1
|
“ಯೆಹೋವನಾದ ನಾನು ಇಸ್ರೇಲನ್ನು ಸಣ್ಣ ಮಗುವಾಗಿದ್ದಾಗಲೇ ಪ್ರೀತಿಸಿದೆನು. ನನ್ನ ಮಗನನ್ನು ಈಜಿಪ್ಟಿನಿಂದ ಹೊರ ಕರೆದೆನು. |
2
|
ಎಷ್ಟು ಹೆಚ್ಚಾಗಿ ನಾನು ಇಸ್ರೇಲರನ್ನು ಕರೆದೆನೋ ಅಷ್ಟೇ ಹೆಚ್ಚಾಗಿ ಅವರು ನನ್ನನ್ನು ತೊರೆದರು. ಇಸ್ರೇಲರು ಬಾಳನ ವಿಗ್ರಹಗಳಿಗೆ ಯಜ್ಞವನ್ನರ್ಪಿಸಿದರು. ವಿಗ್ರಹಗಳಿಗೆ ಧೂಪ ಹಾಕಿದರು. |
3
|
ಆದರೆ ಎಫ್ರಾಯೀಮನಿಗೆ ನಡೆಯಲು ಕಲಿಸಿದ್ದು ನಾನು. ಇಸ್ರೇಲರನ್ನು ನಾನು ನನ್ನ ತೋಳುಗಳಲ್ಲಿ ಎತ್ತಿಕೊಂಡೆನು. ನಾನು ಅವರನ್ನು ಗುಣಪಡಿಸಿದೆನು. ಆದರೆ ಅವರಿಗೆ ಅದು ಗೊತ್ತಿಲ್ಲ. |
4
|
ನಾನು ಅವರನ್ನು ಪ್ರೀತಿ ಎಂಬ ಹಗ್ಗಗಳಿಂದ ಹತ್ತಿರಕ್ಕೆ ಎಳೆದುಕೊಂಡೆನು. ಅವರಿಗೆ ಸ್ವತಂತ್ರವನ್ನು ಕೊಟ್ಟೆನು. ನಾನು ಬಾಗಿ ಅವರಿಗೆ ಉಣಿಸಿದೆನು. |
5
|
“ದೇವರ ಕಡೆಗೆ ಹಿಂದಿರುಗಲು ಇಸ್ರೇಲರಿಗೆ ಮನಸ್ಸಿಲ್ಲ. ಆದುದರಿಂದ ಅವರು ಈಜಿಪ್ಟಿಗೆ ಹೋಗುವರು. ಅಶ್ಶೂರದ ಅರಸನು ಅವರಿಗೆ ಅರಸನಾಗುವನು. |
6
|
ಅವರ ನಗರದ ಮೇಲೆ ಖಡ್ಗವು ಬೀಸಲ್ಪಟ್ಟು ಅವರ ಬಲಿಷ್ಠರನ್ನು ಸಾಯಿಸುವದು; ಅವರ ನಾಯಕರನ್ನು ನಾಶಮಾಡುವದು. |
7
|
“ನಾನು ಹಿಂದಿರುಗುವೆನೆಂದು ನನ್ನ ಜನರು ಎದುರು ನೋಡುತ್ತಿದ್ದಾರೆ. ಅವರು ಉನ್ನತದಲ್ಲಿರುವ ದೇವರಿಗೆ ಮೊರೆಯಿಡುತ್ತಿದ್ದಾರೆ. ಆದರೆ ದೇವರು ಅವರಿಗೆ ಸಹಾಯ ಮಾಡುವದಿಲ್ಲ. |
8
|
“ಎಫ್ರಾಯೀಮೇ, ನಿನ್ನನ್ನು ಬಿಟ್ಟುಬಿಡಲು ನನಗೆ ಇಷ್ಟವಿಲ್ಲ. ಇಸ್ರೇಲೇ, ನಿನ್ನನ್ನು ಸಂರಕ್ಷಿಸಲು ನನಗೆ ಇಷ್ಟ. ನಿನ್ನನ್ನು ಅದ್ಮದಂತೆ ಮಾಡಲು ನನಗೆ ಮನಸ್ಸಿಲ್ಲ. ನಿನ್ನನ್ನು ಬೋಯೀಮಿನಂತೆ ಮಾಡಲು ನನಗೆ ಮನಸ್ಸಿಲ್ಲ. ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ. ನಿನ್ನ ಮೇಲಿರುವ ನನ್ನ ಪ್ರೀತಿಯು ಆಳವಾಗಿದೆ. |
9
|
ನನ್ನ ಭಯಂಕರವಾದ ಕೋಪವು ಮೇಲುಗೈ ಸಾಧಿಸುವದಿಲ್ಲ. ಎಫ್ರಾಯೀಮನನ್ನು ನಾನು ತಿರುಗಿ ನಾಶಮಾಡುವದಿಲ್ಲ. ನಾನು ದೇವರು, ನರಮನುಷ್ಯನಲ್ಲ. ನಾನು ಪವಿತ್ರನು, ನಿನ್ನೊಂದಿಗಿರುವೆನು. ನನ್ನ ಕೋಪವನ್ನು ಪ್ರದರ್ಶಿಸೆನು. |
10
|
ನಾನು ಸಿಂಹದಂತೆ ಗರ್ಜಿಸುವೆನು. ನಾನು ಗರ್ಜಿಸುವಾಗ ನನ್ನ ಮಕ್ಕಳು ಬರುವರು, ಮತ್ತು ನನ್ನನ್ನು ಹಿಂಬಾಲಿಸುವರು. ಪಶ್ಚಿಮದಿಂದ ನನ್ನ ಮಕ್ಕಳು ಹೆದರಿ ನಡುಗುತ್ತಾ ಬರುವರು. |
11
|
ಈಜಿಪ್ಟಿನಿಂದ ಅವರು ಪಕ್ಷಿಗಳಂತೆ ನಡುಗುತ್ತಾ ಬರುವರು. ಅಶ್ಶೂರದಿಂದ ನಡುಗುವ ಪಾರಿವಾಳಗಳ ರೀತಿಯಲ್ಲಿ ಬರುವರು. ಆಗ ನಾನು ಅವರನ್ನು ಮನೆಗೆ ಕರಕೊಂಡು ಹೋಗುವೆನು. ಇದು ಯೆಹೋವನ ನುಡಿ. |
12
|
ಎಫ್ರಾಯೀಮನು ಸುಳ್ಳುದೇವರುಗಳಿಂದ ನನ್ನನ್ನು ಸುತ್ತುವರಿದನು. ಇಸ್ರೇಲಿನ ಜನರು ನನಗೆ ವಿರುದ್ಧವಾಗಿ ಎದ್ದರು. ಆದರೆ ಅವರು ನಾಶವಾದರು. ಯೆಹೂದನು ಈಗಲೂ ಎಲ್ ಜೊತೆಯಲ್ಲಿ ನಡೆಯುತ್ತಿದ್ದಾನೆ. ಯೆಹೂದನು ಪರಿಶುದ್ಧರಿಗೆ ನಿಷ್ಠೆಯಿಂದಿದ್ದಾನೆ.” |
Hosea 11:1 Kannada Language Bible Words basic statistical display
COMING SOON ...