Indian Language Bible Word Collections
Psalms 8:1
Psalms Chapters
Psalms 8 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Psalms Chapters
Psalms 8 Verses
1
|
ನಮ್ಮ ದೇವರಾದ ಓ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ. |
2
|
ಶತ್ರುವನ್ನೂ ಮುಯ್ಯಿಗೆ ಮುಯ್ಯಿ ಕೊಡುವವನನ್ನೂ ನಿಲ್ಲಿಸಿಬಿಡುವದಕ್ಕೆ ನಿನ್ನ ವೈರಿಗಳ ನಿಮಿತ್ತ ಶಿಶುಗಳ ಮತ್ತು ಮೊಲೆ ಕೂಸುಗಳ ಬಾಯಿಂದ ನೀನು ನಿನ್ನ ಬಲವನ್ನು ಸ್ಥಾಪಿಸಿದ್ದೀ. |
3
|
ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ |
4
|
ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು? |
5
|
ಅವನನ್ನು ದೂತರಿಗಿಂತ ಸ್ವಲ್ಪಕಡಿಮೆ ಮಾಡಿ ಪ್ರಭಾವವನ್ನೂ ಘನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ. |
6
|
ನಿನ್ನ ಕೈಕೆಲಸಗಳ ಮೇಲೆ ಅವನನ್ನು ಆಳುವಂತೆ ಮಾಡಿದ್ದೀ; |
7
|
ಎಲ್ಲಾ ಕುರಿದನಗಳನ್ನೂ ಹೌದು, ಅಡವಿಯ ಮೃಗಗಳನ್ನೂ |
8
|
ಆಕಾಶದ ಪಕ್ಷಿ ಗಳನ್ನೂ ಸಮುದ್ರದ ವಿಾನುಗಳನ್ನೂ ಸಮುದ್ರದಲ್ಲಿ ಸಂಚರಿಸುವಂಥದ್ದನ್ನೆಲ್ಲಾ ಅವನ ಪಾದಗಳ ಕೆಳಗೆ ಹಾಕಿದ್ದೀ. |
9
|
ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. |