1
|
ಮತ್ತು ಆತನು ಜನಸಮೂಹಗಳನ್ನು ನೋಡಿದವನಾಗಿ ಪರ್ವತವನ್ನೇರಿದನು; ಅಲ್ಲಿ ಆತನು ಕೂತುಕೊಂಡಾಗ ಆತನ ಶಿಷ್ಯರು ಆತನ ಬಳಿಗೆ ಬಂದರು. |
2
|
ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ -- |
3
|
ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. |
4
|
ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು. |
5
|
ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು. |
6
|
ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು. |
7
|
ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು. |
8
|
ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು. |
9
|
ಸಮಾಧಾನ ಮಾಡುವವರು ಧನ್ಯರು; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು. |
10
|
ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. |
11
|
ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. |
12
|
ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ. |
13
|
ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಅದಕ್ಕೆ ಇನ್ನಾತ ರಿಂದ ರುಚಿ ಬಂದೀತು? ಅಂದಿನಿಂದ ಅದು ನಿಷ್ಪ್ರಯೋಜನವಾದದ್ದಾಗಿ ಹೊರಗೆ ಬಿಸಾಡಲ್ಪಟ್ಟು ಜನರಿಂದ ತುಳಿದಾಡಲ್ಪಡುವದು. |
14
|
ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಇರುವ ಪಟ್ಟಣವು ಮರೆಯಾಗಿರಲಾರದು. |
15
|
ಇಲ್ಲವೆ ಮನುಷ್ಯರು ದೀಪವನ್ನು ಹೊತ್ತಿಸಿ ಕೊಳಗದೊಳಗೆ ಇಡದೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವದು. |
16
|
ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. |
17
|
ನ್ಯಾಯಪ್ರಮಾಣವನ್ನಾಗಲೀ ಪ್ರವಾದನೆಗಳ ನ್ನಾಗಲೀ ಹಾಳುಮಾಡುವದಕ್ಕಾಗಿ ನಾನು ಬಂದೆ ನೆಂದು ನೆನಸಬೇಡಿರಿ, ಹಾಳುಮಾಡುವದಕ್ಕಾಗಿ ಅಲ್ಲ; ಆದರೆ ನೆರವೇರಿಸುವದಕ್ಕಾಗಿ ಬಂದೆನು. |
18
|
ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. |
19
|
ಆದದರಿಂದ ಯಾವನಾದರೂ ಈ ಆಜ್ಞೆಗಳಲ್ಲಿ ಚಿಕ್ಕದಾದ ಒಂದನ್ನು ಮಾರಿ ಹಾಗೆಯೇ ಜನರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅಲ್ಪನೆಂದು ಕರೆಯಲ್ಪಡುವನು; ಯಾವನಾದರೂ ಇವುಗಳನ್ನು ಕೈಕೊಂಡು ಬೋಧಿಸಿದರೆ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಕರೆಯಲ್ಪಡು ವನು. |
20
|
ನಾನು ನಿಮಗೆ ಹೇಳುವದೇನಂದರೆ-- ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ನಿಮ್ಮ ನೀತಿಯು ಹೆಚ್ಚಿನದಾಗಿರದ ಹೊರತು ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವದಕ್ಕಾಗುವದೇ ಇಲ್ಲ. |
21
|
ನೀನು ನರಹತ್ಯ ಮಾಡಬಾರದು; ಯಾವನಾ ದರೂ ನರಹತ್ಯಮಾಡಿದರೆ ನ್ಯಾಯತೀರ್ಪಿನ ಅಪಾ ಯಕ್ಕೆ ಒಳಗಾಗುವನು ಎಂದು ಪೂರ್ವಿಕರು ಹೇಳಿರು ವದನ್ನು ನೀವು ಕೇಳಿದ್ದೀರಿ. |
22
|
ನಾನು ನಿಮಗೆ ಹೇಳುವದೇನಂದರೆ-- ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾವನಾದರೂ ಸಿಟ್ಟುಗೊಂಡರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾವನಾದರೂ ತನ್ನ ಸಹೋದರನಿಗೆ-- ವ್ಯರ್ಥವಾದವನೇ ಎಂದು ಹೇಳಿದರೆ ಅವನು ನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನು |
23
|
ಆದದರಿಂದ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಬಳಿಗೆ ತಂದಾಗ ನಿನಗೆ ವಿರೋಧ ವಾದದ್ದು ನಿನ್ನ ಸಹೋದರನಿಗೆ ಇದೆಯೆಂದು ನೆನಪಿಗೆ ಬಂದರೆ |
24
|
ನಿನ್ನ ಕಾಣಿಕೆಯನ್ನು ನೀನು ಅಲ್ಲಿಯೇ ಯಜ್ಞವೇದಿಯ ಮುಂದೆ ಬಿಟ್ಟು ಹೊರಟು ಹೋಗಿ ಮೊದಲು ನಿನ್ನ ಸಹೋದರನೊಂದಿಗೆ ಒಂದಾಗು; ತರುವಾಯ ಬಂದು ನಿನ್ನ ಕಾಣಿಕೆಯನ್ನು ಅರ್ಪಿಸು. |
25
|
ನಿನ್ನ ವಿರೋಧಿಯ ಸಂಗಡ ನೀನು ದಾರಿಯ ಲ್ಲಿರುವಾಗಲೇ ತ್ವರೆಯಾಗಿ ಅವನ ಕೂಡ ಒಂದಾಗು; ಇಲ್ಲವಾದರೆ ಯಾವ ಸಮಯದಲ್ಲಿಯಾದರೂ ಆ ವಿರೋಧಿಯು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ಮತ್ತು ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು; ಆಗ ನೀನು ಸೆರೆಯಲ್ಲಿ ಹಾಕಲ್ಪಡುವಿ. |
26
|
ನಾನು ನಿನಗೆ ನಿಜವಾಗಿ ಹೇಳುವದೇನಂದರೆ--ನೀನು ಕೊನೆಯ ಕಾಸನ್ನು ಸಲ್ಲಿಸುವ ತನಕ ಯಾವ ವಿಧದಿಂದಲೂ ಅಲ್ಲಿಂದ ಹೊರಗೆ ಬರುವದೇ ಇಲ್ಲ. |
27
|
ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ; |
28
|
ಆದರೆ ನಾನು ನಿಮಗೆ ಹೇಳುವದೇನಂದರೆ--ಒಬ್ಬ ಸ್ತ್ರೀಯನ್ನು ಮೋಹಿಸುವದಕ್ಕೆ ನೋಡುವ ಪ್ರತಿಯೊಬ್ಬನು ಆಗಲೇ ತನ್ನ ಹೃದಯದಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದ್ದಾನೆ. |
29
|
ಆದದರಿಂದ ನಿನ್ನ ಬಲಗಣ್ಣು ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ. |
30
|
ನಿನ್ನ ಬಲಗೈ ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ. |
31
|
ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿದ್ದರೆ ಅವನು ಆಕೆಗೆ ತ್ಯಾಗಪತ್ರ ಕೊಡಲಿ ಎಂದು ಹೇಳಿಯದೆ; |
32
|
ಆದರೆ ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣ ದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಯು ವ್ಯಭಿಚಾರ ಮಾಡುವಂತೆ ಕಾರಣನಾಗುವನು; ಮತ್ತು ಬಿಡಲ್ಪಟ್ಟವಳನ್ನು ಯಾವನಾದರೂ ಮದುವೆ ಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. |
33
|
ನೀನು ಸುಳ್ಳಾಣೆ ಇಡಬೇಡ; ಆದರೆ ನಿನ್ನ ಪ್ರಮಾಣಗಳನ್ನು ಕರ್ತನಿಗೆ ಸಲ್ಲಿಸಬೇಕು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ. |
34
|
ಆದರೆ ನಾನು ನಿಮಗೆ ಹೇಳುವದೇನಂದರೆ--ಎಷ್ಟು ಮಾತ್ರಕ್ಕೂ ಅಣೆಯನ್ನು ಇಡಬೇಡ. ಪರಲೋಕದ ಮೇಲೆ ಬೇಡ; ಯಾಕಂದರೆ ಅದು ದೇವರ ಸಿಂಹಾಸನವು. |
35
|
ಭೂಮಿಯ ಮೇಲೆಯೂ ಬೇಡ; ಯಾಕಂದರೆ ಅದು ಆತನ ಪಾದಪೀಠವು; ಯೆರೂಸಲೇಮಿನ ಮೇಲೆಯೂ ಬೇಡ; ಯಾಕಂದರೆ ಅದು ಆ ಮಹಾ ಅರಸನ ಪಟ್ಟಣವಾಗಿದೆ. |
36
|
ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ಯಾಕಂದರೆ ನೀನು ಒಂದು ಕೂದಲನ್ನಾದರೂ ಬಿಳಿ ಅಥವಾ ಕಪ್ಪು ಮಾಡಲಾರಿ. |
37
|
ಆದರೆ ನಿನ್ನ ಮಾತು ಹೌದಾಗಿದ್ದರೆ ಹೌದು, ಅಲ್ಲವಾಗಿದ್ದರೆ ಅಲ್ಲ ಎಂದಿರಲಿ; ಇವುಗಳಿಗಿಂತ ಹೆಚ್ಚಾದದ್ದು ಕೆಟ್ಟದ್ದ ರಿಂದ ಬರುವಂಥದ್ದು. |
38
|
ಇದಲ್ಲದೆ--ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸು ಎಂದು ಹೇಳಿರುವದನ್ನು ನೀವು ಕೇಳಿದ್ದೀರಿ. |
39
|
ಆದರೆ ನಾನು ನಿಮಗೆ ಹೇಳುವದೇನಂದರೆ--ನೀವು ಕೆಟ್ಟದ್ದನ್ನು ಎದುರಿಸಬೇಡಿರಿ; ಯಾವನಾದರೂ ನಿನ್ನ ಬಲ ಗೆನ್ನೆಯ ಮೇಲೆ ಹೊಡೆದರೆ ಮತ್ತೊಂದನ್ನು ಸಹ ಅವನಿಗೆ ತಿರುಗಿಸು. |
40
|
ಯಾವನಾದರೂ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಮೇಲಂಗಿಯನ್ನು ತಕ್ಕೊಳ್ಳ ಬೇಕೆಂದಿದ್ದರೆ ಒಳಂಗಿಯನ್ನೂ ಕೊಟ್ಟುಬಿಡು. |
41
|
ಮತ್ತು ಯಾವನಾದರೂ ಒಂದು ಮೈಲು ಹೋಗುವಂತೆ ನಿನ್ನನ್ನು ಬಲವಂತ ಮಾಡಿದರೆ ಅವನೊಂದಿಗೆ ಎರಡು ಮೈಲು ಹೋಗು. |
42
|
ನಿನ್ನನ್ನು ಕೇಳುವವನಿಗೆ ಕೊಡು; ಮತ್ತು ನಿನ್ನಿಂದ ಕಡಾ ತಕ್ಕೊಳ್ಳಬೇಕೆಂದಿರುವವನಿಂದ ನೀನು ತಿರುಗಿಕೊಳ್ಳಬೇಡ. |
43
|
ನೀನು ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕು ಎಂದು ಹೇಳಿರು ವದನ್ನು ನೀವು ಕೇಳಿದ್ದೀರಿ. |
44
|
ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ. |
45
|
ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾ ಗುವಿರಿ; ಯಾಕಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ. |
46
|
ನಿಮ್ಮನ್ನು ಪ್ರೀತಿಮಾಡುವವರನ್ನೇ ನೀವು ಪ್ರೀತಿಮಾಡಿದರೆ ನಿಮಗೆ ಯಾವ ಪ್ರತಿಫಲ ಸಿಕ್ಕೀತು? ಸುಂಕದವರೂ ಹಾಗೆ ಮಾಡುತ್ತಾರಲ್ಲವೇ? |
47
|
ಇದಲ್ಲದೆ ನೀವು ನಿಮ್ಮ ಸಹೋದರರನ್ನು ಮಾತ್ರ ವಂದಿಸಿದರೆ ಬೇರೆಯವರಿಗಿಂತ ಹೆಚ್ಚೇನು ಮಾಡಿ ದಂತಾಯಿತು? ಸುಂಕದವರು ಸಹ ಹಾಗೆ ಮಾಡುತ್ತಾರಲ್ಲವೇ? |
48
|
ಆದದರಿಂದ ಪರಲೋಕ ದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣ ನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರ್ರಿ. |
Matthew 5:1 English Language Bible Words basic statistical display
COMING SOON ...