ಆಗ ಅವನು ಯೆಹೋಷಾಫಾಟನಿಗೆ -- ನೀನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ ಅಂದನು. ಯೆಹೋಷಾಫಾಟನು ಇಸ್ರಾ ಯೇಲಿನ ಅರಸನಿಗೆ--ನಿನ್ನ ಹಾಗೆಯೇ ನಾನೂ ನಿನ್ನ ಜನರ ಹಾಗೆಯೇ ನನ್ನ ಜನರೂ ನಿನ್ನ ಕುದುರೆಗಳ ಹಾಗೆಯೇ ನನ್ನ ಕುದುರೆಗಳೂ ಇದ್ದೇವೆ ಅಂದನು.
ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ--ನಾನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬೇಡವೋ ಎಂದು ಅವರನ್ನು ಕೇಳಿದನು. ಅದಕ್ಕವರು--ಹೋಗು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ -- ನಾವು ಕರ್ತನನ್ನು ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬ ಇನ್ನೊಬ್ಬನಿದ್ದಾನೆ; ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಯಾಕಂದರೆ ಅವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನು ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಹೇಳದಿರಲಿ ಅಂದನು.
ಆದರೆ ಇಸ್ರಾಯೇಲಿನ ಅರಸನೂ ಯೆಹೂದದ ಅರಸನಾದ ಯೆಹೂಷಾಫಾಟನೂ ವಸ್ತ್ರಗಳನ್ನು ಧರಿಸಿ ಕೊಂಡು ಸಮಾರ್ಯದ ಬಾಗಲ ಮುಂದಣ ಕಣದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿದ್ದರು; ಸಕಲ ಪ್ರವಾದಿ ಗಳೂ ಅವರ ಮುಂದೆ ಪ್ರವಾದಿಸಿದರು.
ಆದರೆ ವಿಾಕಾಯೆಹುನನ್ನು ಕರೆಯಲು ಹೋದ ದೂತನು ಅವನಿಗೆ--ಇಗೋ, ಪ್ರವಾದಿಗಳ ವಾಕ್ಯಗಳು ಒಂದೇ ಬಾಯಿಂದ ಅರಸನಿಗೆ ಒಳ್ಳೇದನ್ನೇ ಪ್ರಕಟಿಸುತ್ತವೆ; ನಿನ್ನ ವಾಕ್ಯವು ಅವರಲ್ಲಿರುವ ಒಬ್ಬನ ವಾಕ್ಯದ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.
ಅರಸನು ಅವನಿಗೆ--ವಿಾಕಾಯೆ ಹುವೇ, ನಾವು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆಹೋಗಬಹುದೋ ಹೋಗಬಾ ರದೋ ಅಂದನು. ಇವನು ಪ್ರತ್ಯುತ್ತರವಾಗಿ--ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
ಅದಕ್ಕ ವನು ಕಾಯುವವನಿಲ್ಲದ ಕುರಿಗಳ ಹಾಗೆಯೇ ಬೆಟ್ಟ ಗಳ ಮೇಲೆ ಚದರಿಸಲ್ಪಟ್ಟ ಸಮಸ್ತ ಇಸ್ರಾಯೇಲನ್ನು ನೋಡಿದೆನು. ಆಗ ಕರ್ತನು--ಇವರಿಗೆ ಯಜಮಾ ನನು ಇಲ್ಲದೆ ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂತಿರಿಗಿ ಹೋಗಲಿ ಅಂದನು.
ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು.
ಅದಕ್ಕೆ ಆತನು--ನೀನು ಅವ ನನ್ನು ಮರುಳುಗೊಳಿಸುವಿ ಮತ್ತು ಜಯಿಸುವಿ. ನೀನು ಹೋಗಿ ಹಾಗೆ ಮಾಡು ಅಂದನು. ಆದದರಿಂದ ಇಗೋ, ಈಗ ಕರ್ತನು ಈ ಎಲ್ಲಾ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ; ಇದ ಲ್ಲದೆ ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು.
ಆಗ ಕೆನಾನನ ಮಗನಾದ ಚಿದ್ಕೀಯನು ಸವಿಾ ಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು--ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಹೋಯಿತು ಅಂದನು.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ--ನಾನು ನನ್ನನ್ನು ಮರೆಮಾಡಿ ಯುದ್ಧದೊಳಗೆ ಪ್ರವೇಶಿಸುವೆನು; ಆದರೆ ನೀನು ನಿನ್ನ ವಸ್ತ್ರಗಳನ್ನು ಧರಿಸಿಕೊಂಡಿರು ಅಂದನು. ಹಾಗೆಯೇ ಇಸ್ರಾಯೇಲಿನ ಅರಸನು ತನ್ನನ್ನು ಮರೆ ಮಾಡಿ ಯುದ್ಧಕ್ಕೆ ಹೋದನು.
ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳ ಮೂವತ್ತೈರಡು ಮಂದಿ ಪ್ರಧಾನರಿಗೆ--ನೀವು ಹಿರಿಕಿರಿ ಯರ ಸಂಗಡ ಯುದ್ಧ ಮಾಡದೆ ಇಸ್ರಾಯೇಲಿನ ಅರಸನ ಸಂಗಡಲೇ ಯುದ್ಧಮಾಡಿರಿ ಎಂದು ಆಜ್ಞಾಪಿ ಸಿದನು.
ಆದದರಿಂದ ರಥಾಧಿಪತಿಗಳು ಯೆಹೋ ಷಾಫಾಟನನ್ನು ನೋಡಿದಾಗ--ನಿಶ್ಚಯವಾಗಿ ಇವನು ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ತಿರುಗಿಕೊಂಡರು; ಆಗ ಯೆಹೋಷಾಫಾಟನು ಕೂಗಿಕೊಂಡನು.
ಆದರೆ ಒಬ್ಬ ಮನುಷ್ಯನು ಗುರಿಯಿಡದೆ ಬಿಲ್ಲಿಗೆ ಬಾಣವನ್ನೇರಿಸಿ ಇಸ್ರಾಯೇಲಿನ ಅರಸನನ್ನು ಕವಚದ ಸಂದುಗಳಲ್ಲಿ ಹೊಡೆದನು; ಆದದರಿಂದ ಅವನು ತನ್ನ ರಥನಡಿಸುವವನಿಗೆ--ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇ ಕಡೆಗೆ ತಕ್ಕೊಂಡು ಹೋಗು. ಯಾಕಂದರೆ ನಾನು ಗಾಯಗೊಂಡಿದ್ದೇನೆ ಅಂದನು.
ಅವನು ತನ್ನ ತಂದೆಯಾದ ಆಸನ ಎಲ್ಲಾ ಮಾರ್ಗ ಗಳಲ್ಲಿ ನಡೆದು ಅದನ್ನು ಬಿಟ್ಟು ತೊಲಗದೆ ಕರ್ತನ ಸಮ್ಮುಖದಲ್ಲಿ ಯಥಾರ್ಥವಾದದ್ದನ್ನು ಮಾಡಿದನು. ಆದರೂ ಉನ್ನತ ಸ್ಥಳಗಳನ್ನು ತೆಗೆದುಹಾಕಲಿಲ್ಲ; ಜನರು ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು.
ಯೆಹೋ ಷಾಫಾಟನು ಬಂಗಾರಕ್ಕೋಸ್ಕರ ಓಫೀರಿಗೆ ಹೋಗು ವದಕ್ಕೆ ತಾರ್ಷೀಷಿನ ಹಡಗುಗಳನ್ನು ಮಾಡಿಸಿದನು. ಆದರೆ ಅವು ಹೋಗಲಿಲ್ಲ; ಯಾಕಂದರೆ ಆ ಹಡಗು ಗಳು ಎಚ್ಯೋನ್ಗೆಬೆರಿನ ಬಳಿಯಲ್ಲಿ ಒಡೆದುಹೋದವು.
ಅಹಾಬನ ಮಗನಾದ ಅಹಜ್ಯನು ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೇಳನೆ ವರುಷ ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲಾ ರಂಭಿಸಿ ಎರಡು ವರುಷ ಆಳಿದನು. ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನುಮಾಡಿ