1
|
ಏಳನೇ ತಿಂಗಳಿನ ಮೊದಲನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿರಬೇಕು; ಕಷ್ಟಕರವಾದ ಕೆಲಸವನ್ನು ನೀವು ಮಾಡಬಾರದು; ಅದು ನಿಮಗೆ ತುತೂರಿಗಳನ್ನು ಊದುವ ದಿವಸ ವಾಗಿರುವದು. |
2
|
ನೀವು ಕರ್ತನಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ದಹನ ಬಲಿಯಾಗಿ ಅರ್ಪಿಸಬೇಕು. |
3
|
ಅವುಗಳ ಆಹಾರ ಸಮ ರ್ಪಣೆಯು ಎಣ್ಣೆಯಿಂದ ಕಲಸಿದ ಹಿಟ್ಟು, ಹೋರಿಗೆ ಮೂರು ದಶಾಂಶಗಳು, ಟಗರಿಗೆ ಎರಡು ದಶಾಂಶ ಗಳು, |
4
|
ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; |
5
|
ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೆ ಪಾಪಬಲಿಗಾಗಿ ಒಂದು ಮೇಕೆಮರಿ. |
6
|
ಇದಲ್ಲದೆ ತಿಂಗಳಿನ ದಹನಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ನಿತ್ಯವಾದ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ಬೆಂಕಿಯಿಂದ ಮಾಡ ಲ್ಪಟ್ಟು ಕರ್ತನಿಗೆ ಸುವಾಸನೆಗಾಗಿ ಅವುಗಳಿಗೆ ತಕ್ಕಂತೆ ಅರ್ಪಿಸಬೇಕು. |
7
|
ಈ ಏಳನೇ ತಿಂಗಳಿನ ಹತ್ತನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಅದರಲ್ಲಿ ನಿಮ್ಮ ಪ್ರಾಣಗಳನ್ನು ವ್ಯಥೆಪಡಿಸಿ ಯಾವ ಕೆಲಸವನ್ನಾದರೂ ಮಾಡಬಾರದು. |
8
|
ಆದರೆ ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ದೋಷವಿಲ್ಲದ ಒಂದು ಎಳೇ ಹೋರಿ ಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿ ಗಳನ್ನೂ |
9
|
ಅವುಗಳ ಆಹಾರ ಸಮರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ |
10
|
ಏಳು ಕುರಿಮರಿ ಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನೂ |
11
|
ಪಾಪ ಬಲಿಗಾಗಿ ಒಂದು ಮೇಕೆ ಮರಿಯಲ್ಲದೆ ಪ್ರಾಯಶ್ಚಿತ್ತದ ಪಾಪ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
12
|
ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು. |
13
|
ಕರ್ತನಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು. ಕರ್ತನಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ಬಲಿಯನ್ನು ಅರ್ಪಿಸಬೇಕು; ಏನಂದರೆ, ಹದಿಮೂರು ಎಳೇ ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ; ಅವು ದೋಷವಿಲ್ಲದ್ದಾಗಿರಬೇಕು; |
14
|
ಅವುಗಳ ಆಹಾರ ಸಮರ್ಪಣೆಯು ಎಣ್ಣೇ ಕಲಸಿದ ಹಿಟ್ಟು; ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಮೂರು ದಶಾಂಶಗಳು; ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎರಡು ದಶಾಂಶಗಳು; |
15
|
ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; |
16
|
ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು. |
17
|
ಎರಡನೇ ದಿವಸದಲ್ಲಿ ಮಚ್ಚೆಯಿಲ್ಲದ ಹನ್ನೆರಡು ಎಳೇ ಹೋರಿಗಳನ್ನೂ ಎರಡು ಟಗರುಗಳನ್ನೂ ವರು ಷದ ಹದಿನಾಲ್ಕು ಕುರಿಮರಿಗಳನ್ನೂ |
18
|
ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
19
|
ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
20
|
ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
21
|
ಹೋರಿ ಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ |
22
|
ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
23
|
ನಾಲ್ಕನೇ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
24
|
ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ |
25
|
ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
26
|
ಐದನೇ ದಿವಸದಲ್ಲಿ ಮಚ್ಚೆಯಿಲ್ಲದ ಒಂಭತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
27
|
ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರಪಾನ ಬಲಿ ಗಳನ್ನೂ |
28
|
ಪಾಪಬಲಿಯಾಗಿ ಒಂದು ಮೇಕೆ ಮರಿ ಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
29
|
ಆರನೇ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
30
|
ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
31
|
ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
32
|
ಏಳನೇ ದಿವಸದಲ್ಲಿ ದೋಷವಿಲ್ಲದ ಏಳು ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
33
|
ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
34
|
ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
35
|
ಎಂಟನೇ ದಿವಸದಲ್ಲಿ ನಿಮಗೆ ಹಬ್ಬದ ಸಭೆಯಾಗ ಬೇಕು. ಕಷ್ಟಕರವಾದ ಕೆಲಸವನ್ನು ನೀವು ಮಾಡ ಬಾರದು. |
36
|
ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ |
37
|
ಹೋರಿಗೆ ಟಗರಿಗೆ ಮತ್ತು ಕುರಿ ಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
38
|
ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
39
|
ಇದಲ್ಲದೆ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಬಲಿಗಳನ್ನೂ ದಹನಬಲಿಗಳನ್ನೂ ಆಹಾರ ಪಾನದ ಅರ್ಪಣೆಗಳನ್ನೂ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಕರ್ತನಿಗೆ ಮಾಡತಕ್ಕ ಅರ್ಪಣೆಗಳು ಇವೇ ಎಂದು |
40
|
ಕರ್ತನು ತನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಹೇಳಿದನು. |
Numbers 29:4 Telugu Language Bible Words basic statistical display
COMING SOON ...