1
|
ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು. |
2
|
ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು. |
3
|
ನೀನು ಬಲಾತ್ಕಾರ ಮಾಡುವದೂ ನಿನ್ನ ಕೈಕೆಲಸವನ್ನು ಅಲಕ್ಷ್ಯಮಾಡುವದೂ ದುಷ್ಟರ ಆಲೋ ಚನೆಯ ಮೇಲೆ ಪ್ರಕಾಶಿಸುವದೂ ನಿನಗೆ ಒಳ್ಳೆಯದೆ ನಿಸುತ್ತದೆಯೋ? |
4
|
ನಿನಗೆ ಮಾಂಸದ ಕಣ್ಣುಗಳುಂಟೋ ಅಥವಾ ಮನುಷ್ಯನು ನೋಡುವಂತೆಯೇ ನೀನೂ ನೋಡುತ್ತೀಯೋ; |
5
|
ನಿನ್ನ ದಿವಸಗಳು ಮನುಷ್ಯನ ದಿವಸಗಳ ಹಾಗಿವೆಯೋ ಅಥವಾ ನಿನ್ನ ವರುಷಗಳು ಮನುಷ್ಯನ ದಿವಸಗಳಂತಿವೆಯೋ |
6
|
ನನ್ನ ಅಕ್ರಮವನ್ನು ವಿಚಾರಿಸುತ್ತೀ; ನನ್ನ ಪಾಪವನ್ನು ಹುಡುಕುತ್ತೀ. |
7
|
ನಾನು ದುಷ್ಟನಲ್ಲವೆಂದೂ ನಿನ್ನ ಕೈಯಿಂದ ತಪ್ಪಿಸುವವನಿಲ್ಲ ವೆಂದೂ ನೀನು ತಿಳುಕೊಳ್ಳುತ್ತೀಯಲ್ಲವೇ; |
8
|
ನಿನ್ನ ಕೈಗಳು ನನ್ನನ್ನು ನಿರ್ಮಿಸಿ ನನ್ನನ್ನು ಸುತ್ತಲೆಲ್ಲಾ ರೂಪಿಸಿದವು. ಆದಾಗ್ಯೂ ನೀನು ನನ್ನನ್ನು ನಾಶಮಾಡುತ್ತೀ. |
9
|
ಕುಂಬಾ ರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀ ಎಂದು ಜ್ಞಾಪಕ ಮಾಡಿಕೋ ಎಂದು ಬೇಡಿಕೊಳ್ಳುತ್ತೇನೆ; ಆದಾಗ್ಯೂ ನನ್ನನ್ನು ಧೂಳಿಗೆ ತಿರುಗಿಸುತ್ತಿಯೋ? |
10
|
ಹಾಲಿನಂತೆ ನನ್ನನ್ನು ಹೊಯ್ಯಲಿಲ್ಲವೋ? ಮೊಸರಿನಂತೆ ನನ್ನನ್ನು ಹೆಪ್ಪಾಗ ಮಾಡಲಿಲ್ಲವೋ? |
11
|
ಚರ್ಮವನ್ನೂ ಮಾಂಸ ವನ್ನೂ ನನಗೆ ತೊಡಿಸಿದಿ; ಎಲುಬುಗಳಿಂದಲೂ ನರಗ ಳಿಂದಲೂ ನನಗೆ ಬೇಲಿ ಹಾಕಿದಿ. |
12
|
ಜೀವವನ್ನೂ ಕೃಪೆಯನ್ನೂ ನನಗೆ ಅನುಗ್ರಹಿಸಿದಿ; ನಿನ್ನ ದರ್ಶನವು ನನ್ನ ಆತ್ಮವನ್ನು ಕಾಪಾಡಿತು. |
13
|
ಆದಾಗ್ಯೂ ಇವುಗ ಳನ್ನು ನಿನ್ನ ಹೃದಯದಲ್ಲಿ ಮರೆಮಾಡಿದಿ; ಇದು ನಿನ್ನ ಬಳಿಯಲ್ಲಿ ಇದೆ ಎಂದು ತಿಳಿದಿದ್ದೇನೆ. |
14
|
ನಾನು ಪಾಪಮಾಡಿದರೆ ನನ್ನನ್ನು ಗುರುತಿಸಿ ನನ್ನ ಅಕ್ರಮವನ್ನು ಪರಿಹರಿಸುವದಿಲ್ಲ. |
15
|
ನಾನು ದುಷ್ಟನಾಗಿದ್ದರೆ ನನಗೆ ಅಯ್ಯೋ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತುವದಿಲ್ಲ; ಗಲಿಬಿಲಿಯಿಂದ ನಾನು ತುಂಬಿದ್ದೇನೆ, ಆದದರಿಂದ ನನ್ನ ಬಾಧೆಯನ್ನು ನೋಡು. |
16
|
ಅದು ಹೆಚ್ಚುತ್ತಿದೆ; ಸಿಂಹದಂತೆ ನನ್ನನ್ನು ಬೇಟೆಯಾಡುವಿ; ಇನ್ನೂ ಆಶ್ಚರ್ಯವಾದವುಗಳನ್ನು ನನಗೆ ತೋರಿಸುವಿ. |
17
|
ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ಇಡುತ್ತೀ. ನಿನ್ನ ಕೋಪವು ನನ್ನ ಮೇಲೆ ಅಧಿಕಗೊಳ್ಳುತ್ತದೆ; ಬದಲಾವಣೆಗಳೂ ಯುದ್ಧವೂ ನನಗೆ ಎದುರಾಗಿವೆ. |
18
|
ಹಾಗಾದರೆ ಯಾಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದಿ? ಯಾವ ಕಣ್ಣು ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು. |
19
|
ನಾನು ಇರದವನಂತಿದ್ದು ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು. |
20
|
ನನ್ನ ದಿವಸಗಳು ಸ್ವಲ್ಪವಲ್ಲವೋ? ಅವುಗಳನ್ನು ತೀರಿಸಿ ನನ್ನನ್ನು ಬಿಟ್ಟುಬಿಡು. |
21
|
ಆಗ ನಾನು ತಿರುಗಿಕೊಳ್ಳದವನಾಗಿ ಕತ್ತಲೆಯ ದೇಶಕ್ಕೆ, ಮರಣದ ನೆರಳಿಗೆ |
22
|
ಮರಣದ ನೆರಳಿನ ಅಂಧಕಾರದ ಹಾಗೆ ಮೊಬ್ಬಿರುವ ಕ್ರಮವಿಲ್ಲದ ಪ್ರಕಾಶವೇ ಅಂಧ ಕಾರದ ಹಾಗಿರುವ ದೇಶಕ್ಕೆ ಹೋಗುವದಕ್ಕಿಂತ ಮುಂಚೆ ಸ್ವಲ್ಪ ವಿಶ್ರಮಿಸಿಕೊಳ್ಳುವೆನು. |
Job 10:11 English Language Bible Words basic statistical display
COMING SOON ...