ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.
ಆದದ ರಿಂದ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಅಂದರೆ ಕಾನಾನ್ಯರ ಹಿತ್ತಿಯರ ಅಮೋರಿಯರ ಹಿವ್ವಿಯರ ಯೆಬೂಸಿಯರ ಹಾಲೂ ಜೇನೂ ಹರಿಯುವ ದೇಶಕ್ಕೆ ನಿನ್ನನ್ನು ಕರೆ ತಂದಾಗ ಈ ಆಚರಣೆಯನ್ನು ಈ ತಿಂಗಳಲ್ಲಿ ಆಚರಿಸ ಬೇಕು.
ಕರ್ತನ ನ್ಯಾಯಪ್ರಮಾಣವು ನಿನ್ನ ಬಾಯಲ್ಲಿ ಇರುವಂತೆ ಅದು (ಆಚರಣೆಯು) ನಿನ್ನ ಕೈ ಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ಮಧ್ಯೆ ಜ್ಞಾಪಕಾರ್ಥವಾಗಿಯೂ ಇರ ಬೇಕು. ಕರ್ತನು ನಿನ್ನನ್ನು ತನ್ನ ಬಲವಾದ ಕೈಯಿಂದ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
ಇದಲ್ಲದೆ ಮುಂದೆ ಬರುವ ಕಾಲದಲ್ಲಿ ನಿನ್ನ ಮಗನು ನಿನಗೆ--ಇದೇನು ಎಂದು ಕೇಳುವಾಗ ನೀನು ಅವನಿಗೆಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದ ದಾಸತ್ವದ ಮನೆಯಿಂದ ಹೊರಗೆ ಬರಮಾಡಿದ್ದಾನೆ.
ಫರೋಹನು ನಮ್ಮನ್ನು ಕಳುಹಿಸದೆ ಕಠಿಣವಾಗಿದ್ದದರಿಂದ ಕರ್ತನು ಐಗುಪ್ತದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಅಂದರೆ ಮನುಷ್ಯರಲ್ಲಿ ಚೊಚ್ಚಲಾ ದದ್ದು ಮೊದಲುಗೊಂಡು ಪಶುಗಳ ಚೊಚ್ಚಲಾದ ವುಗಳ ವರೆಗೆ ಕೊಂದುಹಾಕಿದನು. ಆದ್ದರಿಂದ ನಾನು ಚೊಚ್ಚಲಾದ ಗಂಡಾದವುಗಳನ್ನೆಲ್ಲಾ ಕರ್ತನಿಗೆ ಅರ್ಪಿ ಸುತ್ತೇನೆ. ನನ್ನ ಮಕ್ಕಳಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇನೆ ಎಂದು ಹೇಳಬೇಕು ಅಂದನು.
ಫರೋಹನು ಜನರನ್ನು ಕಳುಹಿಸಿಬಿಟ್ಟಾಗ ಫಿಲಿಷ್ಟಿಯರ ದೇಶದ ದಾರಿಯು ಸವಿಾಪವಿದ್ದರೂ ದೇವರು ಅವರನ್ನು ಅದರಲ್ಲಿ ನಡಿಸಲಿಲ್ಲ; ಯಾಕಂದರೆ ದೇವರು--ಜನರು ಯುದ್ಧವನ್ನು ನೋಡಿ ಮನಸ್ಸನ್ನು ಬೇರೆ ಮಾಡಿಕೊಂಡು ಅವರು ಐಗುಪ್ತಕ್ಕೆ ಹಿಂದಿರುಗಾರು ಎಂದು ಅಂದುಕೊಂಡನು.
ಹೀಗಿರುವದರಿಂದ ಕರ್ತನು ಜನರನ್ನು ಕೆಂಪು ಸಮುದ್ರದ ಅರಣ್ಯ ಮಾರ್ಗ ದಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದನು. ಆದಾಗ್ಯೂ ಇಸ್ರಾಯೇಲ್ ಮಕ್ಕಳು ಯುದ್ಧಸನ್ನದ್ಧರಾಗಿ ಐಗುಪ್ತದೇಶದೊಳಗಿಂದ ಹೋದರು.
ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬು ಗಳನ್ನು ತಕ್ಕೊಂಡು ಹೋದನು. ಅವನು ಇಸ್ರಾಯೇಲ್ ಮಕ್ಕಳಿಗೆ--ದೇವರು ನಿಶ್ಚಯವಾಗಿಯೂ ನಿಮ್ಮನ್ನು ದರ್ಶಿಸುವನು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು ಎಂದು ಹೇಳಿ ಖಂಡಿತವಾಗಿ ಪ್ರಮಾಣಮಾಡಿಸಿದ್ದನು.
ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.