1
|
ನಾನು ಈಗ ಹೇಳುವದೇನಂದರೆ, ಬಾಧ್ಯನು ತಾನು ಆಸ್ತಿಗೆಲ್ಲಾ ಧಣಿಯಾ ಗಿದ್ದರೂ ಬಾಲಕನಾಗಿರುವ ತನಕ ದಾಸನಿಗೂ ಅವ ನಿಗೂ ಯಾವ ಭೇದವೂ ಇಲ್ಲ. |
2
|
ಆದರೆ ತಂದೆಯು ನೇಮಿಸಿದ ದಿನದವರೆಗೂ ಅವನು ಶಿಕ್ಷಕರ ಮತ್ತು ಮನೆವಾರ್ತೆಯವರ ಕೈಕೆಳಗಿರುವನು. |
3
|
ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲ ಪಾಠಗಳಿಗೆ ಅಧೀನರಾಗಿದ್ದೆವು. |
4
|
ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ |
5
|
ನ್ಯಾಯಪ್ರಮಾಣಾಧೀನರನ್ನು ವಿಮೋಚಿಸುವದಕ್ಕೂ ನಾವು ದತ್ತುಪುತ್ರರ ಸ್ವೀಕಾರವನ್ನು ಹೊಂದುವಂತೆಯೂ ಕಳುಹಿಸಿಕೊಟ್ಟನು. |
6
|
ನೀವು ಪುತ್ರ ರಾಗಿರುವದರಿಂದ--ಅಪ್ಪಾ, ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ದೇವರು ನಿಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. |
7
|
ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ, ಮಗನಾಗಿದ್ದೀ; ಮಗನೆಂದ ಮೇಲೆ ಕ್ರಿಸ್ತನ ಮೂಲಕ ದೇವರಿಗೆ ಬಾಧ್ಯನೂ ಆಗಿದ್ದೀ. |
8
|
ಪೂರ್ವಕಾಲದಲ್ಲಿ ನೀವು ದೇವರನ್ನರಿಯದವರಾಗಿ ಸ್ವಾಭಾವಿಕವಾಗಿ ದೇವರಲ್ಲದವುಗಳನ್ನು ಸೇವಿಸಿದಿರಿ. |
9
|
ಈಗಲಾದರೋ ನೀವು ದೇವರನ್ನು ತಿಳುಕೊಂಡಿ ದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ತಿಳುಕೊಂಡಿದ್ದಾನೆ; ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲ ಪಾಠಗಳಿಗೆ ಮತ್ತೂ ಅಧೀನರಾಗ ಬೇಕೆಂದು ಅಪೇಕ್ಷಿಸಿ ಪುನಃ ಅವುಗಳಿಗೆ ನೀವು ತಿರುಗಿಕೊಳ್ಳುವದು ಹೇಗೆ? |
10
|
ನೀವು ಆಯಾ ದಿನ ಗಳನ್ನೂ ಮಾಸಗಳನ್ನೂ ಕಾಲಗಳನ್ನೂ ಸಂವತ್ಸರಗಳನ್ನೂ ಆಚರಿಸುತ್ತೀರಿ. |
11
|
ನಾವು ನಿಮಗೋಸ್ಕರ ಪ್ರಯಾಸ ಪಟ್ಟದ್ದು ನಿಷ್ಪಲವಾಯಿತೋ ಏನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ. |
12
|
ಸಹೋದರರೇ, ನಾನು ನಿಮ್ಮ ಹಾಗೆ ಆದದ್ದ ರಿಂದ ನೀವೂ ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಕೇಡು ಮಾಡ ಲಿಲ್ಲ. |
13
|
ನನ್ನ ಶರೀರಕ್ಕೆ ಅಸೌಖ್ಯವಿದ್ದದರಿಂದ ನಾನು ನಿಮ್ಮಲ್ಲಿದ್ದು ಮೊದಲನೆಯ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ. |
14
|
ನನ್ನ ಶರೀರದಲ್ಲಿದ್ದ ಶೋಧನೆಯನ್ನು ನೀವು ಹೀನೈಸಲಿಲ್ಲ. ನಿರಾಕರಿಸಲಿಲ್ಲ; ಆದರೆ ನನ್ನನ್ನು ದೇವದೂತನಂತೆಯೂ ಕ್ರಿಸ್ತ ಯೇಸು ವಿನಂತೆಯೂ ಸೇರಿಸಿಕೊಂಡಿರಿ. |
15
|
ಆಗ ನಿಮಗೆ ಆಶೀರ್ವಾದವಾಯಿತೆಂದು ನೀವು ಅಂದುಕೊಂಡಿ ರಲ್ಲಾ; ಅದು ಎಲ್ಲಿ ಹೋಯಿತು? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನಾದರೂ ಕಿತ್ತು ನನಗೆ ಕೊಡುತ್ತಿದ್ದಿ ರೆಂದು ನಿಮ್ಮನ್ನು ಕುರಿತು ನಾನು ಸಾಕ್ಷಿ ಹೇಳುತ್ತೇನೆ. |
16
|
ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳು ವದರಿಂದ ನಿಮಗೆ ಶತ್ರುವಾಗಿದ್ದೇನೋ? |
17
|
ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಲ್ಲ; ಹೌದು, ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗ ಲಿಸುವದಕ್ಕೆ ಅಪೇಕ್ಷಿಸುತ್ತಾರೆ. |
18
|
ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಒಳ್ಳೇ ವಿಷಯದಲ್ಲಿ ನೀವು ಆಸಕ್ತರಾಗಿರುವದು ಒಳ್ಳೇದು. |
19
|
ನನ್ನ ಚಿಕ್ಕ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ತಿರಿಗಿ ಪ್ರಸವ ವೇದನೆಪಡುತ್ತೇನೆ. |
20
|
ನಾನು ನಿಮ್ಮ ವಿಷಯದಲಿ ಸಂಶಯಪಡುವವನಾದದರಿಂದ ಈಗ ನಿಮ್ಮ ಜೊತೆ ಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ. |
21
|
ನ್ಯಾಯಪ್ರಮಾಣಧೀನರಾಗುವದಕ್ಕೆ ಮನಸ್ಸುಳ್ಳ ವರೇ, ನ್ಯಾಯಪ್ರಮಾಣಕ್ಕೆ ಕಿವಿಗೊಡುವದಿಲ್ಲವೋ? ನನಗೆ ಹೇಳಿರಿ. |
22
|
ಯಾಕಂದರೆ ದಾಸಿಯಿಂದ ಒಬ್ಬನು, ಸ್ವತಂತ್ರಳಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಬರೆಯಲ್ಪಟ್ಟಿದೆ. |
23
|
ದಾಸಿಯಿಂದ ಹುಟ್ಟಿದವನು ಶರೀರಕ್ಕನಸುಸಾರವಾಗಿ ಹುಟ್ಟಿದನು. ಆದರೆ ಸ್ವತಂತ್ರಳಿಂದ ಹುಟ್ಟಿದವನು ವಾಗ್ದಾನದ ಮೂಲಕ ಹುಟ್ಟಿದನು. |
24
|
ಈ ಸಂಗತಿಗಳು ಉಪಮಾನವಾಗಿವೆ; ಹೇಗಂದರೆ, ಇವರು ಎರಡು ಒಡಂಬಡಿಕೆಗಳೆ, ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉತ್ಪನ್ನವಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದ್ದು; ಅದೇ ಹಾಗರ್. |
25
|
ಹಾಗರ್ ಅಂದರೆ ಅರಬಸ್ಥಾನದಲ್ಲಿ ಸೀನಾಯಿ ಪರ್ವತ. ಆಕೆಯು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆಯು ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ. |
26
|
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮ್ಮೆಲ್ಲರಿಗೆ ತಾಯಿ. |
27
|
ಯಾಕಂದರೆ--ಬಂಜೆಯೇ, ಹೆರದವಳೇ, ಸಂತೋಷಿಸು; ಪ್ರಸವ ವೇದನೆ ಪಡದವಳೇ, ಸ್ವರವೆತ್ತಿ ಕೂಗು; ಯಾಕಂದರೆ ಗಂಡನುಳ್ಳವಳಿಗಿಂತ ಬಿಡಲ್ಪಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆಂದು ಬರೆದದೆ. |
28
|
ಸಹೋದರರೇ, ನಾವು ಈಗ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ. |
29
|
ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದನು. ಅದರಂತೆಯೇ ಈಗಲೂ ಅದೆ. |
30
|
ಆದರೂ ಬರಹವು ಏನು ಹೇಳುತ್ತದೆ? ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಯಾಕಂದರೆ ದಾಸಿಯ ಮಗನು ಸ್ವತಂತ್ರಳ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯ ನಾಗಬಾರದು ಎಂದು ಹೇಳುತ್ತದೆ. |
31
|
ಹೀಗಿರುವಲ್ಲಿ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಸ್ವತಂತ್ರಳ ಮಕ್ಕಳೇ ಆಗಿದ್ದೇವೆ. |
Galatians 4:1 English Language Bible Words basic statistical display
COMING SOON ...