English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Job Chapters

Job 41 Verses

1 ಮೊಸಳೆಯನ್ನು ಗಾಳದಿಂದ ಎಳೆಯುವಿಯೋ? ಇಲ್ಲವೆ ಹಗ್ಗದಿಂದ ಅದರ ನಾಲಿಗೆಯನ್ನು ಅದುಮುತ್ತೀಯೋ?
2 ಅದರ ಮೂಗಿ ನಲ್ಲಿ ಗಾಳಿ ಇಡುವಿಯೋ? ಅದರ ದವಡೆಯನ್ನು ಮುಳ್ಳಿನಿಂದ ಚುಚ್ಚುವಿಯೋ?
3 ಅದು ನಿನಗೆ ಬಹಳ ಬಿನ್ನಹಗಳನ್ನು ಮಾಡುವದೋ? ನಿನ್ನ ಸಂಗಡ ಮೃದು ವಾದ ಮಾತು ಆಡುವದೋ?
4 ನಿನ್ನ ಸಂಗಡ ಒಡಂಬಡಿಕೆ ಮಾಡುವದೋ? ಅದನ್ನು ಎಂದೆಂದಿಗೂ ದಾಸನಾಗಿ ತಕ್ಕೊಳ್ಳುವಿಯೋ?
5 ಪಕ್ಷಿಯ ಹಾಗೆ ಅದರ ಸಂಗಡ ಆಡುವಿಯೋ ? ನಿನ್ನ ಹುಡುಗಿಯರಿಗೋಸ್ಕರ ಅದನ್ನು ಕಟ್ಟಿಹಾಕುವಿಯೋ?
6 ಜತೆಯವರು ಅದನ್ನು ಔತಣ ಮಾಡುವರೋ? ಅವರು ಅದನ್ನು ವರ್ತಕ ರಲ್ಲಿ ಪಾಲಿಡುವರೋ?
7 ಅದರ ತೊಗಲನ್ನು ಮುಳ್ಳು ಗಳಿಂದ, ಅದರ ತಲೆಯನ್ನು ವಿಾನುಗಾರರ ಬಲೆ ಯಿಂದ ತುಂಬುವಿಯೋ?
8 ಅದರ ಮೇಲೆ ನಿನ್ನ ಕೈಹಾಕು; ಯುದ್ಧವನ್ನು ನೆನಸಿಕೋ, ಹೆಚ್ಚಿನದೇನೂ ಮಾಡಬೇಡ.
9 ಇಗೋ, ಅದರ ವಿಷಯವಾದ ನಿರೀ ಕ್ಷೆಯು ವ್ಯರ್ಥವಾದದ್ದು. ಅದನ್ನು ನೋಡುತ್ತಲೇ ಕೆಡವಲ್ಪಡುತ್ತಾನಲ್ಲಾ.
10 ಅದನ್ನು ಕದಲಿಸುವ ಹಾಗೆ ಕಠಿಣನು ಇಲ್ಲ. ಹಾಗಾದರೆ ನನ್ನ ಮುಂದೆ ನಿಂತು ಕೊಳ್ಳುವ ಹಾಗೆ ಯಾರು ಶಕ್ತರು?
11 ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ.
12 ನಾನು ಅದರ ಭಾಗಗಳನ್ನೂ ತ್ರಾಣವನ್ನೂ ಸನ್ನಾಹದ ಸೊಬಗನ್ನೂ ಮುಚ್ಚುವದಿಲ್ಲ.
13 ಅದರ ಮೇಲಿನ ವಸ್ತ್ರವನ್ನು ತೆರೆಯುವವನಾರು? ಅದರ ಎರಡರಷ್ಟು ಕಡಿವಾಣದೊಂದಿಗೆ ಅದರ ಬಳಿಗೆ ಬರು ವದಕ್ಕೆ ಯಾರು ಶಕ್ತರು?
14 ಅದರ ಮುಖದ ಕದ ಗಳನ್ನು ತೆಗೆಯುವವನಾರು? ಅದರ ಹಲ್ಲುಗಳು ಸುತ್ತಲೂ ಭಯಂಕರವಾಗಿವೆ.
15 ಬಲವಾದ ಅದರ ಗುರಾಣಿಗಳು ಅದರ ಗರ್ವವಾಗಿವೆ; ಬತ್ತಿದ ಮುದ್ರೆಯ ಹಾಗೆ ಬಿಗಿದವೆ.
16 ಅವು ಒಂದಕ್ಕೊಂದು ಹೊಂದಿ ಕೊಂಡಿವೆ; ಗಾಳಿಯಾದರೂ ಅವುಗಳ ಮಧ್ಯದಲ್ಲಿ ಸೇರುವದಿಲ್ಲ.
17 ಒಂದಕ್ಕೊಂದು ಅಂಟುತ್ತವೆ; ಹಿಡು ಕೊಂಡು ಪ್ರತ್ಯೇಕವಾಗುವದಿಲ್ಲ;
18 ಅದರ ಸೀನು ವಿಕೆಯಿಂದ ಬೆಳಕು ಹುಟ್ಟುವದು; ಅದರ ಕಣ್ಣುಗಳು ಉದಯದ ರೆಪ್ಪೆಗಳ ಹಾಗೆ ಇವೆ.
19 ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
20 ಕುದಿಯುವ ಗಡಿಗೆಯೊಳ ಗಿಂದಲೂ ಕೊಪ್ಪರಿಗೆಯೊಳಗಿಂದಲೂ ಆದ ಹಾಗೆ ಅದರ ಮೂಗಿನೊಳಗಿಂದ ಹೊಗೆ ಹಾಯುವದು.
21 ಅದರ ಶ್ವಾಸವು ಕೆಂಡಗಳನ್ನು ಹೊತ್ತಿಸುವದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡು ವದು.
22 ಅದರ ಕುತ್ತಿಗೆಯಲ್ಲಿ ಬಲವು ವಾಸಿಸುವದು; ಅದರ ಮುಂದೆ ದುಃಖವು ಸಂತೋಷಕ್ಕೆ ಮಾರ್ಪ ಡುವದು.
23 ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲಲಾರವು.
24 ಅದರ ಹೃದಯವು ಕಲ್ಲಿನ ಹಾಗೆಯೂ ಹೌದು, ಬೀಸುವ ಕಲ್ಲಿನ ಅಡಿಯ ಹಾಗೆಯೂ ಕಠಿಣವಾಗಿದೆ.
25 ಅದು ಏಳುವಾಗ ಹೆದರುತ್ತಾರೆ; ಮುರಿಯುವ ಕಾರಣದಿಂದ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳು ತ್ತಾರೆ.
26 ಅದರ ಬಳಿಯಲ್ಲಿ ಇಟ್ಟಿರುವ ಅದರ ಖಡ್ಗವು ಹಿಡಿಯಲಾರದು; ಈಟಿಯೂ ಬಾಣವೂ ಕವಚವೂ ನಿಲ್ಲವು,
27 ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು.
28 ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ.
29 ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು.
30 ಅದರ ಅಡಿ ಯಲ್ಲಿ ಹದವಾದ ಹರಳುಗಳು ಅವೆ; ಕೆಸರಿನ ಮೇಲೆ ಚೂಪಾದ ಮತ್ತು ಹದವಾದ ಕೋಲನ್ನು ಹರಡಿಸು ತ್ತದೆ.
31 ಆಳವಾದ ನೀರನ್ನು ಗಡಿಗೆಯ ಹಾಗೆ ಕುದಿಯ ಮಾಡುತ್ತದೆ, ಸಮುದ್ರವನ್ನು ತೈಲದ ಪಾತ್ರೆಯ ಹಾಗೆ ಮಾಡುತ್ತದೆ.
32 ತನ್ನ ಹಿಂದೆ ಹಾದಿ ಬೆಳಗುವಂತೆ ಅದು ಮಾಡುತ್ತದೆ. ಅಗಾಧವು ನರೆ ಕೂದಲಿನ ಹಾಗೆ ಇರುವದೆಂದು ಒಬ್ಬನು ಯೋಚಿಸುತ್ತಾನೆ.
33 ಭೂಮಿ ಯ ಮೇಲೆ ಅದಕ್ಕೆ ಸಮಾನವಾದದ್ದು ಇಲ್ಲ; ಅದು ಭಯವಿಲ್ಲದೆ ಇರುವದಕ್ಕಾಗಿ ಮಾಡಿದ್ದು.
34 ಉನ್ನತ ವಾದದ್ದನ್ನೆಲ್ಲಾ ಅದು ನೋಡುವದು; ಗರ್ವದ ಮಕ್ಕಳೆಲ್ಲರ ಮೇಲೆ ಅದು ಅರಸನಾಗಿದೆ ಅಂದನು.
×

Alert

×