ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
ಜನರು ಅವರನ್ನು ತೆಗೆದುಕೊಂಡು ತಮ್ಮ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಕರ್ತನ ದೇಶದಲ್ಲಿ ಆ ಜನಾಂಗದ ವರನ್ನು ಗಂಡು ಹೆಣ್ಣಾಳುಗಳನ್ನಾಗಿ (ದಾಸದಾಸಿಯ ರನ್ನಾಗಿ) ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದ ವರನ್ನು ಸೆರೆಹಿಡಿಯುವರು, ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು.
ಕರ್ತನು ನಿಮ್ಮ ಸಂಕಟದಿಂದಲೂ ಕಳವಳದಿಂದ ಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಸಾಮತಿಯನ್ನು (ಪದ್ಯವನ್ನು) ನೀವು ಹೀಗೆ ಎತ್ತಿ ಹೇಳಬೇಕು.
ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು.
ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.
ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ.
ಅವರಿಗೆ ವಿರುದ್ಧವಾಗಿ ಏಳುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬಾಬೆಲಿನಿಂದ ಹೆಸರನ್ನೂ ಉಳಿದ ಜನರನ್ನೂ ಮಗನನ್ನೂ ಸೋದರಳಿಯನನ್ನೂ ನಿರ್ಮೂಲ ಮಾಡುವೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
ಏನಂದರೆ ಅಶ್ಶೂ ರ್ಯರನ್ನು ನನ್ನ ದೇಶದಲ್ಲಿ ಮುರಿದುಬಿಡುತ್ತೇನೆ. ನನ್ನ ಪರ್ವತಗಳ ಮೇಲೆ ಅವನನ್ನು ತುಳಿದುಬಿಡುತ್ತೇನೆ; ಅವನ ನೊಗವು ಅವರ ಮೇಲಿನಿಂದ ತೊಲಗಿ ಅವ ನ ಭಾರವು ಅವನ ಭುಜದ ಮೇಲಿನಿಂದ ತೊಲಗು ವದು.
ಓ ದ್ವಾರವೇ, ಗೋಳಾಡು; ಓ ಪಟ್ಟಣವೇ, ಕೂಗು; ನಿನ್ನ ಫಿಲಿಷ್ಟಿ ಯರೆಲ್ಲಾ ಕುಂದಿ ಹೋಗಿದ್ದಾರೆ; ಅವರ ಹೊಗೆಯು ಉತ್ತರದಿಂದ ಬರುತ್ತದೆ. ಆತನ ನೇಮಕವಾದ ಕಾಲ ಗಳಲ್ಲಿ ಯಾವನೂ ಒಂಟಿಯಾಗಿರುವದಿಲ್ಲ.