ಆದರೂ ಆದಾಮನಿಂದ ಮೋಶೆಯವರೆಗೂ ಮರಣದ ಆಳಿಕೆಯು ನಡೆಯುತ್ತಿತ್ತು. ಆದಾಮನ ಆ ಅತಿಕ್ರಮಣಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಿಗೆ ಸೂಚನೆ ಯಾಗಿದ್ದಾನೆ.
ಆದರೆ ಆ ಅಪರಾಧವು ಇದ್ದಂತೆ ಉಚಿತವಾದ ದಾನವು ಇರುವದಿಲ್ಲ; ಹೇಗಂದರೆ ಆ ಒಬ್ಬನ ಅಪ ರಾಧದಿಂದ ಎಲ್ಲಾ ಮನುಷ್ಯರು ಸತ್ತವರಾಗಿದ್ದರೆ ದೇವರ ಕೃಪೆಯೂ ಯೇಸು ಕ್ರಿಸ್ತನೆಂಬ ಈ ಒಬ್ಬ ಮನುಷ್ಯನ ಕೃಪೆಯಿಂದಾದ ದಾನವೂ ಅನೇಕರಿಗೆ ಹೇರಳವಾಗಿ ದೊರೆಯುವದು ಮತ್ತೂ ನಿಶ್ಚಯವಲ್ಲವೇ.
ಇದಲ್ಲದೆ ಪಾಪಮಾಡಿದ ಆ ಒಬ್ಬನಿಂದಲೇ ಬಂದಂತೆ ಈ ದಾನವು ಬರಲಿಲ್ಲ; ಯಾಕಂದರೆ ಒಬ್ಬ ಮನುಷ್ಯನ ಅಪರಾಧದ ದೆಸೆಯಿಂದಲೇ ತೀರ್ಪು ಉಂಟಾಯಿತು. ಆದರೆ ಉಚಿತವಾದ ದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ನಿರ್ಣಯಿಸುವಂಥದ್ದಾಗಿದೆ.
ಒಬ್ಬನ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಆಳಿದ್ದರೆ ಕೃಪೆಯನ್ನೂ ನೀತಿಯ ದಾನವನ್ನೂ ಹೇರಳವಾಗಿ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬನ ಮೂಲಕ ಜೀವದಲ್ಲಿ ಆಳುವದು ಮತ್ತೂ ನಿಶ್ಚಯವಲ್ಲವೇ).
ಹೀಗಿರಲಾಗಿ ಒಬ್ಬನ ಅಪರಾಧದಿಂದಲೇ ಎಲ್ಲಾ ಮನುಷ್ಯರಿಗೆ ಅಪರಾಧ ನಿರ್ಣಯವು ಹೇಗೆ ಬಂತೋ ಹಾಗೆಯೇ ಒಬ್ಬನ ನೀತಿಯಿಂದಲೇ ಉಚಿತಾರ್ಥವಾದ ದಾನವು ಎಲ್ಲಾ ಮನುಷ್ಯರಿಗೆ ಜೀವದ ನೀತಿ ನಿರ್ಣಯಕ್ಕಾಗಿ ಬಂದಿತು.
ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.