ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು ತನ್ನ ಅಣ್ಣನ ಹೆಂಡತಿಯ ಬಳಿಗೆ ಹೋದಾಗ ತನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡದ ಹಾಗೆ ತನ್ನ ವೀರ್ಯ ವನ್ನು ಭೂಮಿಯ ಮೇಲೆ ಚೆಲ್ಲಿದನು.
ಆಗ ಯೆಹೂದನು ತನ್ನ ಸೊಸೆಯಾದ ತಾಮಾರ ಳಿಗೆ--ನನ್ನ ಮಗನಾದ ಶೇಲಹನು ದೊಡ್ಡವನಾಗುವ ವರೆಗೆ ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿ ಇರು ಅಂದನು. ಯಾಕಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳು ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.
ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂ ದನು ಆದರಣೆ ಹೊಂದಿದ ಮೇಲೆ ತಾನೂ ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾತಿಗೆ ಹೋದನು.
ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು ಮುಸುಕು ಹಾಕಿ ಮುಚ್ಚಿಕೊಂಡು ತಿಮ್ನಾತಿನ ಮಾರ್ಗದಲ್ಲಿರುವ ಬಹಿರಂಗ ಸ್ಥಳದಲ್ಲಿ ಕೂತು ಕೊಂಡಳು; ಯಾಕಂದರೆ ಶೇಲಹನು ದೊಡ್ಡವನಾ ಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲ ವೆಂದು ನೋಡಿದಳು.
ಮಾರ್ಗ ದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು--ನನ್ನನ್ನು ನಿನ್ನ ಬಳಿಗೆ ಬರಗೊಡಿಸು ಅಂದನು. (ಯಾಕಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ). ಅವಳು--ನೀನು ನನ್ನ ಬಳಿಗೆ ಬಂದರೆ ನನಗೆ ಏನು ಕೊಡುವಿ ಅಂದಳು.
ಅದಕ್ಕೆ ಅವನು--ನಿನಗೆ ಕೊಡತಕ್ಕ ಈಡು ಏನು ಅಂದಾಗ ಅವಳು--ನಿನ್ನ ಮುದ್ರೆಯೂ ನಿನ್ನ ಕಡಗ ಗಳೂ ನಿನ್ನ ಕೈಯಲ್ಲಿರುವ ಕೋಲು ಅಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು ಆಕೆಯ ಬಳಿಗೆ ಹೋದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.
ಹೆಚ್ಚುಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ--ನಿನ್ನ ಸೊಸೆಯಾದ ತಾಮಾರಳು ಜಾರತ್ವ ಮಾಡಿದ್ದಾಳೆ; ಜಾರತ್ವದಿಂದ ಗರ್ಭಿಣಿಯಾಗಿ ದ್ದಾಳೆ ಎಂದು ತಿಳಿಸಿದರು. ಆಗ ಯೆಹೂದನು--ಅವಳನ್ನು ಹೊರಗೆ ತನ್ನಿರಿ, ಅವಳು ಸುಡಲ್ಪಡಲಿ ಅಂದನು.
ಆಕೆಯನ್ನು ಹೊರಗೆ ತಂದಾಗ ಆಕೆಯು ತನ್ನ ಮಾವನಿಗೆ--ಇವು ಯಾವ ಮನುಷ್ಯನವೋ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದದರಿಂದ ಈ ಮುದ್ರೆಯೂ ಕಡಗಗಳೂ ಕೋಲೂ ಯಾರವೆಂದು ತಿಳಿದುಕೋ ಎಂದು ಕೇಳಿಕೊಂಡಳು.