1
|
ಸಬ್ಬತ್ತಿನ ಕೊನೆಯಲ್ಲಿ ವಾರದ ಮೊದಲ ನೆಯ ದಿನವು ಉದಯವಾಗುತ್ತಿದ್ದಾಗಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು. |
2
|
ಮತ್ತು ಇಗೋ, ಅಲ್ಲಿ ಮಹಾಭೂಕಂಪ ಉಂಟಾಯಿತು; ಯಾಕಂದರೆ ಕರ್ತನ ದೂತನು ಪರಲೋಕದಿಂದ ಇಳಿದು ಬಂದು ಬಾಗಲಿನಿಂದ ಕಲ್ಲನ್ನು ಉರುಳಿಸಿ ಅದರ ಮೇಲೆ ಕೂತುಕೊಂಡನು. |
3
|
ಅವನ ಮುಖವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು. |
4
|
ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತವರ ಹಾಗಾದರು. |
5
|
ಆ ದೂತನು ಸ್ತ್ರೀಯರಿಗೆ-- ನೀವು ಭಯಪಡಬೇಡಿರಿ; ಯಾಕಂದರೆ ಶಿಲುಬೆಗೆ ಹಾಕಲ್ಪಟ್ಟವನಾದ ಯೇಸುವನ್ನು ನೀವು ಹುಡುಕುತ್ತೀರೆಂದು ನಾನು ಬಲ್ಲೆನು. |
6
|
ಆತನು ಇಲ್ಲಿ ಇಲ್ಲ; ಯಾಕಂದರೆ ಆತನು ಹೇಳಿರುವ ಪ್ರಕಾರ ಆತನು ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ. |
7
|
ಬೇಗನೆ ಹೋಗಿ ಆತನು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಆತನ ಶಿಷ್ಯರಿಗೆ ಹೇಳಿರಿ; ಮತ್ತು ಇಗೋ, ನಿಮಗೆ ಮುಂದಾಗಿ ಆತನು ಗಲಿಲಾಯಕ್ಕೆ ಹೋಗುತ್ತಾನೆ. ನೀವು ಆತನನ್ನು ಅಲ್ಲಿ ಕಾಣುವಿರಿ; ಇಗೋ, ನಾನು ನಿಮಗೆ ಹೇಳಿದ್ದೇನೆ ಅಂದನು. |
8
|
ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು ಆತನ ಶಿಷ್ಯರಿಗೆ ತಿಳಿಸುವದಕ್ಕಾಗಿ ಓಡಿಹೋದರು. |
9
|
ಅವರು ಆತನ ಶಿಷ್ಯರಿಗೆ ತಿಳಿಸು ವದಕ್ಕೆ ಹೋಗುತ್ತಿದ್ದಾಗ ಇಗೋ, ಯೇಸು ಅವರನ್ನು ಸಂಧಿಸಿ--ಶುಭವಾಗಲಿ ಅಂದನು. ಆಗ ಅವರು ಬಂದು ಆತನ ಪಾದಗಳನ್ನು ಹಿಡಿದು ಆತನನ್ನು ಆರಾಧಿಸಿದರು. |
10
|
ಆಗ ಯೇಸು ಅವರಿಗೆ-- ಭಯ ಪಡಬೇಡಿರಿ; ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವ ರೆಂದೂ ಹೋಗಿ ಅವರಿಗೆ ಹೇಳಿರಿ ಅಂದನು. |
11
|
ಅವರು ಹೋಗುತ್ತಿರುವಾಗ ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಪ್ರಧಾನ ಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು. |
12
|
ಮತ್ತು ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು -- |
13
|
ನಾವು ನಿದ್ರೆ ಮಾಡುತ್ತಿರುವಾಗ ಆತನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದು ಕೊಂಡುಹೋದ ರೆಂದು ನೀವು ಹೇಳಿರಿ; |
14
|
ಇದನ್ನು ಅಧಿಪತಿಯು ಕೇಳಿಸಿಕೊಂಡರೆ ನಿಮ್ಮನ್ನು ತಪ್ಪಿಸುವ ಹಾಗೆ ನಾವು ಅವನನ್ನು ಒಡಂಬಡಿಸುವೆವು ಅಂದರು. |
15
|
ಹೀಗೆ ಅವರು ಆ ಹಣವನ್ನು ತಕ್ಕೊಂಡು ತಮಗೆ ಕಲಿಸಿದ ಹಾಗೆ ಮಾಡಿದರು. ಈ ಮಾತು ಸಾಧಾರಣವಾಗಿ ಈ ದಿನದ ವರೆಗೂ ಯೆಹೂದ್ಯರ ಮಧ್ಯದಲ್ಲಿ ಹರಡಿ ಕೊಂಡಿದೆ. |
16
|
ಆಗ ಯೇಸು ತಮಗೆ ನೇಮಿಸಿದ ಗಲಿಲಾಯ ದಲ್ಲಿರುವ ಬೆಟ್ಟಕ್ಕೆ ಹನ್ನೊಂದು ಮಂದಿ ಶಿಷ್ಯರು ಹೋದರು. |
17
|
ಅವರು ಆತನನ್ನು ನೋಡಿ ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹ ಪಟ್ಟರು. |
18
|
ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ; |
19
|
ಆದದರಿಂದ ನೀವು ಹೋಗಿ ಎಲ್ಲಾ ಜನಾಂಗಗಳಿಗೆ ಬೋಧಿಸಿ ತಂದೆಯ, ಮಗನ, ಪರಿಶುದ್ಧಾತ್ಮನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿರಿ; |
20
|
ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್. |
Matthew 28:1 English Language Bible Words basic statistical display
COMING SOON ...