Indian Language Bible Word Collections
Proverbs 8:26
Proverbs Chapters
Proverbs 8 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 8 Verses
1
|
ಜ್ಞಾನವು ಕೂಗುತ್ತದಲ್ಲವೋ? ಮತ್ತು ತಿಳುವಳಿಕೆಯು ತನ್ನ ಸ್ವರವನ್ನು ಕೇಳುವಂತೆ ಮಾಡುತ್ತದಲ್ಲವೋ? |
2
|
ಉನ್ನತ ಸ್ಥಳಗಳ ತುದಿಯ ಲ್ಲಿಯೂ ಹಾದಿಗಳ ಸ್ಥಳಗಳಲ್ಲಿಯೂ ಮಾರ್ಗದ ಲ್ಲಿಯೂ ನಿಂತುಕೊಳ್ಳುತ್ತದೆ. |
3
|
ದ್ವಾರಗಳ ಬಳಿಯ ಪಟ್ಟ ಣದ ಪ್ರವೇಶದಲ್ಲಿಯೂ ಒಳಗೆ ಬರುವ ಬಾಗಲು ಗಳಲ್ಲಿಯೂ ಆಕೆ ಕೂಗುವದೇನಂದರೆ-- |
4
|
ಓ ಮನು ಷ್ಯರೇ, ನಿಮ್ಮನ್ನೇ ನಾನು ಕರೆಯುತ್ತೇನೆ; ಮನುಷ್ಯ ಪುತ್ರರಿಗೆ ನನ್ನ ಸ್ವರವು ಇರುತ್ತದೆ. |
5
|
ಓ ಜ್ಞಾನಹೀನರೇ, ಜ್ಞಾನವನ್ನು ಗ್ರಹಿಸಿರಿ; ಬುದ್ಧಿಹೀನರೇ, ನೀವು ತಿಳು ವಳಿಕೆಯ ಹೃದಯದವರಾಗಿರ್ರಿ. |
6
|
ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು. |
7
|
ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ. |
8
|
ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ. |
9
|
ಗ್ರಹಿ ಸುವವನಿಗೆ ಅವು ಸ್ಪಷ್ಟವಾಗಿಯೂ ತಿಳುವಳಿಕೆಯನ್ನು ಕಂಡುಕೊಳ್ಳುವವನಿಗೆ ಅವು ನ್ಯಾಯವಾಗಿಯೂ ಇವೆ. |
10
|
ಬೆಳ್ಳಿಯನ್ನಲ್ಲ, ನನ್ನ ಶಿಕ್ಷಣವನ್ನೂ ಆಯಲ್ಪಟ್ಟ ಬಂಗಾ ರಕ್ಕಿಂತ ತಿಳುವಳಿಕೆಯನ್ನೂ ಪಡೆದುಕೋ. |
11
|
ಮಾಣಿಕ್ಯ ಗಳಿಗಿಂತ ಜ್ಞಾನವು ಉತ್ತಮ, ಅಪೇಕ್ಷಿಸಲ್ಪಡತಕ್ಕ ಎಲ್ಲಾ ವಸ್ತುಗಳು ಅದಕ್ಕೆ ಹೋಲಿಸುವದಕ್ಕಾಗದು. |
12
|
ಜ್ಞಾನ ವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ಯುಕ್ತಿಯುಳ್ಳ ಕಲ್ಪನಾ ಶಕ್ತಿಯ ತಿಳುವಳಿಕೆಯನ್ನು ನಾನು ಕಂಡುಕೊಳ್ಳುತ್ತೇನೆ. |
13
|
ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ. |
14
|
ಆಲೋಚನೆಯೂ ಸುಜ್ಞಾನವೂ ನನ್ನವು; ವಿವೇಕವು ನಾನೇ. ನನಗೆ ಸಾಮರ್ಥ್ಯವಿದೆ. |
15
|
ನನ್ನ ಮೂಲಕ ರಾಜರು ಆಳುವರು. ಪ್ರಧಾನರು ತೀರ್ಪು ಕೊಡುವರು. |
16
|
ನನ್ನಿಂದ ಅಧಿಪತಿಗಳೂ ಕೀರ್ತಿವಂತರೂ ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೂ ಆಳುವರು. |
17
|
ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ. ಶೀಘ್ರವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು. |
18
|
ಐಶ್ವರ್ಯವೂ ಘನತೆಯೂ ಹೌದು, ಶ್ರೇಷ್ಠ ಸಂಪತ್ತೂ ನೀತಿಯೂ ನನ್ನೊಂದಿಗಿವೆ. |
19
|
ನನ್ನ ಫಲವು ಬಂಗಾರಕ್ಕಿಂತಲೂ ಹೌದು, ಚೊಕ್ಕ ಬಂಗಾರಕ್ಕಿಂತಲೂ ನನ್ನ ಆದಾಯವು ಆಯಲ್ಪಟ್ಟ ಬೆಳ್ಳಿಗಿಂತಲೂ ಶ್ರೇಷ್ಠವಾಗಿದೆ. |
20
|
ನೀತಿಯ ಮಾರ್ಗದಲ್ಲಿ ನ್ಯಾಯದ ದಾರಿಗಳ ಮಧ್ಯದಲ್ಲಿ ನಾನು ನಡಿಸುತ್ತೇನೆ. |
21
|
ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದಿದಂತೆ ನಾನು ಅವರ ಬೊಕ್ಕಸ ಗಳನ್ನು ತುಂಬಿಸುವೆನು. |
22
|
ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು. |
23
|
ನಿತ್ಯತ್ವದಿಂದ ಇಲ್ಲವೆ ಆರಂಭದಿಂದ, ಭೂಮಿಯು ಇರುವದಕ್ಕೆ ಮುಂಚೆ ನಾನು ಸ್ಥಾಪಿಸಲ್ಪ ಟ್ಟೆನು. |
24
|
ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು. |
25
|
ಬೆಟ್ಟಗುಡ್ಡಗಳು ಸ್ಥಾಪಿಸಲ್ಪ ಡುವದಕ್ಕಿಂತ ಮುಂಚೆ |
26
|
ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು. |
27
|
ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ |
28
|
ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ |
29
|
ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು. |
30
|
ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು. |
31
|
ಆತನ ಭೂಮಿಯ ವಾಸ ಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು. ಮನುಷ್ಯರ ಕುಮಾರರೊಂದಿಗೆ ನನ್ನ ಆನಂದವಿದ್ದಿತು. |
32
|
ಆದದರಿಂದ ಓ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು. |
33
|
ಶಿಕ್ಷಣವನ್ನು ಕೇಳಿ ಅದನ್ನು ತಿರಸ್ಕರಿಸದೇ ಜ್ಞಾನವಂತರಾಗಿರ್ರಿ. |
34
|
ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ ನನ್ನ ಬಾಗಲುಗಳ ನಿಲುವು ಗಳಲ್ಲಿ ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಕೇಳುವವನು ಧನ್ಯನು. |
35
|
ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಕರ್ತನ ದಯವನ್ನು ಹೊಂದುವನು. |
36
|
ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ. |