ಈ ಗುಡಾರವಾಗಿರುವ ಮಣ್ಣಿನ ನಮ್ಮ ಮನೆಯು (ಶರೀರವು) ತೆಗೆದುಹಾಕಲ್ಪ ಟ್ಟರೆ ಕೈಗಳಿಂದ ಮಾಡದಿರುವಂಥಾದ್ದೂ ಪರಲೋಕ ಗಳಲ್ಲಿ ನಿತ್ಯವಾಗಿರುವಂಥಾದ್ದೂ ಆಗಿರುವ ದೇವರ ಕಟ್ಟಡವು ನಮಗಿದೆಯೆಂದು ನಾವು ಬಲ್ಲೆವು.
ಯಾಕಂದರೆ ಈ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಇದು ಕಳಚಿಹೋಗಬೇಕೆಂತಲ್ಲ; ಆದರೆ ಜೀವವು ಮರ್ತ್ಯ ವನ್ನು ನುಂಗುವಂತೆ ಅದನ್ನು ಮೇಲೆ ಧರಿಸಿ ಕೊಳ್ಳಬೇಕೆಂದು ನಾವು ಇಚ್ಚಿಸುತ್ತೇವೆ.
ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿ ಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹೊಗಳಿಕೊಳ್ಳದೆ ತೋರಿಕೆಯ ವಿಷಯದಲ್ಲಿ ಮಾತ್ರ ಹೊಗಳಿಕೊಳ್ಳುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳು ವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯ ದಲ್ಲಿ ಹೆಚ್ಚಳಪಡುವದಕ್ಕೆ ನಿಮಗೆ
ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವದಿಲ್ಲ; ಹೌದು, ಕ್ರಿಸ್ತನನ್ನು ಕೂಡ ನಾವು ಶರೀರಸಂಬಂಧವಾಗಿ ತಿಳಿದಿದ್ದರೂ ಇನ್ನು ಮುಂದೆ ಆತನನ್ನು ಹಾಗೆ ಎಂದಿಗೂ ತಿಳುಕೊಳ್ಳುವದಿಲ್ಲ,
ಅದೇನಂದರೆ, ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೆ ಲೋಕವನ್ನು ಕ್ರಿಸ್ತನಲ್ಲಿ ತನಗೆ ಸಮಾಧಾನಪಡಿಸಿ ಕೊಳ್ಳುತ್ತಿದ್ದನೆಂಬದೇ; ಆ ಸಮಾಧಾನದ ವಾಕ್ಯವನ್ನು ನಮ್ಮ ವಶಕ್ಕೆ ಕೊಟ್ಟಿದ್ದಾನೆ.
ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.