ಅದೇ ವರುಷದಲ್ಲಿ ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಪ್ರಾರಂಭ ದಲ್ಲಿ ನಾಲ್ಕನೇ ವರುಷದ ಐದನೇ ತಿಂಗಳಲ್ಲಿ ಗಿಬ್ಯೋನಿ ನವನಾದ ಅಜ್ಜೂರನ ಮಗನಾದ ಹನನ್ಯನೆಂಬ ಪ್ರವಾ ದಿಯು ಕರ್ತನ ಆಲಯದಲ್ಲಿ ಯಾಜಕರ ಮುಂದೆಯೂ ಜನರೆಲ್ಲರ ಮುಂದೆಯೂ ನನಗೆ ಹೇಳಿದ್ದೇನಂದರೆ --
ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ ಬಾಬೆಲಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರ ಮಾಡುವೆನೆಂದು ಕರ್ತನು ಅನ್ನುತ್ತಾನೆ; ಬಾಬೆಲಿನ ಅರಸನ ನೊಗವನ್ನು ಮುರಿದುಬಿಡುವೆನು.
ಪ್ರವಾದಿಯಾದ ಯೆರೆವಿಾ ಯನು ಹೇಳಿದ್ದೇನಂದರೆ-- ಆಮೆನ್: ಕರ್ತನು ಹಾಗೆಯೇ ಮಾಡಲಿ: ನೀನು ಪ್ರವಾದಿಸಿದ ನಿನ್ನ ವಾಕ್ಯಗಳನ್ನು ಕರ್ತನು ನೆರವೇರಿಸಿ ಕರ್ತನ ಆಲಯದ ಪಾತ್ರೆಗಳನ್ನೂ ಸೆರೆಯವರೆಲ್ಲರನ್ನೂ ಬಾಬೆಲಿನಿಂದ ತಿರುಗಿ ಈ ಸ್ಥಳಕ್ಕೆ ಬರಮಾಡಲಿ.
ಹನನ್ಯನು ಜನರೆಲ್ಲರ ಮುಂದೆ ಹೇಳಿದ್ದೇನಂದರೆ --ಕರ್ತನು ಹೀಗೆ ಹೇಳುತ್ತಾನೆ--ಇದೇ ಪ್ರಕಾರ ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರುಷದೊಳಗಾಗಿ ಎಲ್ಲಾ ಜನಾಂಗಗಳ ಕುತ್ತಿ ಗೆಯ ಮೇಲಿನಿಂದ ಮುರಿದು ಹಾಕುವೆನು ಅಂದನು. ಆಗ ಪ್ರವಾದಿಯಾದ ಯೆರೆವಿಾಯನು ತನ್ನ ಮಾರ್ಗ ವಾಗಿ ಹೋದನು.
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಈ ಎಲ್ಲಾ ಜನಾಂಗಗಳ ಕುತ್ತಿಗೆಗಳ ಮೇಲೆ ಅವರು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಸೇವೆ ಮಾಡುವ ಹಾಗೆ ಕಬ್ಬಿಣದ ನೊಗವನ್ನು ಇಟ್ಟಿದ್ದೇನೆ; ಅವರು ಅವನಿಗೆ ಸೇವೆ ಮಾಡುವರು; ಭೂಮಿಯ ಮೃಗಗಳನ್ನು ಸಹ ಅವನಿಗೆ ಕೊಟ್ಟಿದ್ದೇನೆ.
ಪ್ರವಾದಿಯಾದ ಯೆರೆವಿಾಯನು ಪ್ರವಾದಿಯಾದ ಹನನ್ಯನಿಗೆ ಹೇಳಿದ್ದೇನಂದರೆ--ಹನ ನ್ಯನೇ, ಕೇಳು; ಕರ್ತನು ನಿನ್ನನ್ನು ಕಳುಹಿಸಲಿಲ್ಲ; ನೀನು ಈ ಜನರನ್ನು ಸುಳ್ಳಿನಲ್ಲಿ ನಂಬಿಕೆ ಇಡುವಂತೆ ಮಾಡುತ್ತೀ.
ಆದದರಿಂದ ಕರ್ತನು ಹೀಗೆ ಹೇಳು ತ್ತಾನೆಇಗೋ, ನಾನು ನಿನ್ನನ್ನು ಭೂಮಿಯ ಮೇಲಿನಿಂದ ಬಿಸಾಡಿ ಬಿಡುತ್ತೇನೆ; ಈ ವರುಷ ನೀನು ಸಾಯುವಿ; ನೀನು ಕರ್ತನಿಗೆ ವಿರೋಧವಾಗಿ ದ್ರೋಹ ಬಗೆದಿದ್ದೀ ಅಂದನು.