Indian Language Bible Word Collections
Proverbs 2:22
Proverbs Chapters
Proverbs 2 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 2 Verses
1
|
ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ |
2
|
ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ |
3
|
ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ |
4
|
ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, |
5
|
ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. |
6
|
ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. |
7
|
ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ. |
8
|
ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ. |
9
|
ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ. |
10
|
ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿ ಸಿದಾಗ ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಅಂದವಾಗಿರು ವದು. |
11
|
ವಿವೇಕವು ನಿನ್ನನ್ನು ಭದ್ರವಾಗಿ ಕಾಯುತ್ತದೆ; ತಿಳುವಳಿಕೆಯು ನಿನ್ನನ್ನು ಕಾಪಾಡುವದು; |
12
|
ಕೆಡುಕನ ಮಾರ್ಗದಿಂದ ಮೂರ್ಖನ ಮಾತುಗಳಿಂದ |
13
|
ಕತ್ತ ಲೆಯ ಮಾರ್ಗಗಳಲ್ಲಿ ನಡೆಯುವದಕ್ಕೆ ಯಥಾರ್ಥ ತೆಯ ದಾರಿಗಳನ್ನು ತೊರೆದುಬಿಡುವದರಿಂದ |
14
|
ಕೆಟ್ಟ ದ್ದನ್ನು ಮಾಡುವದಕ್ಕೆ ಸಂತೋಷಿಸಿ ದುಷ್ಟರ ಮೂರ್ಖ ತನದಲ್ಲಿ ಆನಂದಿಸುವದರಿಂದ ನಿನ್ನನ್ನು ತಪ್ಪಿಸುವದು. |
15
|
ಅವರ ಮಾರ್ಗಗಳು ವಕ್ರವಾಗಿವೆ. ತಮ್ಮ ಮಾರ್ಗ ಗಳಲ್ಲಿ ಅವರು ಮೂರ್ಖರಾಗಿದ್ದಾರೆ. |
16
|
ಪರಸ್ತ್ರೀ ಯಿಂದ ಅಂದರೆ ತನ್ನ ಮಾತುಗಳಿಂದ ಮುಖಸ್ತುತಿ ಮಾಡುವ ಸ್ತ್ರೀಯಿಂದ ತನ್ನ ದೇವರ ಒಡಂಬಡಿಕೆ ಯನ್ನು ಮರೆತು |
17
|
ತನ್ನ ಯೌವನ ಕಾಲದ ಸಂಗಾತಿ ಯನ್ನು ತ್ಯಜಿಸುವವಳಿಂದ ಅದು ನಿನ್ನನ್ನು ತಪ್ಪಿಸುವದು. |
18
|
ಅವಳ ಮನೆಯು ಮರಣದ ಕಡೆಗೆ, ಅವಳ ದಾರಿ ಗಳು ಮೃತರ ಕಡೆಗೆ ಇಳಿಸುತ್ತವೆ. |
19
|
ಅವಳ ಬಳಿಗೆ ಹೋಗುವ ಯಾವನೂ ಹಿಂತಿರುಗುವದಿಲ್ಲ, ಇಲ್ಲವೆ ಜೀವದ ಮಾರ್ಗಗಳನ್ನು ಅವನು ಹಿಡಿಯುವದೇ ಇಲ್ಲ. |
20
|
ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯು ವಂತೆಯೂ ನೀತಿವಂತರ ದಾರಿಗಳನ್ನು ನೀನು ಹಿಡಿಯು ವಂತೆಯೂ ಅದು ನಿನ್ನನ್ನು ನಡಿಸುವದು. |
21
|
ಯಥಾ ರ್ಥವಂತರು ದೇಶದಲ್ಲಿ ವಾಸಿಸುವರು. ಸಂಪೂರ್ಣರು ಅದರಲ್ಲಿ ನೆಲೆಯಾಗಿ ಇರುವರು. |
22
|
ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು. |