ನಿಮ್ಮ ಮನಸ್ಸು ಸಿದ್ದವಾಗಿದೆ ಎಂಬದು ನನಗೆ ಗೊತ್ತುಂಟು; ಒಂದು ವರುಷದ ಹಿಂದೆ ಅಕಾಯದವರು ಸಹಾಯಮಾಡುವದಕ್ಕೆ ಸಿದ್ಧವಾಗಿ ದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ; ನಿಮ್ಮ ಆಸಕ್ತಿಯು ಬಹು ಜನರನ್ನು ಪ್ರೇರೇಪಿಸಿತು.
ಸಿದ್ಧವಾಗಿರದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬದನ್ನು ಕಾಣುವಾಗ ನಮಗೆ ಇಂಥ ಭರವಸವಿದ್ದದ್ದಕ್ಕೆ ನಾವು ನಾಚಿಕೆಪಡಬೇಕಾದೀತು;
ಹೀಗಿರಲಾಗಿ ನೀವು ಕೊಡುತ್ತೇವೆಂದು ಮೊದಲು ಹೇಳಿದ ಔದಾರ್ಯ ದ್ರವ್ಯವನ್ನು ಸಿದ್ಧಪಡಿಸಬೇಕೆಂದು ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಅವರನ್ನು ಪ್ರೋತ್ಸಾಹಿಸುವದು ಅವಶ್ಯವೆಂದು ನನಗೆ ತೋಚಿತು, ಹೀಗೆ ಅದು ಸಂಕೋಚದಿಂದ ಬಾರದೆ ಔದಾರ್ಯವಾಗಿಯೇ ಸಿದ್ಧವಾಗುವದು.
ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ.
ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ.
ಈ ಸಹಾಯ ದಿಂದ ತೋರಿಬಂದ ನಿಮ್ಮ ಯೋಗ್ಯ ಭಾವವನ್ನು ಅವರು ನೋಡುವಾಗ ನೀವು ಕ್ರಿಸ್ತನ ಸುವಾರ್ತೆಗೆ ವಿಧೇಯರಾದದ್ದರಿಂದಲೂ ತಮಗೂ ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡಿದ್ದರಿಂದಲೂ ದೇವರನ್ನು ಕೊಂಡಾಡುವರು.