ತಾನು ಅಪೇಕ್ಷೆ ಪಟ್ಟದ್ದ ರಲ್ಲಿ ಯಾವದೂ ತನ್ನ ಪ್ರಾಣಕ್ಕೆ ಕೊರತೆಯಾಗದಂತೆ ದೇವರು ತನಗೆ ಅನುಗ್ರಹಿಸಿದ ಧನವೂ ಐಶ್ವರ್ಯವೂ ಸನ್ಮಾನವೂ ಇರುವ ಮನುಷ್ಯನಿಗೆ ಅದನ್ನು ಅನುಭವಿಸು ವಂತೆ ಆತನು ಸಾಮರ್ಥ್ಯವನ್ನು ಕೊಡುವದಿಲ್ಲ; ಆದರೆ ಪರನು ಅದನ್ನು ಅನುಭವಿಸುತ್ತಾನೆ; ಇದು ವ್ಯರ್ಥವೂ ಕೆಟ್ಟರೋಗವೂ ಆಗಿದೆ.
ತನ್ನ ವರುಷಗಳ ದಿನಗಳು ಬಹಳವಾಗಿದ್ದು ತನ್ನ ಪ್ರಾಣವು ಸುಖದಿಂದ ತೃಪ್ತಿ ಪಡದೆ ತನಗೆ ಹೂಣಿಡುವಿಕೆಯು ಇಲ್ಲದೇ ಅವನು ನೂರು ಮಕ್ಕಳನ್ನು ಪಡೆದು ಅನೇಕ ವರುಷಗಳು ಬದುಕಿದರೆ ನಾನು ಹೇಳುವದೇನಂದರೆ, ಅವನಿ ಗಿಂತಲೂ ಇನ್ನು ಹುಟ್ಟದಿರುವವನೇ ಉತ್ತಮ.
ನೆರಳಿನಂತೆ ತನ್ನ ವ್ಯರ್ಥವಾದ ಜೀವಿತದ ಎಲ್ಲಾ ದಿವಸಗಳು ಕಳೆಯುವ ಮನುಷ್ಯನಿಗೆ ಈ ಜೀವಿತ ದಲ್ಲಿ ಯಾವದು ಒಳ್ಳೇದೆಂದು ಯಾವನು ಬಲ್ಲನು? ಸೂರ್ಯನ ಕೆಳಗೆ ಅವನ ತರುವಾಯ ಏನು ಇರುವ ದೆಂದು ಯಾವ ಮನುಷ್ಯನಿಗೆ ಹೇಳಬಲ್ಲನು.