ಅವನು ಕಳ್ಳತನ ಮಾಡುವಾಗ ಸೂರ್ಯೋದಯ ವಾದರೆ ಹೊಡೆದವನ ರಕ್ತ ಸುರಿಸಬೇಕು; ಕಳ್ಳನು ಸಿಕ್ಕಿದರೆ ಪೂರ್ಣವಾಗಿ ಬದಲು ಕೊಡಬೇಕು. ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ ಅವನ ಕಳ್ಳತನಕ್ಕಾಗಿ ಅವನು ಮಾರಲ್ಪಡಬೇಕು.
ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ ದ್ರಾಕ್ಷೇತೋಟವನ್ನೂ ಮೇಯಿಸಿ ದರೆ ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ ದ್ರಾಕ್ಷೇತೋಟದಲ್ಲಿ ಉತ್ತಮವಾದದ್ದನ್ನೂ ಬದಲು ಕೊಡಬೇಕು.
ಬೆಂಕಿ ಹತ್ತಿ ಅದು ಮುಳ್ಳಿನ ಬೇಲಿಗೆ ತಗುಲಿ ಸಿವುಡುಗಳ ಬಣವಿಗಳನ್ನಾಗಲಿ ನಿಂತ ಬೆಳೆಯನ್ನಾಗಲಿ ಹೊಲವನ್ನಾಗಲಿ ಸುಟ್ಟುಬಿಟ್ಟರೆ ಆ ಬೆಂಕಿಯನ್ನು ಹಚ್ಚಿದ ವನು ಖಂಡಿತವಾಗಿ ಬದಲು ಕೊಡಬೇಕು.
ಎತ್ತು ಕತ್ತೆ ಕುರೀ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದು ಹೋದ ಯಾವದೇ ತರದ ವಸ್ತುಗಳ ವಿಷಯ ದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು ಇದು ತನ್ನದೆಂದು ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ನ್ಯಾಯಾಧಿಪತಿಗಳ ಮುಂದೆ ಬರಬೇಕು. ನ್ಯಾಯಾಧಿ ಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸು ವರೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶು ವನ್ನಾದರೂ ಕಾಯುವದಕ್ಕೆ ಕೊಟ್ಟಾಗ ಅದು ಸತ್ತರೆ ಇಲ್ಲವೆ ಊನವಾದರೆ ಇಲ್ಲವೆ ಯಾರೂ ನೋಡದೆ ಇದ್ದಾಗ ಓಡಿಸಿಕೊಂಡು ಹೋದರೆ
ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಾಗಿತಕ್ಕೊಂಡಿರಲಾಗಿ ಒಡೆಯನು ಅದರ ಹತ್ತಿರ ಇಲ್ಲದಿ ರುವಾಗ ಆ ಪಶುವು ಊನವಾದರೆ ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಬದಲು ಕೊಡ ಬೇಕು.