1
|
ಯೇಸು ಹಾದುಹೋಗುತ್ತಿರುವಾಗ ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು. |
2
|
ಆತನ ಶಿಷ್ಯರು--ಬೋಧಕನೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಪಾಪಮಾಡಿದವರು ಯಾರು? ಈ ಮನುಷ್ಯನೋ ಅಥವಾ ಇವನ ತಂದೆ ತಾಯಿಗಳೋ ಎಂದು ಆತನನ್ನು ಕೇಳಿದರು; |
3
|
ಯೇಸು ಪ್ರತ್ಯುತ್ತರವಾಗಿ--ಈ ಮನುಷ್ಯನಾಗಲಿ ಇಲ್ಲವೆ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ; ಆದರೆ ದೇವರ ಕ್ರಿಯೆಗಳು ಇವನಲ್ಲಿ ಪ್ರಕಟವಾಗುವದಕ್ಕಾ ಗಿಯೇ ಇದಾಯಿತು. |
4
|
ನನ್ನನ್ನು ಕಳುಹಿಸಿದಾತನ ಕೆಲಸ ಗಳನ್ನು ಹಗಲಿರುವಾಗ ನಾನು ಮಾಡತಕ್ಕದ್ದು; ರಾತ್ರಿ ಬರುತ್ತದೆ, ಆಗ ಯಾವ ಮನುಷ್ಯನೂ ಕೆಲಸಮಾಡ ಲಾರನು. |
5
|
ನಾನು ಈ ಲೋಕದಲ್ಲಿರುವವರೆಗೆ ಲೋಕದ ಬೆಳಕಾಗಿದ್ದೇನೆ ಅಂದನು. |
6
|
ಆತನು ಹೀಗೆ ಮಾತನಾಡಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು; |
7
|
ಅವನಿಗೆ--ಹೋಗು, ಸಿಲೋವ ಕೊಳ ದಲ್ಲಿ ತೊಳೆದುಕೋ(ಸಿಲೋವ ಅಂದರೆ ಕಳುಹಿಸಲ್ಪಟ್ಟ ವನು ಎಂದರ್ಥ) ಅಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು. |
8
|
ಹೀಗಿರುವದರಿಂದ ನೆರೆಯವರೂ ಅವನು ಮೊದಲು ಕುರುಡನಾಗಿದ್ದಾಗ ಅವನನ್ನು ನೋಡಿದವರೂ-- ಕೂತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೋ ಅಂದರು. |
9
|
ಕೆಲವರು--ಅವನು ಇವನೇ ಅಂದರು. ಬೇರೆಯವರು--ಇವನು ಅವನ ಹಾಗೆ ಇದ್ದಾನೆ ಅಂದರು. ಆದರೆ ಅವನು--ನಾನೇ ಅವನು ಎಂದು ಹೇಳಿದನು. |
10
|
ಆದದರಿಂದ ಅವರು ಅವ ನಿಗೆ--ನಿನ್ನ ಕಣ್ಣುಗಳು ಹೇಗೆ ತೆರೆಯಲ್ಪಟ್ಟವು ಎಂದು ಕೇಳಲು |
11
|
ಅವನು ಪ್ರತ್ಯುತ್ತರವಾಗಿ--ಯೇಸು ಎಂದು ಕರೆಯಲ್ಪಟ್ಟ ಮನುಷ್ಯನು ಕೆಸರುಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ--ಸಿಲೋವಕೊಳಕ್ಕೆ ಹೋಗಿ ತೊಳೆ ದುಕೋ ಎಂದು ಹೇಳಲು ನಾನು ಹೋಗಿ ತೊಳೆದು ಕೊಂಡು ದೃಷ್ಟಿಯನ್ನು ಹೊಂದಿದೆನು ಅಂದನು. |
12
|
ಆಗ ಅವರು ಅವನಿಗೆ--ಅವನು ಎಲ್ಲಿದ್ದಾನೆ? ಅಂದಾಗ ಅವನು--ನನಗೆ ಗೊತ್ತಿಲ್ಲ ಅಂದನು; |
13
|
ಮೊದಲು ಕುರುಡನಾಗಿದ್ದವನನ್ನು ಅವರು ಫರಿಸಾ ಯರ ಬಳಿಗೆ ಕರೆದುಕೊಂಡು ಬಂದರು. |
14
|
ಯೇಸು ಕೆಸರುಮಾಡಿ ಅವನ ಕಣ್ಣುಗಳನ್ನು ತೆರೆದಾಗ ಅದು ಸಬ್ಬತ್ದಿನವಾಗಿತ್ತು. |
15
|
ಆಗ ಫರಿಸಾಯರು ಸಹ ತಿರಿಗಿ ಅವನು ಹೇಗೆ ದೃಷ್ಟಿಹೊಂದಿದ್ದಾನೆಂದು ಅವ ನನ್ನು ಕೇಳಲು ಅವನು ಅವರಿಗೆ--ಆತನು ಕೆಸರನ್ನು ನನ್ನ ಕಣ್ಣುಗಳ ಮೇಲೆ ಇಡಲು ನಾನು ತೊಳೆದುಕೊಂಡ ವನಾಗಿ ನೋಡುತ್ತೇನೆ ಅಂದನು. |
16
|
ತರುವಾಯ ಫರಿಸಾಯರಲ್ಲಿ ಕೆಲವರು--ಈ ಮನುಷ್ಯನು ದೇವರಿಗೆ ಸಂಬಂಧಪಟ್ಟವನಲ್ಲ; ಯಾಕಂದರೆ ಈತನು ಸಬ್ಬತ್ ದಿನವನ್ನು ಕೈಕೊಳ್ಳುವವನಲ್ಲ ಅಂದರು. ಬೇರೆಯ ವರು--ಪಾಪಿಯಾದ ಒಬ್ಬ ಮನುಷ್ಯನು ಇಂಥ ಅದ್ಭುತ ಕಾರ್ಯಗಳನ್ನು ಹೇಗೆ ಮಾಡುತ್ತಾನೆ ಅಂದರು. ಹೀಗೆ ಅವರಲ್ಲಿ ಭೇದವುಂಟಾ |
17
|
ಅವರು ತಿರಿಗಿ ಕುರುಡನಿಗೆ--ನಿನ್ನ ಕಣ್ಣುಗಳನ್ನು ತೆರೆದಾತನ ವಿಷಯವಾಗಿ ನೀನು ಏನು ಹೇಳುತ್ತೀ ಅಂದಾಗ ಅವನು--ಆತನು ಒಬ್ಬ ಪ್ರವಾದಿ ಅಂದನು. |
18
|
ಆದರೆ ದೃಷ್ಟಿ ಹೊಂದಿದವನ ತಂದೆತಾಯಿ ಗಳನ್ನು ಕರೆಯುವವರೆಗೆ ಯೆಹೂದ್ಯರು ಅವನ ವಿಷಯವಾಗಿ ಅವನು ಕುರುಡನಾಗಿದ್ದು ದೃಷ್ಟಿ ಹೊಂದಿ ದನೆಂದು ನಂಬಲಿಲ್ಲ. |
19
|
ಅವರು--ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಅವನು ಹೇಗೆ ನೋಡುತ್ತಾನೆ ಎಂದು ಅವರನ್ನು ಕೇಳಿದರು. |
20
|
ಅವನ ತಂದೆತಾಯಿಗಳು ಪ್ರತ್ಯುತ್ತರವಾಗಿ ಅವರಿಗೆ--ಅವನು ನಮ್ಮ ಮಗನೆಂದೂ ಅವನು ಕುರುಡನಾಗಿ ಹುಟ್ಟಿದ ನೆಂದೂ ನಾವು ಬಲ್ಲೆವು. |
21
|
ಆದರೆ ಅವನು ಈಗ ಯಾವದರ ಮೂಲಕ ನೋಡುತ್ತಾನೋ ನಮಗೆ ಗೊತ್ತಿಲ್ಲ; ಇಲ್ಲವೆ ಯಾರು ಅವನ ಕಣ್ಣುಗಳನ್ನು ತೆರೆದರೋ ಅದೂ ನಮಗೆ ಗೊತ್ತಿಲ್ಲ; ಅವನು ಪ್ರಾಯದವನಾಗಿದ್ದಾನೆ. ಅವನನ್ನೇ ಕೇಳಿರಿ; ಅವನೇ ತನ್ನ ವಿಷಯ ಮಾತನಾಡುವನು ಎಂದು ಹೇಳಿದರು. |
22
|
ಅವನ ತಂದೆತಾಯಿಗಳು ಯೆಹೂದ್ಯರಿಗೆ ಭಯಪಟ್ಟ ದ್ದರಿಂದ ಈ ಮಾತುಗಳನ್ನು ಹೇಳಿದರು; ಯಾಕಂದರೆ ಯಾವನಾದರೂ ಆತನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ನಿರ್ಣಯಿಸಿದ್ದರು. |
23
|
ಆದದ ರಿಂದ ಅವನ ತಂದೆ ತಾಯಿಗಳು--ಅವನು ಪ್ರಾಯದ ವನಾಗಿದ್ದಾನಲ್ಲಾ; ಅವನನ್ನೇ ಕೇಳಿರಿ ಎಂದು ಹೇಳಿದರು. |
24
|
ತರುವಾಯ ಅವರು ಆ ಕುರುಡನಾಗಿದ್ದ ಮನುಷ್ಯನನ್ನು ಕರೆದು ಅವನಿಗೆ--ದೇವರಿಗೆ ಸ್ತೋತ್ರ ಸಲ್ಲಿಸು; ಈ ಮನುಷ್ಯನು ಪಾಪಿಯೆಂದು ನಾವು ಬಲ್ಲೆವು ಅಂದರು. |
25
|
ಅವನು ಪ್ರತ್ಯುತ್ತರವಾಗಿ--ಆತನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ; ಒಂದು ಮಾತ್ರ ಬಲ್ಲೆನು; ಅದೇನಂದರೆ ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತೇನೆ ಅಂದನು. |
26
|
ಅವರು ತಿರಿಗಿ ಅವನಿಗೆ--ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು ಎಂದು ಹೇಳಿದ್ದಕ್ಕೆ |
27
|
ಅವನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ; ಆದರೆ ನೀವು ಕೇಳಲಿಲ್ಲ; ನೀವು ಅದನ್ನು ತಿರಿಗಿ ಯಾಕೆ ಕೇಳಬೇಕೆಂದಿದ್ದೀರಿ? ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸಿದೆಯೋ ಅಂದನು. |
28
|
ಆಗ ಅವರು ಅವನನ್ನು ದೂಷಿಸಿ--ನೀನು ಅವನ ಶಿಷ್ಯನು; ಆದರೆ ನಾವು ಮೋಶೆಯ ಶಿಷ್ಯರು. |
29
|
ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ನಮಗೆ ಗೊತ್ತಿಲ್ಲ ಅಂದರು. |
30
|
ಆಗ ಆ ಮನುಷ್ಯನು ಪ್ರತ್ಯುತ್ತರವಾಗಿ ಅವರಿಗೆ--ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯ ವನೆಂದು ನಿಮಗೆ ತಿಳಿಯದೆ ಇರುವದು ಆಶ್ಚರ್ಯವಾದ ವಿಷಯವಲ್ಲವೇ? |
31
|
ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು. |
32
|
ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿ ದ್ದದ್ದನ್ನು ಲೋಕಾದಿಯಿಂದ ಕೇಳಿರಲಿಲ್ಲ. |
33
|
ಈ ಮನುಷ್ಯನು ದೇವರ ಕಡೆಯಿಂದ ಬಂದವನಲ್ಲ ದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು. |
34
|
ಅದಕ್ಕೆ ಅವರು ಅವನಿಗೆ--ನೀನು ಕೇವಲ ಪಾಪ ದಲ್ಲಿಯೇ ಹುಟ್ಟಿದವನು; ನೀನು ನಮಗೆ ಬೋಧಿಸು ತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. |
35
|
ಅವರು ಅವನನ್ನು ಹೊರಗೆ ಹಾಕಿದ್ದನ್ನು ಯೇಸು ಕೇಳಿ ಅವನನ್ನು ಕಂಡು ಅವನಿಗೆ--ನೀನು ದೇವರ ಮಗನನ್ನು ನಂಬುತ್ತೀಯೋ ಅಂದನು. |
36
|
ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನೇ, ನಾನು ಆತನನ್ನು ನಂಬುವಂತೆ ಆತನು ಯಾರು ಅಂದನು. |
37
|
ಯೇಸು ಅವನಿಗೆ--ನೀನು ಆತನನ್ನು ನೋಡಿದ್ದೀ; ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು ಎಂದು ಹೇಳಿದನು. |
38
|
ಆಗ ಅವನು--ಕರ್ತನೇ, ನಾನು ನಂಬುತ್ತೇನೆ ಎಂದು ಹೇಳಿ ಆತನನ್ನು ಆರಾಧಿಸಿದನು. |
39
|
ಯೇಸು--ನೋಡದವರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನ್ಯಾಯತೀರ್ಪಿಗೋಸ್ಕರ ನಾನು ಈ ಲೋಕಕ್ಕೆ ಬಂದಿದ್ದೇನೆ ಅಂದನು. |
40
|
ಆತ ನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತು ಗಳನ್ನು ಕೇಳಿ--ನಾವು ಸಹ ಕುರುಡರೋ ಎಂದು ಆತನನ್ನು ಕೇಳಿದರು. |
41
|
ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು |
John 9:23 Telugu Language Bible Words basic statistical display
COMING SOON ...