2
|
ತನ್ನ ಬಾಯಿಯ ಮುದ್ದುಗಳಿಂದ ನನಗೆ ಮುದ್ದಿ ಡಲಿ; ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ. |
3
|
ನಿನ್ನ ಒಳ್ಳೇ ತೈಲಗಳ ಪರಿಮಳದಂತೆ ನಿನ್ನ ಹೆಸರು ಹೊಯ್ಯಲ್ಪಟ್ಟ ತೈಲವಾಗಿದೆ; ಆದದರಿಂದ ಕನ್ನಿಕೆಯರು ನಿನ್ನನ್ನು ಪ್ರೀತಿಮಾಡುತ್ತಾರೆ. |
4
|
ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ. |
5
|
ನಾನು ಕಪ್ಪಾದವಳು; ಆದರೂ ಓ ಯೆರೂಸ ಲೇಮಿನ ಕುಮಾರ್ತೆಯರೇ, ಕೆದಾರಿನ ಗುಡಾರಗಳ ಹಾಗೆಯೂ ಸೊಲೊಮೋನನ ತೆರೆಗಳ ಹಾಗೆಯೂ ಸುಂದರಿಯಾಗಿದ್ದೇನೆ. |
6
|
ನನ್ನನ್ನು ನೋಡಬೇಡಿರಿ; ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ; ನನ್ನ ತಾಯಿಯ ಮಕ್ಕಳು ನನ್ನ ಮೇಲೆ ಕೋಪಗೊಂಡು ದ್ರಾಕ್ಷೇ ತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ನನ್ನ ಸ್ವಂತ ದ್ರಾಕ್ಷೇ ತೋಟವನ್ನು ನಾನು ಕಾಯಲಿಲ್ಲ. |
7
|
ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸಿ ಮಧ್ಯಾಹ್ನದಲ್ಲಿ ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ ಎಂದು ನನಗೆ ತಿಳಿಸು. ನಾನು ನಿನ್ನ ಜೊತೆಗಾ ರರ ಮಂದೆಗಳ ಬಳಿಯಲ್ಲಿ ಪರಕೀಯಳ ಹಾಗೆ ಇರುವದೇಕೆ? |
8
|
ಓ ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನೀನು ತಿಳಿಯದೆ ಇದ್ದರೆ ನೀನು ಮಂದೆಯ ಜಾಡೆಯನ್ನು ಹಿಡಿದು ಹೊರಟುಹೋಗಿ ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು. |
9
|
ಓ ನನ್ನ ಪ್ರಿಯಳೇ, ಫರೋಹನ ರಥಗಳಲ್ಲಿರುವ ಕುದುರೆಗಳ ಗುಂಪಿಗೆ ನಿನ್ನನ್ನು ಹೋಲಿಸಿದ್ದೇನೆ. |
10
|
ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ ಕೊರಳು ಕಂಠಮಾಲೆಗಳಿಂದಲೂ ರಮ್ಯವಾಗಿವೆ. |
11
|
ನಾವು ನಿನ ಗೋಸ್ಕರ ಬಂಗಾರದ ಅಂಚುಗಳನ್ನು ಬೆಳ್ಳಿಯ ಕುಚ್ಚುಗಳೊಂದಿಗೆ ಮಾಡುವೆವು. |
12
|
ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ ನನ್ನ ಜಟಾಮಾಂಸಿಯು ಅದರ ವಾಸನೆಯನ್ನು ಬಿಡುತ್ತದೆ. |
13
|
ನನ್ನ ಅತಿಪ್ರಿಯನು ನನಗೆ ಬೋಳದ ಗಡ್ಡೆಯ ಹಾಗೆ ಇರುವನು; ರಾತ್ರಿಯೆಲ್ಲಾ ನನ್ನ ಸ್ತನಗಳ ಮಧ್ಯದಲ್ಲಿ ಮಲಗುವನು. |
14
|
ಏನ್ಗೆದಿಯ ದ್ರಾಕ್ಷೇ ತೋಟ ಗಳಲ್ಲಿರುವ ಗೋರಂಟೆಯ ಪೂಗೊಂಚಲಿನಂತೆ ನನ್ನ ಪ್ರಿಯನು ನನಗೆ ಇರುವನು. |
15
|
ಇಗೋ, ನನ್ನ ಪ್ರಿಯಳೇ, ನೀನು ಸೌಂದರ್ಯ ವಂತೆಯು, ಇಗೋ, ನೀನು ಸೌಂದರ್ಯವಂತೆಯು ನಿನಗೆ ಪಾರಿವಾಳದ ಕಣ್ಣುಗಳಿವೆ. |
16
|
ನನ್ನ ಪ್ರಿಯನೇ, ಇಗೋ, ನೀನು ಸೌಂದರ್ಯ ವಂತನು; ಹೌದು, ರಮ್ಯವಾದವನು; ನಮ್ಮ ಹಾಸಿಗೆ ಹಸುರಾಗಿದೆ. |
17
|
ನಮ್ಮ ಮನೆಯ ತೊಲೆಗಳು ದೇವದಾರು ಮರಗಳು, ನಮ್ಮ ಜಂತೆಗಳು ತುರಾಯಿ ಗಿಡಗಳು. |
Song-of-Solomon 1:11 Kannada Language Bible Words basic statistical display
COMING SOON ...