Indian Language Bible Word Collections
Proverbs 13:3
Proverbs Chapters
Proverbs 13 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Proverbs Chapters
Proverbs 13 Verses
1
|
ಜ್ಞಾನಿಯಾದ ಮಗನು ತನ್ನ ತಂದೆಯ ಬೋಧನೆಯನ್ನು ಕೇಳುತ್ತಾನೆ; ತಿರಸ್ಕರಿಸು ವವನು ಗದರಿಕೆಯನ್ನು ಕೇಳುವದಿಲ್ಲ. |
2
|
ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ತಿನ್ನು ವನು; ದೋಷಿಗಳ ಪ್ರಾಣವು ಬಲಾತ್ಕಾರವನ್ನು ತಿನ್ನು ವದು. |
3
|
ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು. |
4
|
ಸೋಮಾ ರಿಯ ಪ್ರಾಣವು ಅಪೇಕ್ಷಿಸಿದರೂ ಏನೂ ಹೊಂದುವ ದಿಲ್ಲ; ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗು ವದು. |
5
|
ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ; ದುಷ್ಟನು ಹೇಸಿಗೆಯಾಗಿದ್ದು ಅವಮಾನಕ್ಕೆ ಗುರಿಯಾಗು ವನು. |
6
|
ಯಥಾರ್ಥವಂತನನ್ನು ನೀತಿಯು ತನ್ನ ಮಾರ್ಗ ದಲ್ಲಿ ಕಾಪಾಡುತ್ತದೆ; ಕೆಟ್ಟತನವು ಪಾಪಿಯನ್ನು ಕೆಡವುವದು. |
7
|
ತನ್ನನ್ನು ತಾನೇ ಐಶ್ವರ್ಯವಂತನಾಗಿ ಮಾಡಿಕೊಳ್ಳುವವನು ಇದ್ದಾನೆ; ಅವನಿಗೆ ಏನೂ ಇರು ವದಿಲ್ಲ. ತನ್ನನ್ನು ಬಡವನಾಗಿ ಮಾಡಿಕೊಳ್ಳುವವನಿ ದ್ದಾನೆ; ಅವನಿಗೆ ಎಷ್ಟೋ ಐಶ್ವರ್ಯವಿದೆ. |
8
|
ಒಬ್ಬನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯವೇ; ಬಡವನು ಗದರಿಕೆಯನ್ನು ಕೇಳುವದಿಲ್ಲ. |
9
|
ನೀತಿವಂತರ ಬೆಳಕು ಸಂತೋಷಿಸುತ್ತದೆ; ದುಷ್ಟರ ದೀಪವು ಆರಿ ಹೋಗುವದು. |
10
|
ಗರ್ವದಿಂದ ಕಲಹ ಮಾತ್ರ ಬರುತ್ತದೆ; ಒಳ್ಳೆಯ ಸಲಹೆ ಹೊಂದಿದವರಿಗೆ ಜ್ಞಾನವಿದೆ. |
11
|
ವ್ಯರ್ಥತ್ವದಿಂದ ಹೊಂದಿದ ಐಶ್ವರ್ಯವು ಕಡಿಮೆ ಯಾಗುವದು; ಪ್ರಯಾಸದಿಂದ ಕೂಡಿಸುವವನು ವೃದ್ಧಿ ಗೊಳ್ಳುವನು. |
12
|
ತಡವಾದ ನಿರೀಕ್ಷೆ ಹೃದಯವನ್ನು ಅಸ್ವಸ್ಥತೆ ಮಾಡುತ್ತದೆ; ಆಶೆಯು ಸಫಲವಾದರೆ ಅದು ಜೀವಕರವಾದ ವೃಕ್ಷವು. |
13
|
ವಾಕ್ಯವನ್ನು ಉಲ್ಲಂಘಿಸುವ ವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು. |
14
|
ಮರಣದ ಪಾಶಗ ಳಿಂದ ತಪ್ಪಿಸಿಕೊಳ್ಳುವದಕ್ಕೆ ಜ್ಞಾನವಂತರ ಕಟ್ಟಳೆಯು ಜೀವದ ಬುಗ್ಗೆಯಾಗಿದೆ. |
15
|
ಸುವಿವೇಕವು ದಯಾ ಸ್ಪದವು; ದೋಷಕರ ಮಾರ್ಗವು ಕಠಿಣವಾಗಿದೆ. |
16
|
ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಅವಿವೇಕಿಯು ತನ್ನ ಮೂಢತ್ವವನ್ನು ಹೊರಗೆಡವು ತ್ತಾನೆ. |
17
|
ದುಷ್ಟ ಸೇವಕನು ಕೇಡಿಗೆ ಬೀಳುತ್ತಾನೆ; ನಂಬಿಕೆಯಾದ ರಾಯಭಾರಿಯು ಆರೋಗ್ಯದಾಯಕ. |
18
|
ಬೋಧನೆಯನ್ನು ತಿರಸ್ಕರಿಸುವವನಿಗೆ ಬಡತನವೂ ಅವಮಾನವೂ ಬರುವವು.; ಗದರಿಕೆಯನ್ನು ಗಮನಿಸು ವವನು ಸನ್ಮಾನಹೊಂದುವನು. |
19
|
ಇಷ್ಟ ಸಿದ್ಧಿ ಪ್ರಾಣಕ್ಕೆ ಸಿಹಿಯಾಗಿದೆ; ಕೆಟ್ಟತನದಿಂದ ತೊಲಗುವದು ಅವಿವೇಕಿಗಳಿಗೆ ಅಸಹ್ಯವಾಗಿದೆ. |
20
|
ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗಿರುವನು. ಬುದ್ಧಿ ಹೀನರ ಜೊತೆಗಾರನು ನಾಶವಾಗುವನು. |
21
|
ದುಷ್ಟತ್ವವು ಪಾಪಿಗಳನ್ನು ಹಿಂದಟ್ಟುತ್ತದೆ; ನೀತಿ ವಂತರಿಗೆ ಒಳ್ಳೇದು ಪ್ರತಿಫಲವಾಗುವದು. |
22
|
ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಡುವನು; ಪಾಪಿಯ ಸೊತ್ತು ನೀತಿ ವಂತರಿಗೆ ಇಡಲ್ಪಟ್ಟಿದೆ. |
23
|
ಬಡವರಿಗೆ ಭೂಮಿಯ ಸಾಗುವಳಿಯಲ್ಲಿ ಬಹಳ ಆಹಾರವು ಸಿಕ್ಕುತ್ತದೆ; ನ್ಯಾಯ ತೀರ್ಪಿನ ಕೊರತೆಯಿಂದ ಹಾಳಾಗುವದು ಉಂಟು. |
24
|
ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆ ಮಾಡುತ್ತಾನೆ; ಮುಂಚಿತವಾಗಿ ಶಿಕ್ಷಿಸುವವನು ಅವನನ್ನು ಪ್ರೀತಿಸುತ್ತಾನೆ. |
25
|
ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು. |