Indian Language Bible Word Collections
Psalms 10:12
Psalms Chapters
Psalms 10 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Psalms Chapters
Psalms 10 Verses
1
ಓ ಕರ್ತನೇ, ನೀನು ದೂರದಲ್ಲಿ ನಿಂತು ಕೊಳ್ಳುವದೂ ಕಷ್ಟಕಾಲಗಳಲ್ಲಿ ನಿನ್ನನ್ನು ಮರೆಮಾಡಿಕೊಳ್ಳುವದೂ ಯಾಕೆ?
2
ದುಷ್ಟರು ಗರ್ವ ದಿಂದ ದೀನನನ್ನು ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಯುಕ್ತಿಗಳಲ್ಲಿ ತಾವೇ ಹಿಡಿಯಲ್ಪಡಲಿ.
3
ದುಷ್ಟನು ತನ್ನ ಹೃದಯದ ಆಶೆಗೋಸ್ಕರ ಹೊಗಳಿಕೊಳ್ಳುತ್ತಾನೆ; ಕರ್ತನು ಅಸಹ್ಯಪಡುವ ಲೋಭಿಯನ್ನು ಅವನು ಆಶೀರ್ವದಿಸುತ್ತಾನೆ.
4
ದುಷ್ಟನು ತನ್ನ ಗರ್ವದ ಮುಖದಿಂದ ದೇವರನ್ನು ಹುಡುಕುವದಿಲ್ಲ; ಅವನ ಯೋಚನೆಗಳೆಲ್ಲಾ ದೇವ ರಿಲ್ಲದವುಗಳು.
5
ಅವನ ಮಾರ್ಗಗಳು ಯಾವಾಗಲೂ ವ್ಯಸನಕರವಾಗಿವೆ; ನಿನ್ನ ನ್ಯಾಯತೀರ್ಪುಗಳು ಅವನ ದೃಷ್ಟಿಗೆ ನಿಲುಕದಷ್ಟು ಉನ್ನತವಾಗಿವೆ; ತನ್ನ ವೈರಿಗಳೆ ಲ್ಲರ ಮುಂದೆ ಉಬ್ಬಿಕೊಳ್ಳುತ್ತಾನೆ.
6
ನಾನು ಕದಲು ವದಿಲ್ಲ; ನಾನು ಎಂದಿಗೂ ಕೇಡಿನಲ್ಲಿರುವದಿಲ್ಲ ಎಂದು ಅವನು ತನ್ನ ಹೃದಯದಲ್ಲಿ ಅಂದುಕೊಂಡಿದ್ದಾನೆ.
7
ಅವನ ಬಾಯಿ ಶಾಪದಿಂದಲೂ ಮೋಸದಿಂದಲೂ ವಂಚನೆಯಿಂದಲೂ ತುಂಬಿದೆ; ಅವನ ನಾಲಿಗೆಯ ಕೆಳಗೆ ಕೇಡೂ ವ್ಯರ್ಥತೆಯೂ ಇವೆ.
8
ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ;
9
ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ.
10
ಅವನು ಕುಗ್ಗಿ ಬೊಗ್ಗುತ್ತಾನೆ; ಆದದರಿಂದ ಗತಿಯಿಲ್ಲದವರು ಅವನ ಬಲದಿಂದ ಬೀಳುತ್ತಾರೆ.
11
ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
12
ಓ ಕರ್ತನೇ, ಏಳು; ಓ ದೇವ ರೇ, ನಿನ್ನ ಕೈ ಎತ್ತು, ದೀನರನ್ನು ಮರೆತು ಬಿಡಬೇಡ.
13
ದುಷ್ಟನು ದೇವರನ್ನು ಅಲಕ್ಷ್ಯಮಾಡುವದು ಯಾಕೆ? --ನೀನು ಅದನ್ನು ವಿಚಾರಿಸುವದಿಲ್ಲವೆಂದು ಅವನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
14
ನೀನು ಅದನ್ನು ನೋಡಿದ್ದೀ; ನಿನ್ನ ಕೈಯಿಂದ ಪ್ರತಿಫಲಕೊಡು ವದಕ್ಕೆ ಅವನ ಕುಯುಕ್ತಿಯನ್ನೂ ಹಗೆತನವನ್ನೂ ದೃಷ್ಟಿ ಸುತ್ತೀ. ಗತಿಯಿಲ್ಲದವನು ನಿನಗೆ ತನ್ನನ್ನು ಒಪ್ಪಿಸುತ್ತಾನೆ; ದಿಕ್ಕಿಲ್ಲದವನಿಗೆ ಸಹಾಯಕನು ನೀನೇ.
15
ದುಷ್ಟನ ಮತ್ತು ಕೆಡುಕನ ತೋಳನ್ನು ಮುರಿ; ಅದು ಸಿಕ್ಕದೆ ಹೋಗುವ ವರೆಗೂ ಅವನ ದುಷ್ಟತ್ವ ವನ್ನು ನೀನು ಹುಡುಕು.
16
ಕರ್ತನು ಯುಗ ಯುಗಾಂತರಗಳಿಗೂ ಅರಸನಾಗಿದ್ದಾನೆ; ಅನ್ಯಜನಾಂಗಗಳು ಆತನ ದೇಶದೊ ಳಗಿಂದ ನಾಶವಾದರು.
17
ಕರ್ತನೇ, ದೀನರ ಆಶೆ ಯನ್ನು ಕೇಳಿದ್ದೀ; ನೀನು ಅವರ ಹೃದಯವನ್ನು ಸಿದ್ಧ ಪಡಿಸಿ ಅವರ ಮೊರೆಗೆ ಕಿವಿಗೊಡುತ್ತೀ.
18
ಭೂಮಿಯ ಮನುಷ್ಯನು ಇನ್ನು ಭಯಪಡಿಸದ ಹಾಗೆ ದಿಕ್ಕಿಲ್ಲದ ವರಿಗೂ ಕುಗ್ಗಿದವರಿಗೂ ನ್ಯಾಯತೀರಿಸುವದಕ್ಕೆ ಕಿವಿಗೊಟ್ಟಿದ್ದೀ.