1
|
ಮೊಸಳೆಯನ್ನು ಗಾಳದಿಂದ ಎಳೆಯುವಿಯೋ? ಇಲ್ಲವೆ ಹಗ್ಗದಿಂದ ಅದರ ನಾಲಿಗೆಯನ್ನು ಅದುಮುತ್ತೀಯೋ? |
2
|
ಅದರ ಮೂಗಿ ನಲ್ಲಿ ಗಾಳಿ ಇಡುವಿಯೋ? ಅದರ ದವಡೆಯನ್ನು ಮುಳ್ಳಿನಿಂದ ಚುಚ್ಚುವಿಯೋ? |
3
|
ಅದು ನಿನಗೆ ಬಹಳ ಬಿನ್ನಹಗಳನ್ನು ಮಾಡುವದೋ? ನಿನ್ನ ಸಂಗಡ ಮೃದು ವಾದ ಮಾತು ಆಡುವದೋ? |
4
|
ನಿನ್ನ ಸಂಗಡ ಒಡಂಬಡಿಕೆ ಮಾಡುವದೋ? ಅದನ್ನು ಎಂದೆಂದಿಗೂ ದಾಸನಾಗಿ ತಕ್ಕೊಳ್ಳುವಿಯೋ? |
5
|
ಪಕ್ಷಿಯ ಹಾಗೆ ಅದರ ಸಂಗಡ ಆಡುವಿಯೋ ? ನಿನ್ನ ಹುಡುಗಿಯರಿಗೋಸ್ಕರ ಅದನ್ನು ಕಟ್ಟಿಹಾಕುವಿಯೋ? |
6
|
ಜತೆಯವರು ಅದನ್ನು ಔತಣ ಮಾಡುವರೋ? ಅವರು ಅದನ್ನು ವರ್ತಕ ರಲ್ಲಿ ಪಾಲಿಡುವರೋ? |
7
|
ಅದರ ತೊಗಲನ್ನು ಮುಳ್ಳು ಗಳಿಂದ, ಅದರ ತಲೆಯನ್ನು ವಿಾನುಗಾರರ ಬಲೆ ಯಿಂದ ತುಂಬುವಿಯೋ? |
8
|
ಅದರ ಮೇಲೆ ನಿನ್ನ ಕೈಹಾಕು; ಯುದ್ಧವನ್ನು ನೆನಸಿಕೋ, ಹೆಚ್ಚಿನದೇನೂ ಮಾಡಬೇಡ. |
9
|
ಇಗೋ, ಅದರ ವಿಷಯವಾದ ನಿರೀ ಕ್ಷೆಯು ವ್ಯರ್ಥವಾದದ್ದು. ಅದನ್ನು ನೋಡುತ್ತಲೇ ಕೆಡವಲ್ಪಡುತ್ತಾನಲ್ಲಾ. |
10
|
ಅದನ್ನು ಕದಲಿಸುವ ಹಾಗೆ ಕಠಿಣನು ಇಲ್ಲ. ಹಾಗಾದರೆ ನನ್ನ ಮುಂದೆ ನಿಂತು ಕೊಳ್ಳುವ ಹಾಗೆ ಯಾರು ಶಕ್ತರು? |
11
|
ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ. |
12
|
ನಾನು ಅದರ ಭಾಗಗಳನ್ನೂ ತ್ರಾಣವನ್ನೂ ಸನ್ನಾಹದ ಸೊಬಗನ್ನೂ ಮುಚ್ಚುವದಿಲ್ಲ. |
13
|
ಅದರ ಮೇಲಿನ ವಸ್ತ್ರವನ್ನು ತೆರೆಯುವವನಾರು? ಅದರ ಎರಡರಷ್ಟು ಕಡಿವಾಣದೊಂದಿಗೆ ಅದರ ಬಳಿಗೆ ಬರು ವದಕ್ಕೆ ಯಾರು ಶಕ್ತರು? |
14
|
ಅದರ ಮುಖದ ಕದ ಗಳನ್ನು ತೆಗೆಯುವವನಾರು? ಅದರ ಹಲ್ಲುಗಳು ಸುತ್ತಲೂ ಭಯಂಕರವಾಗಿವೆ. |
15
|
ಬಲವಾದ ಅದರ ಗುರಾಣಿಗಳು ಅದರ ಗರ್ವವಾಗಿವೆ; ಬತ್ತಿದ ಮುದ್ರೆಯ ಹಾಗೆ ಬಿಗಿದವೆ. |
16
|
ಅವು ಒಂದಕ್ಕೊಂದು ಹೊಂದಿ ಕೊಂಡಿವೆ; ಗಾಳಿಯಾದರೂ ಅವುಗಳ ಮಧ್ಯದಲ್ಲಿ ಸೇರುವದಿಲ್ಲ. |
17
|
ಒಂದಕ್ಕೊಂದು ಅಂಟುತ್ತವೆ; ಹಿಡು ಕೊಂಡು ಪ್ರತ್ಯೇಕವಾಗುವದಿಲ್ಲ; |
18
|
ಅದರ ಸೀನು ವಿಕೆಯಿಂದ ಬೆಳಕು ಹುಟ್ಟುವದು; ಅದರ ಕಣ್ಣುಗಳು ಉದಯದ ರೆಪ್ಪೆಗಳ ಹಾಗೆ ಇವೆ. |
19
|
ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ. |
20
|
ಕುದಿಯುವ ಗಡಿಗೆಯೊಳ ಗಿಂದಲೂ ಕೊಪ್ಪರಿಗೆಯೊಳಗಿಂದಲೂ ಆದ ಹಾಗೆ ಅದರ ಮೂಗಿನೊಳಗಿಂದ ಹೊಗೆ ಹಾಯುವದು. |
21
|
ಅದರ ಶ್ವಾಸವು ಕೆಂಡಗಳನ್ನು ಹೊತ್ತಿಸುವದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡು ವದು. |
22
|
ಅದರ ಕುತ್ತಿಗೆಯಲ್ಲಿ ಬಲವು ವಾಸಿಸುವದು; ಅದರ ಮುಂದೆ ದುಃಖವು ಸಂತೋಷಕ್ಕೆ ಮಾರ್ಪ ಡುವದು. |
23
|
ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲಲಾರವು. |
24
|
ಅದರ ಹೃದಯವು ಕಲ್ಲಿನ ಹಾಗೆಯೂ ಹೌದು, ಬೀಸುವ ಕಲ್ಲಿನ ಅಡಿಯ ಹಾಗೆಯೂ ಕಠಿಣವಾಗಿದೆ. |
25
|
ಅದು ಏಳುವಾಗ ಹೆದರುತ್ತಾರೆ; ಮುರಿಯುವ ಕಾರಣದಿಂದ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳು ತ್ತಾರೆ. |
26
|
ಅದರ ಬಳಿಯಲ್ಲಿ ಇಟ್ಟಿರುವ ಅದರ ಖಡ್ಗವು ಹಿಡಿಯಲಾರದು; ಈಟಿಯೂ ಬಾಣವೂ ಕವಚವೂ ನಿಲ್ಲವು, |
27
|
ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು. |
28
|
ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ. |
29
|
ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು. |
30
|
ಅದರ ಅಡಿ ಯಲ್ಲಿ ಹದವಾದ ಹರಳುಗಳು ಅವೆ; ಕೆಸರಿನ ಮೇಲೆ ಚೂಪಾದ ಮತ್ತು ಹದವಾದ ಕೋಲನ್ನು ಹರಡಿಸು ತ್ತದೆ. |
31
|
ಆಳವಾದ ನೀರನ್ನು ಗಡಿಗೆಯ ಹಾಗೆ ಕುದಿಯ ಮಾಡುತ್ತದೆ, ಸಮುದ್ರವನ್ನು ತೈಲದ ಪಾತ್ರೆಯ ಹಾಗೆ ಮಾಡುತ್ತದೆ. |
32
|
ತನ್ನ ಹಿಂದೆ ಹಾದಿ ಬೆಳಗುವಂತೆ ಅದು ಮಾಡುತ್ತದೆ. ಅಗಾಧವು ನರೆ ಕೂದಲಿನ ಹಾಗೆ ಇರುವದೆಂದು ಒಬ್ಬನು ಯೋಚಿಸುತ್ತಾನೆ. |
33
|
ಭೂಮಿ ಯ ಮೇಲೆ ಅದಕ್ಕೆ ಸಮಾನವಾದದ್ದು ಇಲ್ಲ; ಅದು ಭಯವಿಲ್ಲದೆ ಇರುವದಕ್ಕಾಗಿ ಮಾಡಿದ್ದು. |
34
|
ಉನ್ನತ ವಾದದ್ದನ್ನೆಲ್ಲಾ ಅದು ನೋಡುವದು; ಗರ್ವದ ಮಕ್ಕಳೆಲ್ಲರ ಮೇಲೆ ಅದು ಅರಸನಾಗಿದೆ ಅಂದನು. |
Job 41:27 English Language Bible Words basic statistical display
COMING SOON ...