ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು; ಬುದ್ಧಿಹೀನರು ಅರ್ಪಿಸುವ ಯಜ್ಞಕ್ಕಿಂತ, ಹೆಚ್ಚಾಗಿ ಕಿವಿಗೊಡುವದಕ್ಕೆ ಸಿದ್ಧನಾಗಿರು. ಅವರು ತಿಳಿಯದೆ ಕೆಟ್ಟದ್ದನ್ನೇ ಮಾಡು ತ್ತಾರೆ.
ನಿನ್ನ ಬಾಯಿಂದ ಆತುರಪಡದಿರು ಮತ್ತು ದೇವರ ಮುಂದೆ ಯಾವದನ್ನು ಉಚ್ಚರಿಸುವದಕ್ಕೆ ನಿನ್ನ ಹೃದಯವು ದುಡುಕದೇ ಇರಲಿ; ದೇವರು ಪರಲೋಕ ದಲ್ಲಿದ್ದಾನೆ; ನೀನು ಭೂಮಿಯ ಮೇಲೆ ಇದ್ದೀ; ಆದ ಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.
ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು?
ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.
ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ.
ನಾನು ಕಂಡದ್ದನ್ನು ನೋಡು; ದೇವರು ತನಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ತಾನು ಕೈಕೊಂಡ ಪ್ರಯಾಸದ ಸುಖವನ್ನು ಅನುಭವಿಸಿ ತಿಂದು ಕುಡಿ ಯುವದು ಮನುಷ್ಯನಿಗೆ ಒಳ್ಳೆಯದೂ ಉಚಿತವಾದದ್ದೂ ಆಗಿದೆ; ಅದು ಅವನ ಪಾಲು.
ಪ್ರತಿ ಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಆಸ್ತಿಪಾಸ್ತಿಗ ಳನ್ನೂ ಅವುಗಳನ್ನು ಅನುಭವಿಸುವದಕ್ಕೆ ಆತನು ಕೊಟ್ಟ ಸಾಮರ್ಥ್ಯವನ್ನೂ ಅವನು ತನ್ನ ಪಾಲನ್ನು ತೆಗೆದು ಕೊಂಡು ತನ್ನ ಪ್ರಯಾಸದಲ್ಲಿ ಆನಂದಿಸುವದೂ ದೇವರ ದಾನದಿಂದಲೇ.