ ಅದು ಕೆಸಾಲೋನ್ ಎಂಬ ಯಾರೀಮ್ ಬೆಟ್ಟದ ಉತ್ತರ ಮಾರ್ಗವಾಗಿ ಇಳಿಯುತ್ತಾ ಬೇತ್ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಹೋಗುತ್ತದೆ. |
11
|
ಅಲ್ಲಿಂದ ಆ ಗಡಿಯು ಉತ್ತರ ದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಅಲ್ಲಿಂದ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡವನ್ನು ತಲುಪುತ್ತದೆ. ಆ ಗಡಿಯು ಯಬ್ನೇಲಿನವರೆಗೆ ಮುಂದುವರೆದು ನಂತರ ಮೆಡಿಟರೆನಿಯನ್ ಸಮುದ್ರ ತೀರದಲ್ಲಿ ಮುಗಿಯುವುದು. |
12
|
ಮೆಡಿಟರೆನಿಯನ್ ಸಮುದ್ರತೀರವೇ ಯೆಹೂದ್ಯರ ಸ್ವಾಸ್ತ್ಯದ ಪಶ್ಚಿಮ ಸೀಮೆಯಾಗಿತ್ತು. ಹೀಗೆ ಯೆಹೂದ್ಯರ ಸ್ವಾಸ್ತ್ಯವು ಈ ನಾಲ್ಕು ಸೀಮೆಯ ಒಳಗಡೆ ಇತ್ತು. ಯೆಹೂದ್ಯರ ಗೋತ್ರಗಳು ಈ ಪ್ರದೇಶದಲ್ಲಿದ್ದವು. |
13
|
ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಸ್ವಾಸ್ತ್ಯದಲ್ಲಿಯೇ ಸ್ವಲ್ಪ ಪ್ರದೇಶವನ್ನು ಕೊಡಬೇಕೆಂದು ದೇವರು ಯೆಹೋಶುವನಿಗೆ ಹೇಳಿದ್ದನು. ಅದಕ್ಕಾಗಿ ಯೆಹೋಶುವನು ಕಾಲೇಬನಿಗೆ ದೇವರು ಆಜ್ಞಾಪಿಸಿದ ಪ್ರದೇಶವನ್ನು ಕೊಟ್ಟನು. ಯೆಹೋಶುವನು ಅವನಿಗೆ ಹೆಬ್ರೋನ್ ಎಂಬ ಕಿರ್ಯಾತ್ ಅರ್ಬ ಊರನ್ನು ಕೊಟ್ಟನು. (ಅರ್ಬನು ಅನಾಕನ ತಂದೆ.) |
14
|
ಹೆಬ್ರೋನ್ನಲ್ಲಿ ವಾಸವಾಗಿದ್ದ ಮೂರು ಅನಾಕ ಕುಟುಂಬಗಳನ್ನು ಕಾಲೇಬನು ಅಲ್ಲಿಂದ ಬಲವಂತವಾಗಿ ಹೊರಡಿಸಿದನು. ಆ ಕುಟುಂಬಗಳ ಹೆಸರುಗಳು ಶೇಷೈ, ಅಹೀಮನ್ ಮತ್ತು ತಲ್ಮೈ. ಅವರು ಅನಾಕನ ವಂಶಸ್ಥರಾಗಿದ್ದರು. |
15
|
ಆಮೇಲೆ ಕಾಲೇಬನು ದೆಬೀರಿನಲ್ಲಿ ವಾಸಮಾಡುತ್ತಿದ್ದ ಜನರ ವಿರುದ್ಧ ಹೋರಾಡಿದನು. (ಹಿಂದಿನ ಕಾಲದಲ್ಲಿ ದೆಬೀರಿಗೆ ಕಿರ್ಯತ್ಸೇಫೇರ್ ಎಂದು ಕರೆಯುತ್ತಿದ್ದರು.) |
16
|
ಕಾಲೇಬನು, “ನಾನು ಕಿರ್ಯತ್ ಸೇಫೇರಿನ ಮೇಲೆ ಧಾಳಿ ಮಾಡಲಿಚ್ಛಿಸುತ್ತೇನೆ. ಆ ನಗರದ ಮೇಲೆ ಧಾಳಿಮಾಡಿ ಅದನ್ನು ಗೆದ್ದುಕೊಟ್ಟವರಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡುತ್ತೇನೆ” ಎಂದು ಸಾರಿದನು. |
17
|
ಕೆನಜನ ಮಗನಾದ ಒತ್ನೀಯೇಲನು ಆ ಪಟ್ಟಣವನ್ನು ಗೆದ್ದನು. ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನಿಗೆ ಮದುವೆ ಮಾಡಿಕೊಟ್ಟನು. |
18
|
ಒತ್ನೀಯೇಲನ ಮನೆಗೆ ಅಕ್ಷಾ ಹೋದಳು. ಕಾಲೇಬನಿಂದ ಇನ್ನಷ್ಟು ಭೂಮಿಯನ್ನು ಕೇಳಲು ಅಕ್ಷಾಳನ್ನು ಒತ್ನೀಯೇಲನು ಪ್ರೇರೇಪಿಸಿದನು. ಅಕ್ಷಾಳು ತನ್ನ ತಂದೆಯ ಬಳಿಗೆ ಬಂದು ಕತ್ತೆಯ ಮೇಲಿಂದ ಇಳಿದಾಗ, “ನಿನಗೆ ಏನುಬೇಕು?” ಎಂದು ಕಾಲೇಬನು ಕೇಳಿದನು. |
19
|
ಅದಕ್ಕೆ ಅವಳು “ನನ್ನನ್ನು ಆಶೀರ್ವದಿಸು. ನೀನು ನನಗೆ ನೆಗೆವ್ನಲ್ಲಿ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನೀರಿರುವ ಭೂಮಿಯನ್ನು ಸ್ವಲ್ಪಕೊಡು” ಎಂದು ಕೇಳಿಕೊಂಡಳು. ಅವಳ ಕೋರಿಕೆಗನುಸಾರವಾಗಿ ಕಾಲೇಬನು ಮೇಲಿನ ಮತ್ತು ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು. |
20
|
ದೇವರು ವಾಗ್ದಾನ ಮಾಡಿದ ಭೂಮಿಯನ್ನು ಯೆಹೂದ ಕುಲವು ಪಡೆದುಕೊಂಡಿತು. ಪ್ರತಿಯೊಂದು ಗೋತ್ರವು ಆ ಭೂಮಿಯ ಸ್ವಲ್ಪ ಭಾಗವನ್ನು ಪಡೆಯಿತು. |
21
|
ಯೆಹೂದ ಕುಲವು ನೆಗೆವ್ ದಕ್ಷಿಣಭಾಗದಲ್ಲಿದ್ದ ಎಲ್ಲ ಊರುಗಳನ್ನು ಪಡೆಯಿತು. ಈ ಊರುಗಳು ಎದೋಮಿನ ಸೀಮೆಯ ಹತ್ತಿರ ಇದ್ದವು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ: ಕಬ್ಜೇಲ್, ಏದೆರ್, ಯಾಗೂರ್, |
23
|
ಕೆದೆಷ್, ಹಾಚೋರ್, ಇತ್ನಾನ್, |
24
|
ಜೀಫ್, ಟೆಲೆಮ್, ಬೆಯಾಲೋತ್, |
25
|
ಹಾಚೋರ್ಹದತ್ತಾ, ಹಾಚೋರ್ ಎಂಬುವ ಕಿರ್ಯೋತ್ಹೆಚ್ರೋನ್, |
27
|
ಹಚರ್ಗದ್ದಾ, ಹೆಷ್ಮೋನ್, ಬೇತ್ಪೆಲೆಟ್, |
28
|
[This verse may not be a part of this translation] |
29
|
[This verse may not be a part of this translation] |
30
|
ಎಲ್ಟೋಲದ್, ಕೆಸೀಲ್, ಹೊರ್ಮಾ, |
31
|
ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ, |
32
|
ಲೆಬಾವೋತ್, ಶಿಲ್ಹೀಮ್, ಆಯಿನ್ ಮತ್ತು ರಿಮ್ಮೋನ್. ಒಟ್ಟಿಗೆ ಇಪ್ಪತ್ತೊಂಭತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
33
|
ಯೆಹೂದ ಕುಲದವರು ಪಶ್ಚಿಮದಿಕ್ಕಿನ ಇಳಕಲಿನ ಪ್ರದೇಶದಲ್ಲಿಯೂ ಕೆಲವು ಊರುಗಳನ್ನು ಪಡೆದಿದ್ದರು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ: ಎಷ್ಟಾವೋಲ್, ಚೊರ್ಗಾ, ಅಶ್ನಾ, |
34
|
ಜನೋಹ, ಏಂಗನ್ನೀಮ್, ತಪ್ಪೂಹ, ಏನಾಮ್, |
35
|
ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ, |
36
|
ಶಾರಯೀಮ್, ಅದೀತಯಿಮ್, ಗೆದೇರಾ ಮತ್ತು ಗೆದೆರೋತಯಿಮ್. ಒಟ್ಟಿನಲ್ಲಿ ಹದಿನಾಲ್ಕು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
37
|
ಯೆಹೂದ ಕುಲದವರಿಗೆ ಈ ಊರುಗಳನ್ನು ಸಹ ಕೊಡಲಾಯಿತು: ಚೆನಾನ್, ಹದಾಷಾ, ಮಿಗ್ದಲ್ಗಾದ್, |
38
|
ದಿಲಾನ್, ಮಿಚ್ಪೆ, ಯೊಕ್ತೇಲ್, |
39
|
ಲಾಕೀಷ್, ಬೊಚ್ಕತ್, ಎಗ್ಲೋನ್, |
40
|
ಕಬ್ಬೋನ್, ಲಹ್ಮಾಸ್, ಕಿತ್ಲೀಷ್, |
41
|
ಗೆದೇರೋತ್, ಬೇತ್ದಾಗೋನ್, ನಾಮಾ ಮತ್ತು ಮಕ್ಕೆದಾ. ಒಟ್ಟಿನಲ್ಲಿ ಹದಿನಾರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
42
|
ಯೆಹೂದದ ಜನರು ಈ ಊರುಗಳನ್ನು ಸಹ ಪಡೆದುಕೊಂಡರು: ಲಿಬ್ನಾ, ಎತೆರ್, ಆಷಾನ್, |
43
|
ಇಫ್ತಾಹ, ಅಶ್ನಾ, ನೆಚೀಬ್, |
44
|
ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
45
|
ಯೆಹೂದದ ಜನರು ಎಕ್ರೋನ್ ಪಟ್ಟಣವನ್ನು ಮತ್ತು ಅದರ ಸಮೀಪದಲ್ಲಿದ್ದ ಎಲ್ಲ ಸಣ್ಣ ಊರುಗಳನ್ನು ಮತ್ತು ಹೊಲಗದ್ದೆಗಳನ್ನು ಪಡೆದುಕೊಂಡರು. |
46
|
ಎಕ್ರೋನಿನ ಪಶ್ಚಿಮದಲ್ಲಿದ್ದ ಪ್ರದೇಶ ಮತ್ತು ಅಷ್ಡೋದಿನ ಹತ್ತಿರದ ಎಲ್ಲಾ ಊರುಗಳನ್ನು ಮತ್ತು ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. |
47
|
ಅಷ್ಡೋದಿನ ಸುತ್ತಮುತ್ತಲಿನ ಎಲ್ಲ ಕ್ಷೇತ್ರ ಮತ್ತು ಅಲ್ಲಿಯ ಸಣ್ಣ ಊರುಗಳು ಯೆಹೂದ ಪ್ರದೇಶದ ಭಾಗವಾಗಿದ್ದವು. ಯೆಹೂದದ ಜನರು ಗಾಜಾದ ಸುತ್ತಮುತ್ತಲಿನ ಕ್ಷೇತ್ರ ಮತ್ತು ಹತ್ತಿರದ ಊರುಕೇರಿಗಳನ್ನೂ ಹೊಲಗದ್ದೆಗಳನ್ನೂ ಪಡೆದುಕೊಂಡರು. ಅವರ ನೆಲವು ಈಜಿಪ್ಟಿನ ನದಿಯವರೆಗೂ ವಿಸ್ತರಿಸಿತ್ತು; ಮೆಡಿಟರೆನಿಯನ್ ಸಮುದ್ರದ ತೀರದುದ್ದಕ್ಕೂ ಚಾಚಿತ್ತು. |
48
|
ಯೆಹೂದದ ಜನರಿಗೆ ಬೆಟ್ಟಪ್ರದೇಶದಲ್ಲಿಯೂ ಊರುಗಳನ್ನು ಕೊಡಲಾಗಿತ್ತು. ಆ ಊರುಗಳ ಪಟ್ಟಿ ಇಂತಿದೆ: ಶಾಮೀರ್, ಯತ್ತೀರ್, ಸೋಕೋ, |
49
|
ದನ್ನಾ, ದೆಬೀರ್ ಎಂಬ ಕಿರ್ಯತ್ಸನ್ನಾ, |
50
|
ಅನಾಬ್, ಎಷ್ಟೆಮೋ, ಅನೀಮ್, |
51
|
ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
52
|
ಯೆಹೂದದ ಜನರಿಗೆ ಈ ಊರುಗಳನ್ನು ಸಹ ಕೊಡಲಾಯಿತು: ಅರಬ್, ದೂಮಾ, ಎಷಾನ್, |
53
|
ಯಾನೂಮ್, ಬೇತ್ತಪ್ಪೂಹ, ಅಫೇಕಾ, |
54
|
ಹುಮ್ಟಾ ಹೆಬ್ರೋನ್ ಎಂಬ ಕಿರ್ಯತ್ಅರ್ಬ ಮತ್ತು ಚೀಯೋರ್ ಎಂಬ ಒಂಭತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
55
|
ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು: ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ, |
56
|
ಇಜ್ರೇಲ್, ಯೆಗ್ದೆಯಾಮ್, ಜನೋಹ, |
57
|
ಕಯಿನ್, ಗಿಬೆಯಾ ಮತ್ತು ತಿಮ್ನಾ ಎಂಬ ಹತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
58
|
ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು: ಹಲ್ಹೂಲ್, ಬೇತ್ಚೂರ್, ಗೆದೋರ್, |
59
|
ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
60
|
ಯೆಹೂದದ ಜನರಿಗೆ ರಬ್ಬಾ ಮತ್ತು ಕಿರ್ಯತ್ಯಾರೀಮ್ ಎಂದು ಕರೆಯಲ್ಪಡುವ ಕಿರ್ಯತ್ಬಾಳ್ ಎಂಬ ಎರಡು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಸಹ ಕೊಡಲಾಯಿತು. |
61
|
ಯೆಹೂದದ ಜನರಿಗೆ ಮರುಭೂಮಿಯಲ್ಲಿಯೂ ಕೆಲವು ಊರುಗಳನ್ನು ಕೊಡಲಾಯಿತು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ: ಬೇತ್ಅರಾಬಾ, ಮಿದ್ದೀನ್, ಸೆಕಾಕಾ, |
62
|
ನಿಬ್ಷಾನ್, ಉಪ್ಪಿನಪಟ್ಟಣ, ಮತ್ತು ಏಂಗೆದೀ ಎಂಬ ಆರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. |
63
|
ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಹಾಕಲು ಯೆಹೂದ ಕುಲದವರಿಗೆ ಸಾಧ್ಯವಾಗಲಿಲ್ಲ. ಆದುದರಿಂದ ಯೆಬೂಸಿಯರು ಇಂದಿನವರೆಗೂ ಜೆರುಸಲೇಮಿನಲ್ಲಿ ಯೆಹೂದ ಕುಲದವರೊಡನೆ ವಾಸವಾಗಿದ್ದಾರೆ. |
Joshua 15:1 Kannada Language Bible Words basic statistical display
COMING SOON ...