ನೀನು ಜನರಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ನೀವು ಸೇಯಾರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಕುಮಾರರ ಮೇರೆಯನ್ನು ದಾಟಬೇಕು; ಅವರು ನಿಮಗೆ ಭಯಪಡುವರು; ಆದದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.
ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸಿದ್ದಾನೆ; ನೀನು ಈ ದೊಡ್ಡ ಅರಣ್ಯದಲ್ಲಿ ಸಂಚಾರ ಮಾಡಿದ್ದನ್ನು ಆತನು ಬಲ್ಲನು; ಈ ನಾಲ್ವತ್ತು ವರುಷ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ; ನಿನಗೆ ಏನೂ ಕಡಿಮೆ ಆಗಲಿಲ್ಲ ಎಂದು ಹೇಳಿದನು.
ಈ ಪ್ರಕಾರ ನಾವು ಸೇಯಾರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಬೈಲಿನ ಮಾರ್ಗವಾಗಿ ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳ ಮುಂದಾಗಿ ದಾಟಿ ತಿರುಗಿಕೊಂಡು ಮೋವಾಬಿನ ಅರಣ್ಯದ ಮಾರ್ಗವಾಗಿ ಹಾದು ಹೋದೆವು.
ಆಗ ಕರ್ತನು ನನಗೆ--ಮೋವಾಬ್ಯರಿಗೆ ಉಪದ್ರಕೊಡಬೇಡ; ಅವರ ಸಂಗಡ ಜಗಳವಾಡಿ ಯುದ್ಧಮಾಡಬೇಡ; ನಾನು ಅವರ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ; ನಾನು ಆರ್ ಅನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲವೇ ಅಂದನು.
ಹೋರಿಯರು ಸಹ ಪೂರ್ವದಲ್ಲಿ ಸೇಯಾರಿನಲ್ಲಿ ವಾಸಮಾಡಿದರು; ಆದರೆ ಏಸಾವನ ಮಕ್ಕಳು ಅವರನ್ನು ಹೊರಡಿಸಿ ತಮ್ಮ ಎದುರಿನಲ್ಲಿ ಸಂಹರಿಸಿ ಇಸ್ರಾಯೇಲ್ಯರು, ಕರ್ತನು ತಮಗೆ ಕೊಟ್ಟ ಸ್ವಾಸ್ತ್ಯದ ದೇಶದಲ್ಲಿ ಮಾಡಿದ ಹಾಗೆ ಅವರ ಬದಲಾಗಿ ವಾಸಮಾಡಿದರು.
ನಾವು ಕಾದೇಶ್ಬರ್ನೆಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳ ವನ್ನು ದಾಟಿದ ವರೆಗೆ ಹೋದ ಕಾಲವು ಮೂವ ತ್ತೆಂಟು ವರುಷ; ಕರ್ತನು ಅವರಿಗೆ ಪ್ರಮಾಣಮಾಡಿದ ಪ್ರಕಾರ ಯುದ್ಧಸ್ಥರ ಸಂತತಿ ಎಲ್ಲಾ ಸೈನ್ಯದೊಳಗಿಂದ ಮುಗಿದುಹೋಗುವ ವರೆಗೆ ತಡವಾಯಿತು.
ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.
ಏಳಿರಿ, ಹೊರಡಿರಿ; ಅರ್ನೋನ್ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.
ಇದೇ ದಿವಸ ಆಕಾಶವೆಲ್ಲಾದರ ಕೆಳಗಿರುವ ಜನಾಂಗಗಳ ಮೇಲೆ ನಿನ್ನ ಹೆದರಿಕೆಯನ್ನೂ ನಿನ್ನ ಭಯವನ್ನೂ ಉಂಟು ಮಾಡಲಾರಂಭಿಸುತ್ತೇನೆ. ಅವರು ನಿನ್ನ ಸುದ್ದಿಯನ್ನು ಕೇಳಿ ನಿನಗೋಸ್ಕರ ನಡುಗಿ ಅಂಜುವರು.
ಕಾಲ್ನಡಿಗೆಯಾಗಿ ಹಾದು ಹೋಗುತ್ತೇನಷ್ಟೆ. ಸೇಯಾರಿನಲ್ಲಿ ವಾಸ ಮಾಡುವ ಏಸಾವನ ಮಕ್ಕಳೂ ಆರ್ನಲ್ಲಿ ವಾಸ ಮಾಡುವ ಮೋವಾಬ್ಯರೂ ನನಗೆ ಮಾಡಿದ ಹಾಗೆ ನಾನು ಯೊರ್ದನಿನ ಆಚೆಗೆ ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶಕ್ಕೆ ಹೋಗುವ ವರೆಗೆ ನನಗೆ ಮಾಡು ಅಂದೆನು.
ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.
ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.
ಅರ್ನೋನಿನ ತೀರದಲ್ಲಿರುವ ಅರೋ ಯೇರ್ ಮತ್ತು ಆ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನ ವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ; ನಮ್ಮ ದೇವರಾದ ಕರ್ತನು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದನು.