English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Zechariah Chapters

Zechariah 12 Verses

1 ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ--
2 ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ
3 ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.
4 ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು.
5 ಆಗ ಯೆಹೂದದ ದೊರೆ ಗಳು ತಮ್ಮ ಹೃದಯದಲ್ಲಿ--ಯೆರೂಸಲೇಮಿನ ನಿವಾಸಿ ಗಳು ಅವರ ದೇವರಾದ ಸೈನ್ಯಗಳ ಕರ್ತನಲ್ಲಿ ನಮಗೆ ಬಲವಾಗಿದ್ದಾರೆಂದು ಅವರು ಅಂದುಕೊಳ್ಳುವರು.
6 ಆ ದಿನದಲ್ಲಿ ನಾನು ಯೆಹೂದದ ದೊರೆಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ ಸಿವುಡುಗಳಲ್ಲಿರುವ ಬೆಂಕಿಯ ಕೊಳ್ಳಿಯ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ ಎಡಗಡೆ ಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನು ನುಂಗಿ ಬಿಡುವರು; ಯೆರೂಸಲೇಮು ತಿರುಗಿ ತನ್ನ ಸ್ಥಳದಲ್ಲಿ, ಯೆರೂಸಲೇಮಿನಲ್ಲಿಯೇ ವಾಸಿಸುವದು.
7 ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.
8 ಆ ದಿನದಲ್ಲಿ ಕರ್ತನು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವನು; ಆ ದಿನದಲ್ಲಿ ಅವರೊಳಗೆ ಬಲಹೀನನು ದಾವೀದನ ಹಾಗೆಯೂ ದಾವೀದನ ಮನೆತನದವರು ದೇವರ ಹಾಗೆಯೂ ಅಂದರೆ ಅವರ ಮುಂದೆ ಕರ್ತನ ದೂತನ ಹಾಗೆಯೂ ಇರುವರು.
9 ಆ ದಿನದಲ್ಲಿ ಆಗುವದೇ ನಂದರೆ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶ ಮಾಡುವದಕ್ಕೆ ನಾನು ಹುಡುಕುವೆನು.
10 ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.
11 ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೊನಿನ ಗೋಳಾಟದ ಹಾಗೆ ಆ ದಿನ ದಲ್ಲಿ ಯೆರೂಸಲೇಮಿನೊಳಗೆ ಮಹಾಗೋಳಾಟವಿ ರುವದು.
12 ದೇಶವು ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾಗಿ ಗೋಳಾಡುವದು; ದಾವೀದನ ಮನೆಯ ಗೋತ್ರವು ಪ್ರತ್ಯೇಕ ಅವರ ಹೆಂಡತಿಯರು ಪ್ರತ್ಯೇಕ; ನಾತಾನನ ಮನೆತನದ ಗೋತ್ರವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ.
13 ಲೇವಿಯರ ಮನೆತ ನದ ಗೋತ್ರವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮಿಯನ ಗೋತ್ರವು ಪ್ರತ್ಯೇಕ, ಅವರ ಹೆಂಡತಿ ಯರು ಪ್ರತ್ಯೇಕ.
14 ಉಳಿದ ಗೋತ್ರಗ ಳೆಲ್ಲಾ ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾ ಗಿಯೂ ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು.
×

Alert

×