1
|
ಬೇಸಿಗೆಯಲ್ಲಿ ಹಿಮದಂತೆಯೂ ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನ ವು ಸರಿಯಲ್ಲ. |
2
|
ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ. |
3
|
ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ. |
4
|
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ. |
5
|
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು. |
6
|
ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ. |
7
|
ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ. |
8
|
ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು. |
9
|
ಕುಡುಕನ ಕೈಯಲ್ಲಿ ಮುಳ್ಳು ಹೊಕ್ಕಂತೆ ಬುದ್ಧಿ ಹೀನರ ಬಾಯಲ್ಲಿ ಸಾಮ್ಯವು ಇರುವದು. |
10
|
ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ. |
11
|
ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ. |
12
|
ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ, |
13
|
ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ. |
14
|
ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ. |
15
|
ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ. |
16
|
ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ. |
17
|
ಹಾದು ಹೋಗುತ್ತಾ ತನ್ನದಾಗ ದಿರುವ ವ್ಯಾಜ್ಯದಲ್ಲಿ ತಲೆಹಾಕುವವನು ಕಿವಿಹಿಡಿದು ನಾಯಿಯನ್ನು ತೆಗೆದುಕೊಂಡು ಹೋಗುವವನಂತೆ ಇದ್ದಾನೆ. |
18
|
ನೆರೆಯವನನ್ನು ಮೋಸಗೊಳಿಸಿ ತಮಾಷೆ ಗೋಸ್ಕರ ಮಾಡಿದೆನಲ್ಲಾ ಎನ್ನುವವನು-- |
19
|
ಕೊಳ್ಳಿ ಗಳನ್ನೂ ಅಂಬುಗಳನ್ನೂ ಸಾವನ್ನೂ ಬೀರುವ ದೊಡ್ಡ ಹುಚ್ಚನ ಹಾಗೆ. |
20
|
ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು. |
21
|
ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹಮಾಡುವವನು ಇರುವನು. |
22
|
ಚಾಡಿಕೋರನ ಮಾತುಗಳು ಗಾಯಗಳ ಹಾಗೆ ಹೊಟ್ಟೆಯೊಳಕ್ಕೆ ಇಳಿಯುತ್ತವೆ. |
23
|
ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ. |
24
|
ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. |
25
|
ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. |
26
|
ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು. |
27
|
ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು. |
28
|
ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ. |
Proverbs 26:1 English Language Bible Words basic statistical display
COMING SOON ...